ಮದುವೆ ಮಾಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಲೆಗೈದ ಮಗ

By
1 Min Read

ಕಲಬುರಗಿ: ಮದುವೆ ಮಾಡಿಲ್ಲ ಎಂದು ಹೆತ್ತ ತಾಯಿಯನ್ನೇ ಮಗ (Son) ಬರ್ಬರವಾಗಿ ಕೊಲೆ  (Murder) ಮಾಡಿರುವ ಘಟನೆ ಜಿಲ್ಲೆಯ ಚಿಂಚೋಳಿ (Chincholi) ತಾಲ್ಲೂಕಿನ ಪೋಚಾವರಂನಲ್ಲಿ ನಡೆದಿದೆ.

ಶೋಭಾ (45) ಮಗನಿಂದ ಕೊಲೆಯಾದ ತಾಯಿ. ಮಗ ಅನಿಲ್ ಮನೆಗೆ ಕುಡಿದು ಬಂದಿದ್ದು, ಕುಡಿದ ನಶೆಯಲ್ಲಿ ಮದುವೆ ಬಗ್ಗೆ ಮಾತನಾಡಿ ತಾಯಿಯೊಂದಿಗೆ ಜಗಳವಾಡಿದ್ದಾನೆ. ಇನ್ನಷ್ಟು ಕೋಪಗೊಂಡ ಅನಿಲ್ ತನಗೆ ಏಕೆ ಮದುವೆ ಮಾಡಿಸಿಲ್ಲ ಎಂದು ತಾಯಿಗೆ ಪ್ರಶ್ನೆ ಮಾಡಿದ್ದಾನೆ. ಬಳಿಕ ಕುಡಿದ ನಶೆಯಲ್ಲಿ ಅಲ್ಲೇ ಇದ್ದ ಕಟ್ಟಿಗೆಯಿಂದ ಕೊಡೆದು ಕೊಲೆ ಮಾಡಿದ್ದಾನೆ.  ಇದನ್ನೂ ಓದಿ: ಸ್ನೈಪರ್‌ ಬಳಸಿ ಅಟ್ಯಾಕ್‌ – ಪಾಕ್‌ನಲ್ಲಿ ಉಗ್ರರ ದಾಳಿಗೆ 10 ಮಂದಿ ಪೊಲೀಸ್‌ ಅಧಿಕಾರಿಗಳು ಬಲಿ

ಘಟನೆ ಕುರಿತು ಚಿಂಚೋಳಿಯ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅನಿಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪತಿಯೊಂದಿಗೆ ಅಕ್ರಮ ಸಂಬಂಧ – ಗೆಳತಿಯ ಮನೆಗೆ ನುಗ್ಗಿ ಪತ್ನಿಯಿಂದ ದಾಂಧಲೆ

Share This Article