ನಾಯಿ ಕಳೆದುಕೊಂಡ ನೋವು: ಪ್ರಚಾರಕ್ಕೆ ಬಾರದ ರಮ್ಯಾ

Public TV
1 Min Read

ಸ್ಯಾಂಡಲ್ ವುಡ್ ಖ್ಯಾತ ನಟಿ ರಮ್ಯಾ (Ramya) ಅವರು ಎರಡು ದಿನಗಳ ಹಿಂದೆಯಷ್ಟೇ ತಮ್ಮ ನೆಚ್ಚಿನ ನಾಯಿ ಚಾಂಪ್ (Champ) ನನ್ನು ಕಳೆದುಕೊಂಡಿದ್ದಾರೆ (Death). ಮುದ್ದಿನ ನಾಯಿಯನ್ನು (Dog) ಕಳೆದುಕೊಂಡ ದುಃಖದಲ್ಲಿರುವ ರಮ್ಯಾ, ಮನೆಯಿಂದ ಆಚೆ ಬಾರದಷ್ಟು ನೋವಿನಲ್ಲಿದ್ದಾರೆ. ಹೀಗಾಗಿಯೇ ಎರಡು ದಿನಗಳಿಂದ ಅವರು ಯಾವುದೇ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿಲ್ಲ. ಮನೆಯಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ತಮ್ಮ ಮುದ್ದಿನ ಶ್ವಾನ ನಾಪತ್ತೆ ವಿಷಯ ತಿಳಿಯುತ್ತಿದ್ದಂತೆ ರಮ್ಯ ಕಣ್ಣೀರು ಹಾಕಿದ್ದರು. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಈ ಮಾಹಿತಿ ಸಿಗುತ್ತಿದ್ದಂತೆ ತೀವ್ರ ನೊಂದುಕೊಂಡಿದ್ದ ರಮ್ಯಾ, ತಕ್ಷಣ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಸಿದ್ದರು. ಅವರು ಬೆಂಗಳೂರಿಗೆ ಬರುವಷ್ಟರಲ್ಲಿ ಚಾಂಪ್ ನಿಧನ ಹೊಂದಿದ ಸುದ್ದಿ ಅವರಿಗೆ ಮತ್ತಷ್ಟು ಆಘಾತ ತರಿಸಿತ್ತು. ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ತಮಿಳು ನಾಡಿನಲ್ಲಿ ಪ್ರದರ್ಶನವಿಲ್ಲ

ಶನಿವಾರ ರಮ್ಯಾ ವಾಸವಿದ್ದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅದಾದ ಕೆಲವು ಹೊತ್ತಿನ ನಂತರ ಚಾಂಪ್ ಇನ್ನಿಲ್ಲ ಎಂದು ಅವರೇ ಬಹಿರಂಗ ಪಡಿಸಿದರು.

ರಮ್ಯಾ ಅವರಿಗೆ ನಾಯಿ ಅಂದರೆ ಎಲ್ಲಿಲ್ಲದ ಪ್ರೀತಿ. ನಾಯಿ ಕಥೆಯನ್ನು ಇಟ್ಟುಕೊಂಡೇ ಅವರೊಂದು ಸಿನಿಮಾ ಕೂಡ ಮಾಡಿದ್ದಾರೆ. ‘ನಾನು ಏನ್ ಮಾಡ್ಲಿ ಸ್ವಾಮಿ.. ನನ್ನ ಹುಡುಗಿ ನಾಯಿ ಪ್ರೇಮಿ’ ಎನ್ನುವ ಹಾಡು ಕೂಡ ಸಖತ್ ಫೇಮಸ್ ಆಗಿತ್ತು. ಇದೀಗ ನಾಯಿಯನ್ನು ಕಳೆದುಕೊಂಡು ದುಃಖ ಪಡುತ್ತಿದ್ದಾರೆ ರಮ್ಯಾ.

Share This Article