ಕೊನೆಗೂ ಸಿಕ್ತು ಮಹಾತ್ಮ ಗಾಂಧೀಜಿ ಚಿತಾಭಸ್ಮಕ್ಕೆ ಶಾಶ್ವತ ಸ್ಮಾರಕ

Public TV
2 Min Read

ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಾಥೂರಾಮ್ ಗೋಡ್ಸೆಯ ಗುಂಡೇಟಿಗೆ ಬಲಿಯಾಗಿ 74 ವರ್ಷಗಳೇ ಸಂದಿವೆ. ಆದರೆ ಅವರ ಆತ್ಮಕ್ಕೆ ಮುಕ್ತಿ ದೊರಕಿಸುವ ಕಾರ್ಯವನ್ನು ಆ ಊರಿನ ಜಿಲ್ಲಾಡಳಿತ ಅಷ್ಟು ವರ್ಷಗಳಿಂದ ಮಾಡಲೇ ಇಲ್ಲ ಎನ್ನೋದು ವಿಪರ್ಯಾಸ. ಆದರೆ ಕೊನೆಗೂ ಅವರ ಆತ್ಮಕ್ಕೆ ಶಾಂತಿ ದೊರಕಿಸುವ ಕಾಲ ಕೂಡಿ ಬಂದಿದೆ. ಇದೇನು ಅಂತ ಅಚ್ಚರಿ ಪಡಬೇಡಿ.

ಹೌದು, 1948ರ ಜನವರಿಯಲ್ಲಿ ಬಾಪೂ ಅವರ ಹತ್ಯೆಯಾಗಿ ಸಂಸ್ಕಾರ ನೆರವೇರಿದ ಬಳಿಕ ಅವರ ಚಿತಾಭಸ್ಮವನ್ನು ಕೊಡಗಿಗೂ ತರಲಾಗಿತ್ತು. ಅಂದಿನಿಂದ ಇಂದಿನವರೆಗೆ ಅವರ ಚಿತಾಭಸ್ಮವನ್ನು ಶಾಶ್ವತವಾಗಿ ಒಂದೆಡೆ ಇರಿಸಿ ಗೌರವ ಸಲ್ಲಿಸಲು ಸಾಧ್ಯವೇ ಆಗಿರಲಿಲ್ಲ. ಬದಲಾಗಿ ಜಿಲ್ಲಾ ಖಜಾನೆಯಲ್ಲಿ ಚಿತಾಭಸ್ಮವನ್ನು ಇರಿಸಲಾಗಿತ್ತು.

ಪ್ರತಿವರ್ಷ ಅವರ ಪುಣ್ಯಸ್ಮರಣೆ ದಿನದಂದು ಅವರ ಚಿತಾಭಸ್ಮವನ್ನು ಸರ್ಕಾರಿ ಗೌರವದೊಂದಿಗೆ ಮೆರವಣಿಗೆಯಲ್ಲಿ ತರಲಾಗುತ್ತಿದೆ. 1934 ಫೆಬ್ರವರಿ 21ರಂದು ಗಾಂಧೀಜಿ ಅವರು ಕೊಡಗಿಗೆ ಭೇಟಿ ನೀಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕುವಂತೆ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಸ್ಥಳದಲ್ಲಿ ಚಿತಾಭಸ್ಮವನ್ನು ಇರಿಸಲಾಗಿತ್ತು. ಬಳಿಕ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿ ಚಿತಾಭಸ್ಮವನ್ನು ಮತ್ತೆ ಖಜಾನೆಯಲ್ಲೇ ಇರಿಸಲಾಗುತಿತ್ತು. ಆದರೆ ಅವರ ಚಿತಾಭಸ್ಮಕ್ಕೆ ದೆಹಲಿಯಲ್ಲಿರುವ ರಾಜ್‍ಘಾಟ್‍ನಂತೆ ಮಡಿಕೇರಿಯಲ್ಲೂ ಗಾಂಧಿ ಭವನ ನಿರ್ಮಿಸಬೇಕೆಂದು ಸರ್ವೋದಯ ಸಮಿತಿ ಸೇರಿದಂತೆ ನೂರಾರು ಜನರು ಹೋರಾಟ ನಡೆಸುತ್ತಿದ್ದರು.

ಕಳೆದ ಬಜೆಟ್‌ನಲ್ಲಿ ಈಗಿರುವ ಗಾಂಧಿ ಮೈದಾನದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ 50 ಲಕ್ಷ ರೂ. ಘೋಷಿಸಿತ್ತು. ವಿಪರ್ಯಾಸವೆಂದರೆ ಜಾಗದ ದಾಖಲೆಗಳ ಸಮಸ್ಯೆಯಿಂದಾಗಿ ಆ ಕನಸು ಈಡೇರಿರಲೇ ಇಲ್ಲ. ಹಲವು ಜಿಲ್ಲಾಧಿಕಾರಿಗಳು ಬಂದು ಹೋದರೂ ಯಾರೂ ಅದನ್ನು ಸಾಕಾರಗೊಳಿಸಲೇ ಇಲ್ಲ. ಇದೀಗ ಜಿಲ್ಲೆಗೆ ಬಂದಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್ ಅವರು 32 ಸೆಂಟ್ ಜಾಗವನ್ನು ಗಾಂಧಿ ಭವನಕ್ಕಾಗಿ ಮಂಜೂರು ಮಾಡಿದ್ದಾರೆ. ಇದು ಗಾಂಧಿ ಸ್ಮಾರಕಕ್ಕಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದ ಸರ್ವೋದಯ ಸಮಿತಿ ಮತ್ತಿತರರಿಗೆ ಖುಷಿ ತಂದಿದೆ.

ಅದಕ್ಕಿಂತ ಮುಖ್ಯವಾಗಿ ಗಾಂಧೀಜಿ ಅವರ ಆತ್ಮಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಕೂಡಿ ಬಂದಿದೆ. ರಾಜ್ ಘಾಟಿನಲ್ಲಿ ಇರುವಂತೆ ಅದ್ಭುತವಾದ ಸ್ಮಾರಕ ನಿರ್ಮಿಸಬೇಕು. ಆ ಮೂಲಕ ಕೊಡಗಿಗೆ ಬರುವ ಸಾವಿರಾರು ಜನರು ಬಾಪೂ ಅವರ ಚಿತಾಭಸ್ಮದ ದರ್ಶನ ಪಡೆದು ಅವರ ಆದರ್ಶಗಳನ್ನು ಪಾಲಿಸುವಂತೆ ಮಾಡಬೇಕಾಗಿದೆ ಎನ್ನುವುದು ಹಿರಿಯ ರಾಜಕೀಯ ಮುತ್ಸದಿ ಎಂ. ಸಿ ನಾಣಯ್ಯ ಅವರ ಅಭಿಪ್ರಾಯವಾಗಿದೆ. ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭವನದ ನೀಲನಕ್ಷೆ ಸೇರಿದಂತೆ ಯೋಜನೆಯ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸದ್ಯ ಕಳೆದ ಬಜೆಟ್‌ನಲ್ಲೇ ಘೋಷಣೆ ಆಗಿದ್ದ ಹಣ ವಾಪಸ್ ಆಗಿದ್ದು, ಆ ಹಣದ ಬಿಡುಗಡೆಗೆ ಒತ್ತಾಯಿಸುತ್ತೇವೆ ಎಂದು ಸರ್ವೋದಯ ಸಮಿತಿ ಮುಖಂಡ ಟಿ.ಪಿ. ರಮೇಶ್ ಹೇಳಿದ್ದಾರೆ. ಸಪ್ತಪದಿ ಯೋಜನೆಗೆ ಮರುಚಾಲನೆ ನೀಡಿದ ಶಶಿಕಲಾ ಜೊಲ್ಲೆ

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಜಿಲ್ಲಾಡಳಿತದ ಖಜಾನೆಯಲ್ಲಿ ಇಟ್ಟು ವರ್ಷದ ಎರಡು ದಿನಗಳು ಮಾತ್ರ ಗಾಂಧೀಜಿ ಅವರ ಚಿತಾಭಸ್ಮಕ್ಕೆ ಗೌರವ ಕೊಡುತ್ತಿತ್ತು. ಇದೀಗ ಗಾಂಧೀಜಿ ಚಿತಾಭಸ್ಮಕ್ಕೆ ಶಾಶ್ವತ ಸ್ಮಾರಕ ಮಾಡಲು ಮುಂದಾಗಿರುವುದು ನಿಜಕ್ಕೂ ಗಾಂಧೀಜಿ ಅವರ ಆತ್ಮಕ್ಕೆ ಶಾಂತಿ ದೊರಕಿಸುವ ಕಾಲ ಕೂಡಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *