ಚಿತ್ರದುರ್ಗದಲ್ಲಿ ಜೆಸಿಬಿಗಳ ಘರ್ಜನೆ – ರಸ್ತೆ ಬದಿಯ ಗೂಡಂಗಡಿಗಳ ತೆರವು

1 Min Read

– ನಗರಸಭೆ ಅಧಿಕಾರಿಗಳ ಕಾರ್ಯಕ್ಕೆ ವ್ಯಾಪಾರಿಗಳ ಆಕ್ರೋಶ

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಜೆಸಿಬಿಗಳು (JCB) ಘರ್ಜಿಸಲು ಆರಂಭಿಸಿದ್ದು, ರಸ್ತೆ ಬದಿಯ ಗೂಡಂಗಡಿಗಳ (Street Vendor’s Stall) ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಚಳ್ಳಕೆರೆ (Challakere) ಗೇಟ್ ಬಳಿ ರಸ್ತೆ ಪಕ್ಕ ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಚಿತ್ರದುರ್ಗ ನಗರಸಭೆ ಆಯುಕ್ತೆ ಲಕ್ಷ್ಮೀ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹಲವು ಬಾರಿ ನೋಟಿಸ್ ನೀಡಿದ್ದರೂ ವ್ಯಾಪಾರಿಗಳು ಡೋಂಟ್ ಕೇರ್ ಎನ್ನದ ಹಿನ್ನೆಲೆ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ವೈಕುಂಠ ಏಕಾದಶಿ ಸಂಭ್ರಮ; ದೇವಾಲಯಗಳಲ್ಲಿ ಭಕ್ತರ ದಂಡು – ವಿಶೇಷ ಪೂಜೆ ಸಲ್ಲಿಕೆ

ಹಣ್ಣು, ತರಕಾರಿ, ಟೀಸ್ಟಾಲ್, ಗುಜರಿ ಅಂಗಡಿ, ಸೇರಿದಂತೆ ವಿವಿಧ ಗೂಡಂಗಡಿ ತೆರವು ಮಾಡಲಾಗಿದೆ. ತೆರವು ಮಾಡದಂತೆ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ. ಈ ಗೂಡಂಗಡಿಗಳು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದವು. ಅಂಗಡಿಗಳನ್ನು ತೆರವುಗೊಳಿಸುವಂತೆ ಕೋರ್ಟ್ ಆದೇಶ ಹಿನ್ನೆಲೆ ನಗರಸಭೆ ಗೂಡಂಗಡಿಗಳನ್ನು ತೆರವುಗೊಳಿಸಿದೆ. ನಗರಸಭೆ ಅಧಿಕಾರಿಗಳ ಕಾರ್ಯಕ್ಕೆ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ – ಅರಣ್ಯ ಇಲಾಖೆಯ ಕಾಟೇಜ್‌ನಲ್ಲಿ ವಾಸ್ತವ್ಯಕ್ಕೂ ಬ್ರೇಕ್

Share This Article