‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

Public TV
2 Min Read

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ದಿನಕ್ಕೊಂದು ರೋಚಕ ಸಂಗತಿಯನ್ನು ಹೊರ ಹಾಕುತ್ತಿದೆ. ಈ ಸಿನಿಮಾದ ಕಥೆಯಲ್ಲಿ ಅಕ್ಕಿ ಡ್ರಮ್ ನಲ್ಲಿ ಕಾಶ್ಮೀರಿ ಪಂಡಿತರೊಬ್ಬರ ಹತ್ಯ ನಡೆದ ಘಟನೆಯ ಬರುತ್ತದೆ. ಆ ‍ಘಟನೆಯು ನಡೆದದ್ದು ಕಾಶ್ಮೀರಿದ ಶ್ರೀನಗರದ ಛೋಟಾ ಬಜಾರ್ ನಲ್ಲಿ ಎನ್ನುವ ಮಾಹಿತಿ ಹೊರ ಬಿದ್ದಿದೆ.

ಇಂಥದ್ದೊಂದು ಘಟನೆ ನಡೆದದ್ದು ಶಹೀದ್ ಬಾಲ್ ಕ್ರಿಶನ್ ಗಂಜು ಅವರ ಕುಟುಂಬದಲ್ಲಿ ಎನ್ನುವ ಮಾಹಿತಿಯನ್ನು ಸ್ವತಃ ಇವರ ಸಹೋದರಿಯೇ ಟ್ವಿಟರ್ ಖಾತೆಯಲ್ಲಿ ಖಚಿತ ಪಡಿಸಿದ್ದಾರೆ. ಅಲ್ಲದೇ, ‘ಕಾಶ್ಮೀರಿ ಪಂಡಿತ್ ನೆಟ್ ವರ್ಕ್’ ಎಂಬ ಜಾಲತಾಣದಲ್ಲಿ ಪ್ರಕಟವಾದ ಹತ್ಯೆಯಾದ ಕಾಶ್ಮೀರಿ ಪಂಡಿತರ ಪರಿಚಯದಲ್ಲೂ ಈ ಗಂಜು ಇದ್ದಾರೆ.

ಯಾರಿದು ಬಾಲ್ ಕ್ರಿಶನ್ ಗಂಜು?
ಕಾಶ್ಮೀರದ ಶ್ರೀನಗರದಲ್ಲಿಯ ಛೋಟಾ ಬಜಾರ್ ನಿವಾಸಿ ಶಾಹೀದ್ ಬಾಲ್ ಕ್ರಿಶನ್ ಗಂಜು. ಇವರು ಟೆಲಿಕಾಂನಲ್ಲಿ ಇಂಜಿನಿಯರ್ ಆಗಿದ್ದರು. ಶಿಬನ್ ಗುಂಜಿ ಸೇರಿದಂತೆ ಹಲವರು ನಾಲ್ಕು ಅಂತಸ್ತಿನ ಛೋಟಾ ಬಜಾರ್ ಮನೆಯಲ್ಲೇ ವಾಸವಿದ್ದರು. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

ಹತ್ಯೆಯಾಗಿದ್ದು ಹೇಗೆ?
ಸಹೋದರಿ ಶಿಬನ್ ಗುಂಜಿ ಈ ಘಟನೆಯ ಕುರಿತು ಹೇಳಿಕೊಂಡಂತೆ. ಅದು 10 ಮಾರ್ಚ್ 1990ರ ಇಸವಿ. ಸುಮಾರು 32 ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಈ ಕರ್ಫ್ಯೂ ಅಂದು ಸಡಿಲಗೊಂಡಿದ್ದರಿಂದ ಎಂದಿನಂತೆ ಕೆಲಸ ಮುಗಿಸಿಕೊಂಡು ಟೆಲಿಕಾಂ ಇಂಜಿನಿಯರ್ ಆಗಿದ್ದ ಶಾಹೀದ್ ಬಾಲ್ ಕ್ರಿಶನ್ ಗಂಜು ಮನೆಗೆ ಆಗಮಿಸುತ್ತಿದ್ದರು. ಅವರ ಹಿಂದೆಯೇ ಭಯೋತ್ಪಾದಕರು ಹಿಂಬಾಲಿಸುತ್ತಿದ್ದಾರೆ ಎನ್ನುವ ಕೊಂಚ ಸುಳಿವೂ ಅವರಿಗೆ ಸಿಕ್ಕಿರಲಿಲ್ಲ. ತಮ್ಮ ಪಾಡಿಗೆ ತಾವು ನಿರಾಳವಾಗಿ ಮನೆಯತ್ತ ಹೆಜ್ಜೆ ಇಟ್ಟಿದ್ದರು. ಮುಂದೆ ಮುಂದೆ ಗಂಜು, ಹಿಂದೆಯೇ ಭಯೋತ್ಪಾದಕರು.

ಗಂಜುಗಾಗಿ ಮನೆಯ ಬಾಗಿಲಿನಲ್ಲೇ ಕಾಯುತ್ತಿದ್ದ ಪತ್ನಿಯು, ತನ್ನ ಪತಿಯ ಹಿಂದೆ ಭಯೋತ್ಪಾದಕರು ಸದ್ದಿಲ್ಲದೇ ಬರುತ್ತಿದ್ದಾರೆ ಎನ್ನುವುದನ್ನು ಗಮನಿಸಿದರು. ತಕ್ಷಣವೇ ಪತಿಯನ್ನು ಮನೆಯೊಳಗೆ ಕರೆದುಕೊಂಡು ಬಾಗಿಲು ಹಾಕಿಕೊಂಡರು. ತಮ್ಮ ಹಿಂದೆಯೇ ಭಯೋತ್ಪಾದಕರು ಬರುತ್ತಿದ್ದಾರೆ ಎನ್ನುವ ಸುದ್ದಿಯನ್ನು ಕೇಳಿ, ಗಂಜು ಆಘಾತಕ್ಕೆ ಒಳಗಾದರು. ಭದ್ರವಾಗಿ ಬಾಗಿಲು ಹಾಕಿಕೊಂಡು, ಚಿಲಕ ಕೂಡ ಹಾಕಿದರು. ಇದನ್ನೂ ಓದಿ:  ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

ಕೊಲ್ಲಲಿಕ್ಕೆ ಬಂದಿದ್ದ ಭಯೋತ್ಪಾದಕರು ಬಾಗಿಲು ಒಡೆದರು, ಮನೆಗೆ ನುಗ್ಗಿದರು. ಮನೆಯಲ್ಲಿದ್ದವರನ್ನು ಕೊಲ್ಲುತ್ತಾ ಸಾಗಿದರು. ಈ ವೇಳೆಯಲ್ಲಿ ಭಯೋತ್ಪಾದಕರಿಂದ ತಪ್ಪಿಸಿಕೊಳ್ಳಲು ಗಂಜು ಮೂರನೇ ಮಹಡಿಯತ್ತ ಓಡಿದರು. ಎಲ್ಲಿ ತಪ್ಪಿಸಿಕೊಳ್ಳುವುದು ಅಂತ ಗೊತ್ತಾಗದೇ ಕಂಗಾಲಾದರು. ಅಲ್ಲಿಯೇ ಇದ್ದ ಅಕ್ಕಿ ತುಂಬಿದ್ದ ಡ್ರಮ್ ನೊಳಗೆ ಬಚ್ಚಿಟ್ಟುಕೊಂಡರು. ಇವರನ್ನು ಹುಡುಕ್ತಾ ಇದ್ದ ಭಯೋತ್ಪಾದಕರು ಇಡೀ ಮನೆಯನ್ನು ಧ್ವಂಸ ಮಾಡಿದರು. ಇಂಚಿಂಚು ಜಾಗ ಬಿಡದೇ ಹುಡುಕಿದರು. ಕೊನೆಗೆ ಅಕ್ಕಿ ಡ್ರಮ್ ನಲ್ಲಿ ಅವಿತು ಕುಳಿತಿದ್ದ ಗಂಜು ಕಣ್ಣೀಗೆ ಬಿದ್ದರು. ಅಕ್ಕಿ ಡಬ್ಬಿಯಲ್ಲೇ ಕೊಂದರು. ಅದೇ ಅಕ್ಕಿಯಿಂದ ಅನ್ನ ಮಾಡಿಕೊಂಡು ಅವರ ಮಕ್ಕಳೇ ತಿನ್ನಲಿ ಎಂದು ಕ್ರೂರತೆ ಮೆರೆದರು.

ಇದು ನಿಜವಾಗಿ ನಡೆದ ಘಟನೆ ಎಂದು ಸ್ವತಃ ಗಂಜು ಅವರ ಸಹೋದರಿಯೇ ಸೋಷಿಯಲ್ ಮೀಡಿಯಾದ ಮೂಲಕ ಬರೆದುಕೊಂಡಿದ್ದಾರೆ. ಅಂದಹಾಗೆ ಈ ಗಂಜು ಅವರು ಭಯೋತ್ಪಾದಕರಿಂದ ಹತ್ಯೆಯಾಗಿ 19 ಮಾರ್ಚ್ 2022ಕ್ಕೆ 32 ವರ್ಷಗಳ ಆಗಿವೆ. ಈ ಸಂದರ್ಭದಲ್ಲಿ ಗಂಜು ಸಹೋದರಿ, ಈ ಎಲ್ಲ ವಿಷಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *