1988ರ ರೇಪ್ ಕೇಸ್‌ಗೆ ಶಿಕ್ಷೆ ಪ್ರಕಟಿಸಿದ ಸುಪ್ರೀಂ – 53 ವರ್ಷದ ವ್ಯಕ್ತಿ ಈಗ ಬಾಲಾಪರಾಧಿ

Public TV
1 Min Read

ಜೈಪುರ: 37 ವರ್ಷದ ಹಿಂದೆ 11 ವರ್ಷದ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ (Supreme Court) ಇಂದು (ಜು.24) ಶಿಕ್ಷೆ ಪ್ರಕಟಿಸಿದೆ.

1988ರ ನವೆಂಬರ್‌ನಲ್ಲಿ ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣ ಸಂಬಂಧ ಭಾರತದ ಮುಖ್ಯ ನ್ಯಾ.ಬಿ.ಆರ್. ಗವಾಯಿ ಮತ್ತು ನ್ಯಾ.ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ತೀರ್ಪಿನಲ್ಲಿ 53 ವರ್ಷದ ವ್ಯಕ್ತಿಯನ್ನು ಬಾಲಾಪರಾಧಿ ಎಂದು ಘೋಷಿಸಿದೆ.

ಈ ಕುರಿತು ವಾದ ಮಂಡಿಸಿದ ಆರೋಪಿಯ ಪರ ವಕೀಲರು, 37 ವರ್ಷದ ಹಿಂದೆ ಅತ್ಯಾಚಾರ ನಡೆದಾಗ ವ್ಯಕ್ತಿಯು ಅಪ್ರಾಪ್ತನಾಗಿದ್ದ. ರಾಜಸ್ಥಾನ ಹೈಕೋರ್ಟ್ ಆರೋಪಿಯನ್ನು ಸೆಕ್ಷನ್ 342, ಸೆಕ್ಷನ್ 376 ಅಡಿಯಲ್ಲಿ ಅಪರಾಧಿಯೆಂದು ಘೋಷಿಸಿ, ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು ಎಂದು ತಿಳಿಸಿದ್ದಾರೆ.

ಬಳಿಕ ಕೋರ್ಟ್, ಅತ್ಯಾಚಾರ ಎಸಗಿದ್ದಾಗ ಅಪ್ರಾಪ್ತನಾಗಿದ್ದ ಅಂಶವನ್ನು ಪರಿಗಣಿಸಿ, ಬಾಲ ನ್ಯಾಯ ಮಂಡಳಿಯು ವ್ಯಕ್ತಿಯನ್ನು ಗರಿಷ್ಠ ಮೂರು ವರ್ಷಗಳ ಕಾಲ ವಿಶೇಷ ಗೃಹಕ್ಕೆ ಕಳುಹಿಸಬಹುದು ಎಂದು ತಿಳಿಸಿದೆ.

Share This Article