ಗಿಡನೆಟ್ಟು ಮಗಳ ಹುಟ್ಟು ಹಬ್ಬ ಆಚರಿಸಿದ ಪ್ರೇಮಲೋಕದ ನಟಿ

Public TV
1 Min Read

ವಿಚಂದ್ರನ್ ನಿರ್ದೇಶಿಸಿ, ನಟಿಸಿರುವ ಪ್ರೇಮಲೋಕ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ, ಬಾಲಿವುಡ್ ನಟಿ ಜೂಹಿ ಚಾವ್ಲಾ ನಾಡು ಮೆಚ್ಚುವಂಥ ಕೆಲಸ ಮಾಡಿದ್ದಾರೆ. ಪುತ್ರಿ ಜಾಹ್ನವಿಯ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿರುವ ಜೂಹಿ, ಸಾವಿರ ಗಿಡಗಳನ್ನು ನೆಡುವ ಮೂಲಕ ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ.

ಜಾಹ್ನವಿಗೆ 23 ವರ್ಷದ ಹುಟ್ಟು ಹಬ್ಬ ಸಂಭ್ರಮ. ಇದಕ್ಕೆ ಉಡುಗೊರೆಯಾಗಿ ಸಾವಿರ ಸಸಿಗಳನ್ನು ಜೂಹಿ ನೀಡಿದ್ದಾರೆ. ಅವುಗಳನ್ನು ಬೆಳೆಸುವ ಗುರಿಯನ್ನೂ ಅವರು ಹೊಂದಿದ್ದಾರೆ. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲರೂ ಇದೇ ಮಾದರಿಯನ್ನು ಅನುಸರಿಸುವಂತೆ ಅಭಿಮಾನಿಗಳು ಹೇಳಿದ್ದಾರೆ.

ಜೂಹಿ ಚಾವ್ಲಾ ಅದ್ಭುತ ನಟಿ. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಜೊತೆಗೆ ಬಾಲಿವುಡ್ ನ ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Share This Article