ಮಳೆಗಾಗಿ ವಿಚಿತ್ರವಾದ ಆಚರಣೆ- ಸ್ಮಶಾನದ ಗೋರಿಗಳಿಗೆ ನೀರುಣಿಸಿದ ಗ್ರಾಮಸ್ಥರು

Public TV
1 Min Read

ವಿಜಯಪುರ: ಈ ಬಾರಿ ರಾಜ್ಯದೆಲ್ಲೆಡೆ ಮುಂಗಾರು ಮಳೆ (Monsoon Rain) ಕೈ ಕೊಟ್ಟಿದೆ. ಅದರಂತೆ ಬಿಸಿಲನಾಡು ವಿಜಯಪುರ (Vijayapura) ಜಿಲ್ಲೆಯಲ್ಲಿ ಒಂದು ಮಳೆ (Rain) ಆಗದೆ ರೈತರು ಕಂಗಾಲಾಗಿದ್ದಾರೆ. ಅದಕ್ಕೆ ಎಲ್ಲೂ ಕಂಡರಿಯದ ವಿಚಿತ್ರವಾದ ಪ್ರಾರ್ಥನೆ ಮಾಡಿದ್ದಾರೆ.

ಹೌದು. ಮುಂಗಾರು ಮಳೆ ಇಲ್ಲದೆ ಬಿಸಿಲನಾಡು ವಿಜಯಪುರ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಭೂಮಿಯಲ್ಲಿ ಬಿತ್ತಿದ ರೈತರು ಮತ್ತು ಬಿತ್ತದೆ ಇರುವವರು ಪ್ರತಿದಿನ ಮುಗಿಲಿನತ್ತ ಮುಖಮಾಡಿ ಕುಳಿತಿದ್ದಾರೆ. ಕಾರಣ ಉತ್ತಮ ಮಳೆಗಾಗಿ ಗೋರಿ (Grave) ಗಳಲ್ಲಿ ನೀರನ್ನು ಗ್ರಾಮಸ್ಥರು ಹಾಕಿದ್ದಾರೆ. ಇದನ್ನೂ ಓದಿ: ವಿದೇಶ ಪ್ರವಾಸದಿಂದ ವಾಪಸ್ಸಾಗ್ತಿದ್ದಂತೆ ಮೋದಿ ಮಹತ್ವದ ಸಭೆ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿರುವ ಸ್ಮಶಾನದಲ್ಲಿರುವ ಗೋರಿಗಳಿಗೆ ಗ್ರಾಮಸ್ಥರು ನೀರಿನ ಟ್ಯಾಂಕರ್ ಸಮೇತ ತೆರಳಿದ್ದಾರೆ. ಟ್ಯಾಂಕರ್ ನಿಂದ ಗೋರಿಗಳನ್ನ ಅಗಿದು ಶವಗಳ ಬಾಯಿಗೆ ನೀರು ಹಾಕಿದ್ದಾರೆ. ಅಲ್ಲದೆ ವಾಗೀಶ ಹಿರೇಮಠ ಎಂಬವರು ಗೋರಿ ಮೇಲೆ ಕುಳಿತು ಕೈಯಲ್ಲಿ ಜಪ ಮಣಿ ಹಿಡಿದು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

ಸಾಮಾನ್ಯವಾಗಿ ಮಳೆಗಾಗಿ ಕಪ್ಪೆ ಮದುವೆ (Frog wedding), ಕತ್ತೆ ಮದುವೆ (Donkey Wedding) ಸೇರಿದಂತೆ ಅನೇಕ ರೀತಿಯಲ್ಲಿ ನಾನಾ ಪ್ರಾರ್ಥನೆ, ಆಚರಣೆಗಳು ನಡೆಯತ್ತವೆ. ಆದರೆ ಇದೇ ಮೊದಲ ಬಾರಿಗೆ ಇಂತಹ ವಿಚಿತ್ರ ಆಚರಣೆ ಬೆಳಕಿಗೆ ಬಂದಿದೆ. ಈ ರೀತಿ ಬರಗಾಲ ಬಿದ್ದಾಗಲೆಲ್ಲ ಗ್ರಾಮದ ಹಿರಿಯರು ಹಿಂದೆ ಕೂಡ ಮಾಡ್ತಿದ್ದರಂತೆ. ಆಗೆಲ್ಲ ಉತ್ತಮ ಮಳೆ ಆಗಿತ್ತಂತೆ. ಅದೇ ನಂಬಿಕೆಯಿಂದ ಈಗ ಗ್ರಾಮಸ್ಥರು ಈ ವಿಚಿತ್ರ ಆಚರಣೆ ಮಾಡಿದ್ದಾರೆ.

Share This Article