ಮಂಡ್ಯ: ನಗರದ ಮನೆಯೊಂದರಲ್ಲಿ ನಿಗೂಢವಾಗಿ ರಕ್ತ (Blood) ಪತ್ತೆಯಾಗಿತ್ತು. ಏಕಾಏಕಿ ಮನೆ ತುಂಬೆಲ್ಲ ನೆತ್ತರು ಕಂಡು ಜನ ಅಕ್ಷರಶಃ ಬೆಚ್ಚಿಬಿದ್ದಿದ್ರು. ಯಾರೋ ವಾಮಾಚಾರ (Vamachara) ಮಾಡಿ ಪ್ರಾಣಿಯ ರಕ್ತ ಸುರಿದಿದ್ದಾರೆ ಅಂತ ಗ್ರಾಮಸ್ಥರು ಶಂಕಿಸಿದ್ರು. ಆದ್ರೆ ಪೊಲೀಸ್ ತನಿಖೆಯಲ್ಲಿ ಭಯಾನಕರ ಅಂಶ ಬಯಲಾಗಿದ್ದು, ಅದು ಯಾವುದೊ ಪ್ರಾಣಿ ಅಥವಾ ಪಕ್ಷಿಯ ರಕ್ತವಲ್ಲ, ಮನುಷ್ಯನ ರಕ್ತ ಅದು ಸಹ ಮನೆಯ ಮಾಲೀಕನದ್ದೇ ಎಂಬುದು ಗೊತ್ತಾಗಿದೆ.
ಮಂಡ್ಯ (Mandya) ಜಿಲ್ಲೆ ಮದ್ದೂರು ತಾಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದ ಸತೀಶ್, ಸೌಮ್ಯ ದಂಪತಿಯ ಮನೆುಯಲ್ಲಿ ಕಳೆದ ಅಕ್ಟೋಬರ್ 28 ರಂದು ಬೆಳಿಗ್ಗೆ ನಿಗೂಢವಾಗಿ ರಕ್ತ ಕಾಣಿಸಿಕೊಂಡಿತ್ತು. ಹಾಲ್, ಬಾತ್ ರೂಮ್ ಸೇರಿದಂತೆ ಮನೆಯ ಹಲವೆಡೆ ನೆತ್ತರು ಚೆಲ್ಲಿತ್ತು. ಗೋಡೆ, ಟಿವಿ, ಫ್ಯಾನ್ ಮೇಲೂ ರಕ್ತದ ಕಲೆ ಅಂಟಿತ್ತು. ಇದನ್ನ ನೋಡಿದ ಮನೆಯವರು ನಡುಕ ಹುಟ್ಟಿತ್ತು. ಅಷ್ಟೆಯಲ್ಲ ಗ್ರಾಮಸ್ಥರೂ ಬೆಚ್ಚಿಬಿದ್ದಿದ್ರು. ಯಾರೊ ವಾಮಾಚಾರ ಮಾಡಿ ಪ್ರಾಣಿಯ ಬಲಿಕೊಟ್ಟು ಬಳಿಕ ರಕ್ತವನ್ನ ಮನೆಗೆ ತಂದು ಯಾರಿಗೂ ಗೊತ್ತಾಗದಂತೆ ಸುರಿದು ಪರಾರಿಯಾಗಿರಬಹುದು ಅಂತ ಊರಿನವರು ಶಂಕಿಸಿದ್ರು. ಆದ್ರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅದು ಪ್ರಾಣಿಯ ನೆತ್ತರಲ್ಲ, ಬದಲಿಗೆ ಮನುಷ್ಯನ ರಕ್ತ ಅದ್ರಲ್ಲೂ ಮನೆಯ ಮಾಲೀಕ ಸತೀಶ್‌ನದ್ದೆ ಎಂದು ಗೊತ್ತಾಗಿದೆ.
ಅಂದಹಾಗೇ ಸತೀಶ್, ಸೌಮ್ಯ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವ್ರು ಹಾಸ್ಟೆಲ್ ನಲ್ಲಿತ್ತುಕೊಂಡು ವಿದ್ಯಾಭ್ಯಾಸ ಮಾಡುತ್ತಿರೋದ್ರಿಂದ ಮನೆಯಲ್ಲಿ ದಂಪತಿ ಮಾತ್ರ ಇದ್ದಾರೆ. ಸೋಮವಾರ ಎಂದಿನಂತೆ ಸೌಮ್ಯ ಬೆಳಿಗ್ಗೆ ಬೇಗ ಎದ್ದು ಮನೆ ಕಸ ಗುಡಿಸಿ, ಒರೆಸಿ ಸ್ವಚ್ಛಗೊಳಸಿ ಹಾಗತಾನೆ ಕುಳಿತುಕೊಂಡಿದ್ರು. ಅಷ್ಟರಲ್ಲಿ ಜಮೀನಿನಿಂದ ಗಂಡನಿಗೆ ಉಪಹಾರ ಸಿದ್ದಪಡಿಸಲು ಅಡುಗೆ ಕೋಣೆಗೆ ತೆರೆಳಿದ್ರು. ಇತ್ತ ಸತೀಶ್ ಕೈಕಾಲು ತೊಳೆಯಲು ಬಾತ್ ರೂಮ್‌ಗೆ ಹೋದಾಗ ಅಲ್ಲಿ ರಕ್ತ ಕಂಡು ಗಾಬರಿಯಾಗಿದ್ದಾರೆ. ಅಷ್ಟರಲ್ಲಿ ಮನೆಯ ಹಾಲ್, ಟಿವಿ, ಫ್ಯಾನ್ ಮೇಲೆಲ್ಲ ರಕ್ತ ಅಂಟಿತ್ತು. ಇದನ್ನೂ ಓದಿ: ಕಾರವಾರ| ಮಂಜುಗುಣಿ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆ ಗೂಡು ಪತ್ತೆ – ಅರಣ್ಯ ಇಲಾಖೆಯಿಂದ ರಕ್ಷಣೆ
ಇನ್ನೂ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದ್ರು. ತಕ್ಷಣ FSL ಹಾಗೂ ಶ್ವಾನದಳದ ಸಿಬ್ಬಂದಿ ಕರೆಸಿ ಪರಿಶೀಲನೆ ನಡೆಸಿದ್ರು. ಸದ್ಯ ರಕ್ತದ ಮಾದರಿ ರಿಪೋರ್ಟ್ ಬಂದಿದೆ. ಈ ರಿಪೋರ್ಟ್‌ನಲ್ಲಿ ಮನೆಯಲ್ಲಿ ಸಿಕ್ಕಿದ ರಕ್ತ ಯಾವುದೊ ಪ್ರಾಣಿ ಅಥವಾ ಪಕ್ಷಿಯ ರಕ್ತವಲ್ಲ. ಅದು ಮನೆ ಮಲೀಕ ಸತೀಶ್‌ನದ್ದು ಎಂದು ತಿಳಿದು ಬಂದಿದೆ. ಇದೀಗ ಸತೀಶ್‌ನನ್ನು ವಿಚಾರಣೆ ಮಾಡಿದಾಗ ಸತೀಶ್ ಕಾಲಿನಿಂದಲೇ ಮನೆ ಎಲ್ಲಾ ರಕ್ತವರಡಿದೆ ಎಂದು ಗೊತ್ತಾಗಿದೆ.
ಒಟ್ಟಾರೆ ಮನೆಯಲ್ಲಿ ನಿಗೂಢವಾಗಿ ರಕ್ತ ಹರಡಿದೆ ಎಂದು ಊರಿನ ಜನರಲ್ಲಿ ಗಾಬರಿ ಉಂಟುಮಾಡಿದ್ದ ದಂಪತಿಗೆ ಇದೀಗ ಸತ್ಯದ ಅರಿವಾಗಿದೆ. ಇದ್ಯಾವುದೋ ರಕ್ತವಲ್ಲ ಮನೆಯ ಮಾಲೀಕನ ರಕ್ತ ಎಂದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಸಾಗರ | ರೈಲ್ವೇ ಹಳಿಗೆ ಹಾರಿ ಆತ್ಮಹತ್ಯೆ ಯತ್ನ – ರೈಲು ನಿಲ್ಲಿಸಿ ರಕ್ಷಣೆಗೆ ಧಾವಿಸಿದ ಲೋಕೋ ಪೈಲಟ್


