ಓಂ ಪ್ರಕಾಶ್ ರಾವ್ (Om Prakash Rao) ನಿರ್ದೇಶನದ ಫೀನಿಕ್ಸ್ ಸಿನಿಮಾದ (Phoenix Movie) ಕೊನೆಯ ದಿನದ ಶೂಟಿಂಗ್ ಅನ್ನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಯ್ತು. ನಿರ್ದೇಶಕ ಓಂ ಪ್ರಕಾಶ್ ರಾವ್, ನಟಿ ನಿಮಿಕಾ ರತ್ನಾಕರ್, ಖಡಕ್ ವಿಲನ್ ಪಾತ್ರದಲ್ಲಿ ನಟಿಸಿದ ಪ್ರಸನ್ನ ಸೇರಿದಂತೆ ಇಡೀ ಚಿತ್ರತಂಡ ಶೂಟಿಂಗ್‌ನಲ್ಲಿ ಭಾಗಿಯಾಗಿತ್ತು. ಕೊನೆ ದಿನದ ಶೂಟಿಂಗ್ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ ಚಿತ್ರತಂಡ. ಈ ವೇಳೆ ಮಾತನಾಡಿದ ನಿರ್ದೇಶಕ ಓಂ ಪ್ರಕಾಶ್ ರಾವ್ ಸಾಕಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಫೀನಿಕ್ಸ್ ಚಿತ್ರದ ಶೂಟಿಂಗ್ ವೇಳೆ ದರ್ಶನ್ ಬಗ್ಗೆ ಮಾತಾಡಿದ ಓಂ ಪ್ರಕಾಶ್ ರಾವ್. `ದರ್ಶನ್‌ಗಾಗಿ ಈ ಸಿನಿಮಾ ರೆಡಿ ಮಾಡಿದ್ದೆ, ಕಾರಣಾಂತರಗಳಿಂದ ಆಗಲಿಲ್ಲ. ದರ್ಶನ್ ಯಾವತ್ತೂ ನನ್ನ ಹತ್ರ ಕಥೆ ಕೇಳಿಲ್ಲ, ಕೇಳೋದು ಇಲ್ಲ. ಅಯ್ಯ ಸಿನಿಮಾ ಹಿಟ್ ಆಯಿತು ಅವತ್ತಿನಿಂದ ನನ್ನ ಮೇಲೆ ನಂಬಿಕೆ ದರ್ಶನ್ ಅವರಿಗೆ. ಏನ್ ಕಾಸ್ಟ್ಯೂಮ್, ಯಾವಾಗ ಶೂಟಿಂಗ್ ಅಷ್ಟೇ ಕೇಳುತ್ತಿದ್ದರು ದರ್ಶನ್. ದರ್ಶನ್‌ದು ತುಂಬಾ ಸೈಲೆಂಟ್ ಕ್ಯಾರೆಕ್ಟರ್, ಹಾರ್ಟ್ ಇಂದ ಒಳ್ಳೆ ವ್ಯಕ್ತಿ. ವಿಧಿ ಆಟವೋ ಗೊತ್ತಿಲ್ಲ ದರ್ಶನ್ ಜೈಲಲ್ಲಿರೋದು ಬೇಜಾರಾಗುತ್ತೆ’ ಎಂದು ಹೇಳಿದ್ದಾರೆ.
ಎರಡು ಫ್ಲಾಪ್ ಸಿನಿಮಾ ಕೊಟ್ಟಿರುವ ನಿರ್ದೇಶಕ ಓಂ ಪ್ರಕಾಶ್ ಅವರ 49ನೇ ಸಿನಿಮಾ ಫೀನಿಕ್ಸ್ ಆಗಿದ್ದು, ಮತ್ತೆ ಫೀನಿಕ್ಸ್ ಹಕ್ಕಿಯಂತೆ ಚಿತ್ರರಂಗದಲ್ಲಿ ಎದ್ದು ನಿಲ್ಲುತ್ತಾರಾ ಕಾದು ನೋಡ್ಬೇಕು. ಇದರ ಜೊತೆಗೆ ತಮ್ಮ 50ನೇ ಸಿನಿಮಾಗೂ ತಯಾರಿಯನ್ನ ಮಾಡಿಕೊಳ್ಳುತ್ತಿರುವ ಓಂ ಪ್ರಕಾಶ್ ಸದ್ಯದಲ್ಲಿಯೇ ಆ ಬಗ್ಗೆ ಅಪ್‌ಡೇಟ್ ನೀಡಲಿದ್ದಾರೆ.