ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೊಳಗಾದ ಬಿಗ್‍ಬಾಸ್ ಬೆಡಗಿ ಆಶಿತಾ ಚಂದ್ರಪ್ಪ

Public TV
2 Min Read

ಬೆಂಗಳೂರು: ಕನ್ನಡದ ಎರಡು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ಆಶಿತಾ ಚಂದ್ರಪ್ಪ ಎಲ್ಲರಿಗೂ ಚಿರಪರಿಚತರು. ನಟಿ ಆಶಿತಾ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋದಮೇಲಂತೂ ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಬಿಗ್‍ಬಾಸ್ ಮನೆಯಿಂದ ಹೊರಬಂದ ಆಶಿತಾ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆದ್ರೆ ಆಶಿತಾ ಇದೀಗ ಸೋಶಿಯಲ್ ಮೀಡಿಯಾಲ್ಲಿ ಟ್ರೆಂಡಿಂಗ್‍ನಲ್ಲಿದ್ದಾರೆ. ಪವನ್ ಕಲ್ಯಾಣ್ ಅಭಿನಯದ ‘ಅಜ್ಞಾತವಾಸಿ’ ಸಿನಿಮಾ ಪೋಸ್ಟರ್‍ನಿಂದಾಗಿ ಆಶಿತಾ ಈಗ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಸಿನಿಮಾ ಬಿಡುಗಡೆಯಾಗುವ ಒಂದು ದಿನ ಮೊದಲು ಆಶಿತಾ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಅಜ್ಞಾತವಾಸಿ ಚಿತ್ರದ ಪೋಸ್ಟರ್ ಹಾಕಿ, ‘ಇವರು ನಾಳೆ ಬರುತ್ತಿದ್ದಾರೆ… ಕಾಯೋಕೆ ಆಗ್ತಿಲ್ಲ..’ (“ದ ಮ್ಯಾನ್ ಅರೈವ್ಸ್ ಟುಮಾರೋ…ಕಾಂಟ್ ವೇಟ್”) ಅಂತಾ ಬರೆದುಕೊಂಡಿದ್ದರು.

ಅಜ್ಞಾತವಾಸಿ ಚಿತ್ರದ ಪೋಸ್ಟರ್ ಹಾಕುತ್ತಲೆ, ಕೆಲವರು ನಟಿಯ ಪೋಸ್ಟ್ ಮೇಲೆ ಹರಿತವಾದ ಕಮೆಂಟ್‍ಗಳನ್ನ ಹಾಕತೊಡಗಿದರು. ಕನ್ನಡದಲ್ಲಿ ಕೆಜಿಎಫ್, ಟಗರು ಮುಂತಾದ ಚಿತ್ರಗಳ ಟೀಸರ್ ರಿಲೀಸ್ ಆಗಿದೆ. ಅದರ ಬಗ್ಗೆ ಗೊತ್ತೇ ನಿಮಗೆ? ಎಂದು ಟೀಕಿಸಿದ್ದರು. ಹೀಗೆ ಕಮೆಂಟ್‍ಗಳು ಬರತೊಡಗಿದ್ದರಿಂದ ಆಶಿತಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಹೀಗಿತ್ತು 2ನೇ ಪೋಸ್ಟ್: ಸಿನಿಮಾಗೆ ಭಾಷೆಯ ಗಡಿ ಇಲ್ಲ. ನಾನು ಯಾವ ಸಿನಿಮಾ ಬೇಕಾದರೂ ನೋಡ್ತೀನಿ. ಯಾವ ಸಿನಿಮಾ ಬಗ್ಗೆಯಾದ್ರೂ ಪೋಸ್ಟ್ ಮಾಡ್ತೀನಿ. ಒಂದು ಹೆಣ್ಣಿಗೆ ಹೇಗೆ ಗೌರವ ಕೊಡಬೇಕು ಅನ್ನುವುದು ಗಮನವಿರಲಿ. ಕನ್ನಡ ಸಿನಿಮಾಗಳಿಗೆ ಗೌರವ ಕೊಡುವುದು ನನಗೆ ಗೊತ್ತಿದೆ. ಅದನ್ನು ಯಾರೂ ಹೇಳಿಕೊಡಬೇಕಿಲ್ಲ. ಈ ಹಿಂದೆ  ರ‍್ಯಾಂಬೋ 2 ಚಿತ್ರದ ಹಾಡನ್ನು ಪೋಸ್ಟ್ ಮಾಡಿದ್ದೆ. ಆದ್ರೆ ಅದಕ್ಕೆ 7 ಕಮೆಂಟ್ ಬಂದಿದೆ. ಪವನ್ ಕಲ್ಯಾಣ್ ಚಿತ್ರಕ್ಕೆ 57 ಕಮೆಂಟ್ ಇದೆ. ಇಲ್ಲಿ ಗೊತ್ತಾಗುತ್ತೆ ನೀವು ಕನ್ನಡ ಚಿತ್ರಕ್ಕೆ ಕೊಡುವ ಗೌರವ ಏನು ಅನ್ನೋದು ಅಂತಾ ಪೋಸ್ಟ್ ಮಾಡಿಕೊಂಡಿದ್ದಾರೆ.

ಆಶಿತಾ ತಮ್ಮ ನಡೆಗೆ ಸಮಜಾಯಿಷಿ ಕೊಟ್ಟ ಮೇಲೂ ಕಮೆಂಟ್‍ಗಳು ಬರುತ್ತಲೇ ಇದ್ದವು. ಕೊನೆಗೆ ಆಶಿತಾರನ್ನ ಕೊಂಚ ಪಾರು ಮಾಡಿದ್ದು ಚಕ್ರವರ್ತಿ ಚಿತ್ರದ ಪ್ರಮೋಶನ್ ಪೋಸ್ಟ್. ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದಲ್ಲಿ ಆಶಿತಾ ಸೃಜನ್ ಲೋಕೇಶ್ ಮಡದಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತೆ ಅನ್ನುವ ಪ್ರಮೋಷನಲ್ ಪೋಸ್ಟ್ ವೊಂದನ್ನ ಅಪ್‍ಲೋಡ್ ಮಾಡಿದ್ರು. ಆ ಕೂಡಲೇ ಆಶಿತಾ ಮೇಲೆ ಕಮೆಂಟ್ ಪ್ರಹಾರ ಕಡಿಮೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *