Davanagere | ವಿಎ ಪರೀಕ್ಷೆ – ಬುರ್ಕಾ ತೆಗೆದು ಪರೀಕ್ಷೆ ಬರೆಯಲು ಯುವತಿ ನಕಾರ

Public TV
1 Min Read

ದಾವಣಗೆರೆ: ವಿಲೇಜ್‌ ಅಕೌಂಟೆಂಟ್‌ ಪರೀಕ್ಷೆಗೆ (VA Exam) ಆಗಮಿಸಿದ್ದ ವೇಳೆ ಯುವತಿಯೊಬ್ಬಳು ಬುರ್ಕಾ ತೆಗೆದು ಪರೀಕ್ಷೆ ಬರೆಯಲು ನಕಾರ ಮಾಡಿದ ಘಟನೆ ದಾವಣಗೆರೆ ನಗರದ (Davanagere) ಎಸ್‌ಎಸ್ ಲೇಔಟ್‌ನಲ್ಲಿನ ರಾಘವೇಂದ್ರ ಕಾಲೇಜ್‌ನಲ್ಲಿ ನಡೆದಿದೆ.

ಪರೀಕ್ಷಾ ನಿಯಮಗಳ (Exams Rules) ಪ್ರಕಾರ ಬುರ್ಕಾ ಕೂಡ ಧರಿಸುವಂತಿರಲಿಲ್ಲ. ಆದ್ರೆ ಯುವತಿ ಬುರ್ಕಾ ಧರಿಸಿ ಬಂದಿದ್ದಳು, ಹೀಗಾಗಿ ಪರೀಕ್ಷೆ ಕೊಠಡಿಗೆ ಯುವತಿಗೆ ಅನುಮತಿ ನೀಡಿಲ್ಲ. ಏನೇ ಮಾಡಿದರೂ ಯುವತಿ ಬುರ್ಕಾ ಧರಿಸಿ ಪರೀಕ್ಷೆ ಬರೆಯಲು ಪಟ್ಟು ಹಿಡಿದಿದ್ದಳು. ಈ ವೇಳೆ ಕುಟುಂಬಸ್ಥರು ಕೂಡ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು. ಇದನ್ನೂ ಓದಿ: ವರ್ಷಕ್ಕೊಮ್ಮೆ ದರ್ಶನ ನೀಡುವ ಕಾಫಿನಾಡ ʻಬಿಂಡಿಗ ದೇವೀರಮ್ಮʼ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ!

ಯಾವುದೇ ಕಾರಣಕ್ಕೂ ಬುರ್ಕಾ ತೆಗೆದು ಪರೀಕ್ಷೆ ಬರೆಯುವುದಿಲ್ಲವೆಂದು ಯುವತಿ ಹಠ ಹಿಡಿದಿದ್ದಳು. ಯುವತಿಯ ಜೊತೆಗೆ ಪೋಷಕರೂ ಅದೇ ವಾದ ಹಿಡಿದಿದ್ದರು. ಕೊನೆಗೆ ಎಎಸ್‌ಪಿ ವಿಜಯಕುಮಾರ್ ಭೇಟಿ ನೀಡಿ, ಯುವತಿಗೆ ಪರೀಕ್ಷಾ ನಿಯಮಗಳನ್ನ ತಿಳಿಸಿ ಯುವತಿಯ ಮನವೊಲಿಸಲು ಯಶಸ್ವಿಯಾದರು. ನಂತರ ಯುವತಿ ಬುರ್ಕಾ ತೆಗೆದು ಪರೀಕ್ಷೆ ಬರೆದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 60ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ಸಂಸದ ಸುಧಾಕರ್‌ ಚರ್ಚೆ

Share This Article