ಮೆಟ್ರೋ ಟಿಕೆಟ್ ದರ ಏರಿಕೆ ರಾಜ್ಯ ಸರ್ಕಾರ ಮಾಡಿರೋದಲ್ಲ: ಸಿಎಂ ಸ್ಪಷ್ಟನೆ

Public TV
1 Min Read

ಬೆಂಗಳೂರು: ಮೆಟ್ರೋ (Namma Metro) ಟಿಕೆಟ್ ದರ ಏರಿಕೆ ಮಾಡೋದು ರಾಜ್ಯ ಸರ್ಕಾರ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.

ಮೆಟ್ರೋ ಟಿಕೆಟ್ ದರ ಏರಿಕೆ ಗೊಂದಲದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೆಟ್ರೋ ದರ ನಿಗದಿ ಮಾಡುವ ಕಮಿಟಿಯನ್ನ ನೇಮಕ ಮಾಡೋದು ಕೇಂದ್ರ ಸರ್ಕಾರ. ಆ ಕಮಿಟಿಯಲ್ಲಿ ಇಬ್ಬರು ಕೇಂದ್ರ ಸರ್ಕಾರದ ಪ್ರತಿನಿಧಿ, ಒಬ್ಬರು ರಾಜ್ಯ ಸರ್ಕಾರದವರು ಇರುತ್ತಾರೆ. ಮೆಟ್ರೋ ಸ್ವಾಯತ್ತ ಸಂಸ್ಥೆ ಆದರೂ ಮೆಟ್ರೋವನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ನಡೆಸುತ್ತವೆ ಎಂದರು. ಇದನ್ನೂ ಓದಿ: ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಮಂಡನೆ – ಸಿದ್ದರಾಮಯ್ಯ

ಬೆಲೆ ನಿಗದಿ ಮಾಡಿ, ಏರಿಕೆ ಮಾಡಿ ಅಂತ ನಾವು ಪ್ರಪೋಸಲ್ ಕೊಡುತ್ತೇವೆ. ಆದರೆ ಬೆಲೆ ನಿಗದಿ ಮಾಡೋದು ಕಮಿಟಿ ಅವರು. ಆ ಕಮಿಟಿಯ ಅಧ್ಯಕ್ಷರನ್ನು ಆಯ್ಕೆ ಮಾಡೋದು ಕೇಂದ್ರ ಸರ್ಕಾರದವರು ಅನ್ನೋ ಮೂಲಕ ಕೇಂದ್ರ ಸರ್ಕಾರವೇ ಮೆಟ್ರೋ ದರ ಏರಿಕೆ ಮಾಡಿರೋದು ಎಂದು ಪರೋಕ್ಷವಾಗಿ ಆರೋಪ ಮಾಡಿದರು. ಇದನ್ನೂ ಓದಿ: ಈಜಲು ತೆರಳಿದ್ದ ಯುವಕ ಸುಳಿಗೆ ಸಿಲುಕಿ ಸಾವು – ಎರಡು ದಿನವಾದ್ರೂ ಪತ್ತೆಯಾಗದ ಮೃತದೇಹ

Share This Article