ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ಸಿನಿಮಾದ ಶೂಟಿಂಗ್ ಮುಕ್ತಾಯ

Public TV
1 Min Read

ಮೊನ್ನೆ ಮೊನ್ನೆಯಷ್ಟೇ ತಮ್ಮ ನಿರ್ಮಾಣದ ಸಿನಿಮಾ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು ರಮ್ಯಾ. ಈ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆಯನ್ನೂ ಉಂಟು ಮಾಡಿದ್ದರು. ಈ ಆಸೆ, ನಿರಾಸೆಗಳು ಇನ್ನೂ ಮರೆಯಾಗಿಲ್ಲ, ಅಷ್ಟರಲ್ಲಿ ಸಿನಿಮಾದ ಶೂಟಿಂಗ್ ಅನ್ನೇ ಮುಗಿಸಿದ್ದಾರೆ. ಇಷ್ಟು ಬೇಗ ಚಿತ್ರೀಕರಣ ಮುಗಿಸುವ ಮೂಲಕ ಅಚ್ಚರಿಯನ್ನೂ ಉಂಟು ಮಾಡಿದ್ದಾರೆ.

ರಮ್ಯಾ  (Ramya) ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಶೂಟಿಂಗ್‌ ಮುಕ್ತಾಯಗೊಳಿಸಿದೆ. ಇಂದು ಈ ಚಿತ್ರಕ್ಕೆ ಕುಂಬಳಕಾಯಿ ಪೂಜೆ ನೆರವೇರಲಿದೆ. ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ರಾಜ್‌ ಬಿ ಶೆಟ್ಟಿ  (Raj B Shetty) ನಿರ್ದೇಶನ ಮಾಡಿದ್ದಾರೆ. ಸಿರಿ ರವಿಕುಮಾರ್‌ (Siri Ravikumar) ಮತ್ತು ರಾಜ್‌ ಶೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ

ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದಲ್ಲಿ ರಮ್ಯಾ ಅವರೇ ನಟಿಸಬೇಕಿತ್ತು. ಹಾಗಂತ  ಅನೌನ್ಸ್ ಕೂಡ ಆಗಿತ್ತು. ಆದರೆ, ತಾವು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ, ಕೇವಲ ನಿರ್ಮಾಪಕಿಯಾಗಿ ಮಾತ್ರ ಇರುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು ರಮ್ಯಾ. ಈ ವಿಷಯ ತಿಳಿಸಿದ ಕೆಲವೇ ದಿನಗಳ ನಂತರ ಮತ್ತೊಂದು ಸಿಹಿ ಸುದ್ದಿಯನ್ನೂ ನೀಡಿ, ತಾವು ಡಾಲಿ ಧನಂಜಯ್ ಜೊತೆ ಉತ್ತರಕಾಂಡ ಚಿತ್ರದಲ್ಲಿ ನಟಿಸುತ್ತಿರುವುದಾಗಿಯೂ ತಿಳಿಸಿದ್ದರು. ಇದೀಗ ರಮ್ಯಾ ಬ್ಯಾನರ್ ನ ಮೊದಲ ಸಿನಿಮಾ ಕಂಪ್ಲೀಟ್ ಆಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *