2,000 ಜನ ವಾಸಿಸುವ ಇಡೀ ಗ್ರಾಮದ ಮೇಲೆ ವಕ್ಫ್ ವಕ್ರದೃಷ್ಟಿ

Public TV
1 Min Read

ಬೀದರ್: ರೈತರ ಜಮೀನಾಯ್ತು, ಮಠ, ಮಂದಿರವಾಯ್ತು ಇದೀಗ ಸರ್ಕಾರಿ ಶಾಲೆ ಹಾಗೂ ಗ್ರಾಮಸ್ಥರ ಮನೆಗಳ ಮೇಲೆಯೂ ವಕ್ಫ್ ವಕ್ರದೃಷ್ಟಿ ಬಿದಿದ್ದು ಇಡೀ ಗ್ರಾಮಕ್ಕೆ ಗ್ರಾಮವೇ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸುಪರ್ದಿಗೆ ಸೆರಿಸಲಾಗಿದೆ.

ಬೀದರ್ (Bidar) ತಾಲೂಕಿನ ಧರ್ಮಾಪುರ (Dharmapura) ಗ್ರಾಮದ 2024ರ ಪಹಣಿ ಕಂಡು ಗ್ರಾಮಸ್ಥರು ತಬ್ಬಿಬ್ಬಾಗಿದ್ದು ಗ್ರಾಮದ ಸರ್ಕಾರಿ ಜಮೀನಿನ ಸರ್ವೆ ನಂಬರ್ 87ರ 26 ಎಕರೆ ಜಾಗಕ್ಕೆ ವಕ್ಫ್ ಸೇರಿದ್ದು ಜಾಗಕ್ಕೆ ನೀಷೇದ ಮಾಡಲಾಗಿದೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ: ಡಿಕೆಶಿ

ಸರ್ಕಾರಿ ಶಾಲೆ, ಮನೆಗಳು, ದೇವಸ್ಥಾನ, ಅಂಗನವಾಡಿಗಳು ಸೇರಿದಂತೆ ಇಡೀ ಗ್ರಾಮವನ್ನು ಪಹಣಿಯಲ್ಲಿ ವಕ್ಫ್ ಬೋರ್ಡ್‌ಗೆ ಸೇರಿಸಲಾಗಿದ್ದು ವಕ್ಫ್ ರಾದ್ಧಾಂತಕ್ಕೆ ರೈತರಷ್ಟೇ ಅಲ್ಲ, ಗ್ರಾಮಗಳ ನಿವಾಸಿಗಳು ಕಂಗಾಲಾಗಿದ್ದಾರೆ.

2013-14ರಿಂದ ಈಚೆಗೆ 26 ಎಕರೆ ಪ್ರದೇಶದ ಗ್ರಾಮದ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೆಸರು ಸೇರಿಸಲಾಗಿದ್ದು 200 ಕುಟುಂಬಗಳ 2000ಕ್ಕೂ ಅಧಿಕ ಜನರು ಬೀದಿಗೆ ಬಿದ್ದಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದೆ ನೌಟಂಕಿ ಕಾರ್ಯಕ್ರಮ ಆಯೋಜನೆ – ಗ್ರಾಮ ಮುಖ್ಯಸ್ಥನ ಪ್ರತಿನಿಧಿಗೆ ಎಂಜಲು ನೆಕ್ಕಿಸಿದ ಪೊಲೀಸರು

ಜಮೀರ್ ಖಾನ್ (Zameer Ahmed Khan) ಈಗೀಗ ನಿಜಾಮನಾಗಿದ್ದು, ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದರೂ ಇನ್ನೂ ಪಹಣಿ ಬದಲಾವಣೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವುದಿಲ್ಲ, ಮನೆಗಾಗಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಬಡವರ ವಿರೋಧಿಗಳು – ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ರಾಮಲಿಂಗಾರೆಡ್ಡಿ
Share This Article