ರೆಡ್ಡಿ ಬಂಧನಕ್ಕೆ ಕಾರಣವಾದ ಅಂಶಗಳು

Public TV
2 Min Read

ಬೆಂಗಳೂರು: ಕೇವಲ ವಿಚಾರಣೆ ಮಾಡ್ತಾರೆ, ಅರೆಸ್ಟ್ ಮಾಡೋದಿಲ್ಲ ಅನ್ನೋ ಭರವಸೆಯಿಂದ ಸಿಸಿಬಿ ಕಚೇರಿಗೆ ಜನಾರ್ದನ ರೆಡ್ಡಿಯನ್ನ ಕರೆದುಕೊಂಡ ಬಂದ ವಕೀಲರ ಮುಖ ಇಂದು ಮಧ್ಯಾಹ್ನದ ವೇಳೆಗಾಗಲೇ ಬಾಡಿಹೋಗಿತ್ತು. ಯಾಕಂದ್ರೆ ಅಂಬಿಡೆಂಟ್ ಕಂಪನಿಯ ಮಾಲೀಕ ಫರೀದ್ ಕೊಟ್ಟ ಏಟು ರೆಡ್ಡಿಯನ್ನ ಪತರಗುಟ್ಟುವಂತೆ ಮಾಡಿತ್ತು. ಶನಿವಾರ ನಾಲ್ಕು ಗಂಟೆಯಿಂದ ವಿಚಾರಣೆ ಎದುರಿಸಿದ್ದ ಜನಾರ್ದನ ರೆಡ್ಡಿಗೆ ಇವತ್ತು ಕೂಡ ಡ್ರಿಲ್ ಮಾಡಲಾಯ್ತು. ಬೆಳಗ್ಗೆ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ಬರ್ತಿದ್ದ ಹಾಗೆ ಏನ್ರಿ ರಾತ್ರಿ ಚೆನ್ನಾಗಿ ನಿದ್ದೆ ಬಂತಾ, ತಿಂಡಿ ತಿಂದ್ರ ಅಂತಾ ಯೋಗಕ್ಷೇಮ ವಿಚಾರಿಸಿದರು.

ವಿಚಾರಣೆ ವೇಳೆ ಫರೀದ್ ನೀಡಿದ ಹೇಳಿಕೆಗಳು ರೆಡ್ಡಿಯನ್ನ ಅರೆಸ್ಟ್ ಮಾಡುವಂತೆ ಮಾಡಿತು. ಅಲಿಖಾನ್ ಮೂಲಕ ರೆಡ್ಡಿಯನ್ನ ಸಂಪರ್ಕಿಸಿದ್ದು ನಿಜ. ಕೇಸ್ ಕ್ಲೋಸ್ ಮಾಡಲು 20 ಕೋಟಿ ಹಣ ಕೇಳಿದ್ದರು. ಹೀಗಾಗಿ 57 ಕೆಜಿ ಚಿನ್ನವನ್ನ ಅಲಿಖಾನ್‍ಗೆ ತಲುಪಿಸುವ ಕೆಲಸ ಮಾಡಿದ್ದೆ ಎಂದು ಫರೀದ್ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಅಂಬಿಡೆಂಟ್ ಅನ್ನೋ ಡಬ್ಲಿಂಗ್, ವಂಚನೆಯ ಕಂಪನಿಯನ್ನ ಜಾರಿ ನಿರ್ದೇಶನಾಲಯ ದಾಳಿಯಿಂದ ಬಚಾವ್ ಮಾಡೋಕೆ ಹೋಗಿ ರೆಡ್ಡಿ ಸಿಕ್ಕಿಕೊಂಡಿದ್ದೇಗೆ?

ರೆಡ್ಡಿ ‘ಅಂಬಿಡೆಂಟ್’ ಡೀಲ್ ಕೇಸ್
* ಅಂಬಿಡೆಂಟ್ ಕಂಪನಿಯಿಂದ 18 ಕೋಟಿಗೆ ಜನಾರ್ದನ ರೆಡ್ಡಿ ಡೀಲ್
* ಅಂಬಿಡೆಂಟ್‍ನಿಂದ ಅಂಬಿಕಾ ಜ್ಯುವೆಲ್ಲರ್‍ನ ರಮೇಶ್ ಕೊಠಾರಿಗೆ 18 ಕೋಟಿ ಚಿನ್ನ ಸಂದಾಯ
* ರಮೇಶ್ ಕೊಠಾರಿಯಿಂದ ಬಳ್ಳಾರಿಯಿಂದ ರಾಜಮಹಲ್ ಜುವೆಲ್ಲರ್ಸ್‍ನ ರಮೇಶ್ ಸತ್ರಸಾಲ್‍ಗೆ 57 ಕೆಜಿ ಚಿನ್ನ ವರ್ಗ )
* ರಮೇಶ್ ಸತ್ರಸಾಲ್‍ನಿಂದ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್‍ಗೆ 57 ಕೆಜಿ ಚಿನ್ನ ಸಂದಾಯ

ರೆಡ್ಡಿಯ ಮೇಲೆ ಸಿಸಿಬಿ ದಾಖಲಿಸಿರೋ ಸೆಕ್ಷನ್‍ಗಳು
* ಐಪಿಸಿ ಸೆಕ್ಷನ್ 120 ಬಿ – ಅಪರಾಧ ಒಳಸಂಚು
* ಐಪಿಸಿ ಸೆಕ್ಷನ್ 420 – ವಂಚನೆ
* ಐಪಿಸಿ ಸೆಕ್ಷನ್ 468 – ಉದ್ದೇಶಪೂರ್ವಕ ವಂಚನೆ, ಫೋರ್ಜರಿ
* ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿಯೂ ಕೇಸ್

ಒಂದು ದಿನದ ಮಟ್ಟಿಗಾದರೂ ರೆಡ್ಡಿಯನ್ನ ಜೈಲಿಗಟ್ಟಬೇಕು ಅಂತಿದ್ದ ಪೊಲೀಸ್ರು, ಕೊನೆಗೂ ರೆಡ್ಡಿಯನ್ನ ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ. ಸೋಮವಾರ ರೆಡ್ಡಿಯ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ಬೇಲ್ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *