ಚಿಕ್ಕಬಳ್ಳಾಪುರ | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ – ನಿಟ್ಟುಸಿರುಬಿಟ್ಟ ಜನ

1 Min Read

ಚಿಕ್ಕಬಳ್ಳಾಪುರ: ‌ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಡಿ.13ರ ಶನಿವಾರ ರಾತ್ರಿ ಬೋನಿನಲ್ಲಿ ಚಿರತೆ ಸೆರೆಯಾಗಿರುವುದು (Leopard Capture) ಕಂಡುಬಂದಿದ್ದು, ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ (Bengaluru Rural) ದೊಡ್ಡಬಳ್ಳಾಪುರ ತಾಲ್ಲೂಕಿನ ಹಾರೋನಹಳ್ಳಿ ಗ್ರಾಮದಲ್ಲಿ ಚಿರತೆಯ ಉಪಟಳ ಹೆಚ್ಚಾಗಿತ್ತು. ಮೇಕೆ, ನಾಯಿಗಳ ಮೇಲೆ ದಾಳಿ ನಡೆಸಿ ಬಲಿ ಪಡೆದಿತ್ತು. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಇದನ್ನೂ ಓದಿ: ದಂತ ಕಳ್ಕೊಂಡು ಮಂಕಾಗಿದ್ದ ಭೀಮ ಫುಲ್ ಆಕ್ಟೀವ್

ಈ ಕುರಿತು ಗ್ರಾಮದ ಮುಖಂಡ, ಆರೂಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧ‌ರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಅರಣ್ಯ ಅಧಿಕಾರಿಗಳು ಶನಿವಾರ ಸಂಜೆಯ ವೇಳೆಗೆ ಬೋನ್ ಅಳವಡಿಸಿದ್ದರು. ಬೋನು ಇರಿಸಿದ ಒಂದೇ ದಿನಕ್ಕೆ ಚಿರತೆ ಬೋನಿಗೆ ಬಿದ್ದಿದೆ. ಇದನ್ನೂ ಓದಿ: ಮುಂಡಗೋಡಿನ ಕಾತೂರಿನಲ್ಲಿ ಆನೆ ಪ್ರತ್ಯಕ್ಷ; ಗಂಟೆಗಟ್ಟಲೇ ರಸ್ತೆ ಬಂದ್

Share This Article