ಮನೆಯಲ್ಲಿ ಕಳ್ಳತನ: ವಿದೇಶ ಪ್ರವಾಸದಲ್ಲಿರುವ ಶಿಲ್ಪಾ ಶೆಟ್ಟಿಗೆ ಶಾಕ್

Public TV
1 Min Read

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕಳ್ಳರು ಶಾಕ್ ನೀಡಿದ್ದಾರೆ. ವಿದೇಶ ಪ್ರವಾಸದಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವ ಶಿಲ್ಪಾ ಶೆಟ್ಟಿಗೆ ಕಳ್ಳರು ನಿದ್ದೆಗೆಡಿಸಿದ್ದಾರೆ.  ಮುಂಬೈನಲ್ಲಿರುವ (Mumbai) ಶಿಲ್ಪಾ ಶೆಟ್ಟಿ ನಿವಾಸಕ್ಕೆ ನುಗ್ಗಿದ ಕಳ್ಳರು (Theft) ಹಲವು ವಸ್ತುಗಳನ್ನು ತಗೆದುಕೊಂಡು ಪರಾರಿಯಾಗಿದ್ದಾರೆ.

ಸದ್ಯ ಶಿಲ್ಪಾ ಶೆಟ್ಟಿ ಇಟಲಿ ಪ್ರವಾಸದಲ್ಲಿದ್ದಾರೆ. ಮೊನ್ನೆಯಷ್ಟೇ ತಾವು ಇಟಲಿ ಪ್ರವಾಸದಲ್ಲಿ ಇರುವ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಿಕಿನಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಶಿಲ್ಪಾ ಶೆಟ್ಟಿ ಮತ್ತು ಕುಟುಂಬ ವಿದೇಶದಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡ ಕಳ್ಳರು ಮನೆಗೆ ನುಗ್ಗಿ ವಸ್ತುಗಳನ್ನು ದೋಚಿದ್ದಾರೆ. ಇದನ್ನೂ ಓದಿ:ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

ಮುಂಬೈನ ಜುಹುವಿನಲ್ಲಿ (Juhu)  ಐಷಾರಾಮಿ ಮನೆ ಹೊಂದಿದ್ದಾರೆ ಶಿಲ್ಪಾ. ಅದೇ ಮನೆಯಲ್ಲೇ ಅವರು ಕುಟುಂಬ ಸಮೇತ ವಾಸವಿದ್ದಾರೆ. ಈ ಮನೆಯನ್ನು ಹೊಕ್ಕ ಕಳ್ಳರು ಬೆಲೆ ಬಾಳುವ ವಸ್ತುಗಳೊಂದಿಗೆ ಪರಾರಿ ಆಗಿದ್ದಾರೆ.  ಈ ಕುರಿತು ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ಕಡೆ ಮನೆ ಕಳ್ಳತನವಾಗಿದ್ದರೆ ಮತ್ತೊಂದು ಕಡೆ ಮೊನೊಕಿನಿ ತೊಟ್ಟು ಇಟಲಿ (Italy) ನೆಲದ ಮಹತ್ವವನ್ನು ಬರೆದಿರುವ ಶಿಲ್ಪಾ ಶೆಟ್ಟಿ, ‘ಇಟಲಿ ನೆಲವು ದೈವಿಕ ಸ್ಥಳವಾಗಿದೆ. 3000ದಷ್ಟು ಹಳೆಯದಾದ ಪವಿತ್ರ ನೀರು, ಭೂಮಿಯ ಆಳದಿಂದ ಚಿಮ್ಮುವ ಬಿಸಿ ನೀರಿನ ಬುಗ್ಗೆಗಳು. ಚಿಮ್ಮಿ ಬರುವ ನೀರಿನಲ್ಲಿವೆ ಆರೋಗ್ಯದ ಪ್ರಯೋಜನಗಳು. ಈ ನೆಲವನ್ನು ಸ್ಪರ್ಶಿಸುವವರೇ ಧನ್ಯ’ ಎನ್ನುವಂತೆ ಆ ನೆಲದ ವರ್ಣನೆಯನ್ನು ಮಾಡಿದ್ದಾರೆ. ಇದರ ಜೊತೆ ರಜೆಯ ಮೂಡ್ ನಲ್ಲೂ ಅವರು ಇದ್ದಾರೆ.

Share This Article