ಶ್ರೀದೇವಿ ಥರನೇ ಇದ್ದ, ಅಕಾಲಿಕ ಮರಣ ಹೊಂದಿದ ನಟಿ ದಿವ್ಯ ಭಾರತಿ ಬಗ್ಗೆ ನಿಮಗೆ ಗೊತ್ತಾ?

Public TV
2 Min Read

ನವದೆಹಲಿ: ಹಿರಿಯ ನಟಿ ಶ್ರೀದೇವಿಯ ಅಕಾಲಿಕ ಮರಣ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತ ತಂದಿದೆ. 54 ವರ್ಷ ವಯಸ್ಸಿನ ಶ್ರೀದೇವಿ ಹೃದಯಾಘಾತದಿಂದ ಶನಿವಾರದಂದು ದುಬೈನಲ್ಲಿ ವಿಧಿವಶರಾದ್ರು. ಶ್ರೀದೇವಿ ನಿಧನ ಅವರ ಸಮಕಾಲೀನ ನಟಿಯಾದ ದಿವ್ಯ ಭಾರತಿ ಅವರ ನೆನಪು ತರಿಸುತ್ತದೆ.

ದಿವ್ಯ ಭಾರತಿ ಕೂಡ 43ನೇ ವಯಸ್ಸಿಗೆ ಅಕಾಲಿಕ ಮರಣ ಹೊಂದಿದ್ದರು. ದಿವ್ಯ ಮುಖಚಹರೆಯಲ್ಲಿ ಶ್ರೀದೇವಿ ಅವರನ್ನೇ ಹೋಲುತ್ತಿದ್ದರಿಂದ ಎಷ್ಟೋ ಬಾರಿ ಅವರನ್ನ ಶ್ರೀದೇವಿ ಅವರ ತಂಗಿ ಎಂದೇ ಕರೆಯಲಾಗುತ್ತಿತ್ತು.

90ರ ದಶಕದ ಆರಂಭದಲ್ಲಿ ದಿವ್ಯ ಭಾರತಿ ತನ್ನ ಅಭಿನಯದ ಮೂಲಕ ಶ್ರೀದೇವಿ ಅವರ ಸ್ಥಾನಕ್ಕೆ ಬಂದುಬಿಡುತ್ತಾರೆ ಎಂದು ಜನ ನಂಬಲು ಶುರುಮಾಡಿದ್ದರು. ಆದ್ರೆ ದಿವ್ಯ ಕೂಡ ಅಕಾಲಿಕವಾಗಿ ನಿಧನ ಹೊಂದಿದಾಗ ಇಡೀ ಚಿತ್ರರಂಗಕ್ಕೆ ಆಘಾತವಾಗಿತ್ತು. ಅಲ್ಲದೆ ದಿವ್ಯ ಜನಿಸಿದ್ದು 1974ರ ಫೆಬ್ರವರಿ 25ರಂದು. ಶ್ರೀದೇವಿ ಅವರ ನಿಧನದ ಒಂದು ದಿನ ಬಳಿಕ ದಿವ್ಯ ಭಾರತಿ ಜನ್ಮ ವಾರ್ಷಿಕೋತ್ಸವ.

90ರ ದಶಕದ ಆರಂಭದಲ್ಲಿ ದಿವ್ಯಾ ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದರು. ಕೆಲವೇ ತಿಂಗಳುಗಳಲ್ಲಿ ಅವರ ಅನೇಕ ಚಿತ್ರಗಳು ಒಂದರ ನಂತರ ಒಂದು ಬಿಡುಗಡೆಯಾದವು. ಈ ವೇಳೆಗೆ ದಿವ್ಯ ಚಿತ್ರರಂಗದಲ್ಲಿ ಅದ್ಭುತ ಕಲಾವಿದೆಯಾಗಿ ಬೆಳೆದಿದ್ದರು. ವರದಿಗಳ ಪ್ರಕಾರ ಕೇವಲ ಮೊದಲ ಮೂರು ವರ್ಷದ ಅವಧಿಯಲ್ಲಿ ಸುಮಾರು 13 ಸಿನಿಮಾಗಳಲ್ಲಿ ದಿಯ ನಟಿಸಿದ್ದರು. ಹಾಗೇ ಅನೇಕ ದೊಡ್ಡ ಬಜೆಟ್ ಸಿನಿಮಾಗಳನ್ನ ಕೈಗೆತ್ತಿಕೊಂಡಿದ್ದರು.

ಆದ್ರೆ 1993ರ ಏಪ್ರಿಲ್ 5ರಂದು ದಿವ್ಯಾ ದುರಂತ ಸಾವು ಕಂಡರು. ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ದಿವ್ಯ ಬಾಲ್ಕನಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ದಿವ್ಯ ಭಾರತಿಯ ಹಠಾತ್ ಸಾವಿನಿಂದ ಅವರು ಸಹಿ ಹಾಕಿದ್ದ ಮುಂದಿನ ಸಿನಿಮಾಗಳು ಅರ್ಧಕ್ಕೆ ನಿಂತವು.

ಅದರಲ್ಲಿ ಒಂದು ಸಿನಿಮಾ ಲಾಡ್ಲಾ. ದಿವ್ಯ ಸಾವಿಗೂ ಮುನ್ನ ಈ ಚಿತ್ರದ ಬಹುತೇಕ ಭಾಗ ಚಿತ್ರೀಕರಣವಾಗಿತ್ತು. ಆದ್ರೆ ಆಕೆಯ ದುರಂತ ಸಾವಿನ ನಂತರ ಚಿತ್ರ ತಯಾರಕರು ಮತ್ತೆ ಶ್ರೀದೇವಿ ಅವರನ್ನ ಕರೆತಂದರು. ಶ್ರೀದೇವಿ ಅವರ ಜೊತೆ ಮತ್ತೊಮ್ಮೆ ಆ ಸಿನಿಮಾದ ಚಿತ್ರೀಕರಣ ಮಾಡಲಾಗಿತ್ತು. ಈ ಚಿತ್ರದಲ್ಲಿ ಶ್ರೀದೇವಿ ಅನಿಲ್ ಕಪೂರ್ ಮತ್ತು ರವೀನಾ ಟಂಡನ್ ಜೊತೆ ಕಾಣಿಸಿಕೊಂಡಿದ್ದರು. ಹಾಗೂ ಈ ಚಿತ್ರ ಬ್ಲಾಕ್‍ಬಾಸ್ಟರ್ ಹಿಟ್ ಆಯ್ತು. ಆ ಘಟ್ಟದಲ್ಲಿ ಶ್ರೀದೇವಿ ಹಾಗೂ ದಿವ್ಯ ಭಾರತಿ ಇಬ್ಬರನ್ನೂ ಒಬ್ಬರಿಗೊಬ್ಬರು ಪರ್ಯಾಯ ಎಂದೇ ಪರಿಗಣಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *