ಟೀಸರ್ ಅಲ್ಲ, ಟ್ರೈಲರ್ ಅಲ್ಲ; ಡಿ.2ಕ್ಕೆ ಬರಲಿದೆ ‘ಯುಐ’ ವಾರ್ನರ್

Public TV
1 Min Read

ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಯುಐ’ ಸಿನಿಮಾದ (UI Film) ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಡಿ.2ರಂದು ‘ಯುಐ’ ಸಿನಿಮಾದ ವಾರ್ನರ್‌ ರಿಲೀಸ್‌ ಆಗಲಿದೆ. ಇದನ್ನೂ ಓದಿ:ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ

ನಟ ಉಪೇಂದ್ರ ಮತ್ತೆ ಅಭಿಮಾನಿಳ ತಲೆಗೆ ಹುಳ ಬಿಡುವ ಕೆಲಸ ಮಾಡಿದ್ದಾರೆ. ‘ಯುಐ’ ಸಿನಿಮಾದ ಟೀಸರ್ ಅಲ್ಲ, ಟ್ರೇಲರ್ ಅಲ್ಲ. ವಾರ್ನರ್ ಬಗ್ಗೆ ಅಪ್‌ಡೇಟ್ ಸಿಗಲಿದೆ ಎಂದು ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಡಿ.2ರಂದು ಬೆಳಗ್ಗೆ 11:07 ವಾರ್ನರ್ ರಿಲೀಸ್ ಆಗಲಿದೆ.

 

View this post on Instagram

 

A post shared by Upendra Kumar (@nimmaupendra)

ಉಪೇಂದ್ರ ನಟನೆಯ ‘ಯುಐ’ ಚಿತ್ರ ಬಗ್ಗೆ ಡಿಫರೆಂಟ್ ಅನೌನ್ಸ್ ಮಾಡಿದ್ದಾರೆ. ಇದೇ ಡಿಸೆಂಬರ್ 2ಕ್ಕೆ ‘ಯುಐ’ ಚಿತ್ರದ ‘ವಾರ್ನರ್’ ಝಲಕ್ ತೋರಿಸಲು ಉಪೇಂದ್ರ ಸಜ್ಜಾಗಿದ್ದಾರೆ. ‘ವಾರ್ನರ್’ ಎಂಬುದು ಟ್ರೈಲರ್‌ಗೆ ಉಪೇಂದ್ರ ಕರೆದಿರುವ ಹೊಸ ಪದವಾಗಿದೆ. ಈ ಮೂಲಕ ಭಾರೀ ನಿರೀಕ್ಷೆ ಹುಟ್ಟಿಸಿದ್ದಾರೆ.

ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಡಿ.20ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ‘ಯುಐ’ ವಿಸ್ಮಯದ ಜಗತ್ತಿನ ಸ್ಯಾಂಪಲ್ ತೋರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಸಾಂಗ್ ಬೀಟ್ಸ್, ಟ್ರೋಲ್ ಆಗುತ್ತೆ ಎಂಬ ಝಲಕ್‌ನಿಂದ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಉಪೇಂದ್ರಗೆ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ನಟಿಸಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

Share This Article