ಬೈಕಿಗೆ ಅಡ್ಡ ಬಂದು ಸವಾರ ದುರ್ಮರಣ- 3 ದಿನದ ಬಳಿಕ ಕುಟುಂಬಕ್ಕೆ ಶ್ವಾನ ಸಾಂತ್ವನ

Public TV
1 Min Read

ದಾವಣಗೆರೆ: ಬೈಕಿಗೆ ನಾಯಿ (Dog) ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅ ಬೈಕ್ ಗೆ ಅಡ್ಡ ಬಂದಿದ್ದ ನಾಯಿ ಮೂರು ದಿನದ ನಂತರ ಮೃತನ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಿಸ್ಮಯಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ತಿಪ್ಪೇಶ್ (21) ಎನ್ನುವ ಯುವಕ ಕಳೆದ ಗುರುವಾರ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದ. ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದ ತಿಪ್ಪೇಶ್, ಸಹೋದರಿಯನ್ನು ಬಿಟ್ಟು ವಾಪಸ್ ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತವಾಗಿದ್ದು.

ತಲೆಗೆ ಗಂಬೀರ ಹೊಡೆದ ಬಿದ್ದ ಹಿನ್ನಲೆ ತಿಪ್ಪೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಸಾವನ್ನಪ್ಪಿದ ಮೂರನೇ ದಿನಕ್ಕೆ ಮೃತನ ಮನೆಗೆ ಅದೇ ಶ್ವಾನ ಆಗಮಿಸಿದ್ದು, ತಿಪ್ಪೇಶ್ ನ ಕೊಠಡಿ, ಅಡುಗೆ ಮನೆ ಯನ್ನು ಸುತ್ತಾಡಿದೆ. ಅಲ್ಲದೆ ತಿಪ್ಪೇಶ್ ತಾಯಿಯನ್ನು ಅಳದಂತೆ ನಾಯಿ ಸಮಾಧಾನ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ನಾಯಿ ಈ ರೀತಿ ಮಾಡುತ್ತಿರುವುದನ್ನು ನೋಡಿ ಇಡೀ ಗ್ರಾಮದ ಜನರು ಆಶ್ಚರ್ಯ ವ್ಯಕ್ತಪಡಿಸಿದರು. ಇದನ್ನೂ ಓದಿ: 2 ತಿಂಗಳ ಬಳಿಕ ಕೆನಡಿಯನ್ನರಿಗೆ ಇ-ವೀಸಾ ಸೇವೆಗಳ ಪುನರಾರಂಭಕ್ಕೆ ಭಾರತದ ನಿರ್ಧಾರ

Share This Article