ಬೆಂಗಳೂರಿನಲ್ಲಿ ಪರಂಪರೆ ವೈಭವ ಸಾರುವ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಮಳಿಗೆ ಉದ್ಘಾಟನೆ

Public TV
4 Min Read

ಮದುವೆ.. ಮುಂಜಿ ಹಾಗೂ ಮನೆಯಲ್ಲಿ ಸಣ್ಣಪುಟ್ಟ ಸಮಾರಂಭಗಳಿಗೂ ಮೊದಲು ನೆನಪಾಗುವುದೇ ಆಭರಣ. ಚಿನ್ನ, ವಜ್ರ, ಬೆಳ್ಳಿ ಆಭರಣಗಳೆಂದರೆ ಅಲಂಕಾರ ಪ್ರಿಯರಿಗೆ ಅಚ್ಚುಮೆಚ್ಚು. ಈ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನ ಮುಕುಟಕ್ಕೆ ಮತ್ತೊಂದು ಚಿನ್ನದ ಗರಿ ಸೇರ್ಪಡೆಯಾಗಿದೆ. ಪರಿಶುದ್ಧ ಚಿನ್ನ, ಮನಮೋಹಕ ವಿನ್ಯಾಸ, ಸರಿಸಾಟಿಯಿಲ್ಲದ ಗುಣಮಟ್ಟ ಹಾಗೂ ಅಸಾಮಾನ್ಯ ಸೇವೆಗೆ ಹೆಸರಾಗಿರುವ ʻದಿ ಒರಿಜಿನಲ್‌ ಆಭರಣʼ ಜ್ಯುವೆಲ್ಲರ್ಸ್‌ನ (Original Abharan Jewellers) ನೂತನ ಶಾಖೆ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿದೆ.

ಉಡುಪಿಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಬೆಂಗಳೂರು ನಗರದಲ್ಲಿ (Bengaluru City) ತನ್ನ ಮೊದಲ ಶಾಖೆ ತೆರೆದಿದೆ. 90 ವರ್ಷಗಳ ವಿಶ್ವಾಸಾರ್ಹ ಪರಂಪರೆ ಉಳಿಸಿಕೊಂಡು ಬಂದಿರುವ ʻಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಜಯನಗರ 5ನೇ ಬ್ಲಾಕ್‌ನ 41ನೇ ಎ ಕ್ರಾಸ್‌ ರಸ್ತೆಯಲ್ಲಿ ತನ್ನ 20ನೇ ಮಳಿಗೆಯನ್ನ ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಮಳಿಗೆ ಉದ್ಘಾಟನೆಯ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಖ್ಯಾತ ಕೊಳಲು ವಾದಕ ಡಾ.ಪ್ರವೀಣ್‌ ಗೋಡ್ಕಿಂಡಿ ಮಳಿಗೆಯನ್ನ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಸಹ ಪಾಲ್ಗೊಂಡಿದ್ದರು.

ಅತ್ಯಾಧುನಿಕ ಹಾಗೂ ಟ್ರೆಂಡಿಂಗ್ ವಿನ್ಯಾಸ, ಶುದ್ಧತೆಯ ಖಾತ್ರಿಯೊಂದಿಗೆ ತಯಾರಾದ ಚಿನ್ನ, ಬೆಳ್ಳಿ, ಹವಳ ಹಾಗೂ ವಜ್ರಾಭರಣಗಳೊಂದಿಗೆ ಗ್ರಾಹಕರಿಗೆ ವಿಶಿಷ್ಟ ಅನುಭವನ್ನು ಈ ಆಭರಣ ಮಳಿಗೆ ಒದಗಿಸಲಿದೆ.

ಗುಣಮಟ್ಟದಲ್ಲಿ ರಾಜಿ ಇಲ್ಲ
ನೂತನ ಮಳಿಗೆ ಆರಂಭವಾದ ಕುರಿತು ಮ್ಯಾನೇಜಿಂಗ್‌ ಡೈರೆಕ್ಟರ್‌ ಸುಭಾಷ್‌ ಕಾಮತ್‌ ಮಾತನಾಡಿ, ಬೆಂಗಳೂರಿನಲ್ಲಿ ಮಳಿಗೆ ತೆರೆದಿರೋದು ತುಂಬಾ ಖುಷಿ ಆಗ್ತಿದೆ, ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ. 1935ರಲ್ಲಿ ನಮ್ಮ ತಾತ ಸ್ಥಾಪಿಸಿದ ಈ ಉದ್ಯಮ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ, ಚಿನ್ನದ ಶುದ್ಧತೆ ಕಾಪಡಿಕೊಂಡು ಸಾಗಿತು. ಹೀಗೆ ಪ್ರಾರಂಭವಾದ ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ 90 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗೋಲ್ಡ್‌ ಕಾಯಿನ್‌ ಆಫರ್‌ ಇದೆ
ಸದ್ಯ ಚಿನ್ನದ ಬೆಲೆ ಜಾಸ್ತಿ ಆಗಿದೆ, ಇಂದಿನ ಯುವಜನ ಹೆವಿ ಜ್ಯುವೆಲರ್ಸ್‌ ಉಪಯೋಗಿಸಲ್ಲ. ಹಾಗಾಗಿಯೇ ಚಿನ್ನ, ವಜ್ರ ಹಾಗೂ ಬೆಳ್ಳಿಯಲ್ಲಿ ಹಗುರವಿರುವ ಆಭರಣಗಳ ಕಲೆಕ್ಷನ್ಸ್‌ ಇದೆ. 15,000 ರೂ. ಆರಂಭಿಕ ಬೆಲೆಯಿಂದ ಶುರುವಾಗಲಿದ್ದು, ಪ್ರತಿ ಚಿನ್ನದ ಖರೀದಿ ಮೇಲೆ 1 ಚಿನ್ನದ ನಾಣ್ಯ ಫ್ರೀ ಕೊಡಲಿದ್ದೇವೆ. ಡೈಮಂಡ್‌ ಖರೀದಿ ಮೇಲೆ 12,000 ರೂ. ಗ್ಯಾರಂಟಿ ಆಫರ್‌ ಇದೆ. ನಮ್ಮದೇ ಕಾರ್ಖಾನೆಯಲ್ಲಿ ಎಲ್ಲ ಆಭರಣಗಳು ತಯಾರಾಗುತ್ತವೆ. ನಮ್ಮದೇ ಡಿಸೈನ್‌ ಟೀಂ ಇವುಗಳನ್ನ ತಯಾರಿಸುತ್ತೆ, ಹಾಗಾಗಿ ನಿಖರತೆ ಕೊಡಲು ಸಾಧ್ಯವಾಗಿದೆ. ಆದ್ದರಿಂದ ಬೇರೆ ಆಭರಣ ಮಳಿಗೆಗಳಿಗಿಂತ ನಾವು ಭಿನ್ನ ಅಂತ ತಿಳಿಸಿದ್ರು. ಅಲ್ಲದೇ ನಾವು ಇಷ್ಟು ಸಮಯ ಬೇರೆ ಬೇರೆ ಕಡೆ ಮಳಿಗೆ ಶುರು ಮಾಡಿದ್ದೇವೆ, ಅವೆಲ್ಲವೂ ಒಂದು ರೂಪಕ್ಕೆ ಬಂದಿದೆ. ಇಲ್ಲಿನ ಮಳಿಗೆಯನ್ನ ಇನ್ನಷ್ಟು ದೊಡ್ಡದಾಗಿ ಬೆಳೆಯುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮಳಿಗೆ ತೆರೆದಿದ್ದೇವೆ. ಇದಕ್ಕೆ ಬೆಂಗಳೂರಿನ ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ರು.

ಸಂಸ್ಥೆಯ ಸಂಧ್ಯಾ ಸುಭಾಷ್‌ ಕಾಮತ್‌ ಮಾತನಾಡಿ, ಬೆಂಗಳೂರಿನಲ್ಲಿ ಮೊದಲ ಮಳಿಗೆ ತೆರೆದಿದ್ದೇವೆ. ಇದು ನಮ್ಮ 20ನೇ ಶಾಖೆ ಅಂತ ಹೇಳಿಕೊಳ್ಳಲು ನಿಜಕ್ಕೂ ತುಂಬಾ ಸಂತಸವಾಗುತ್ತದೆ. ಬಹುಕಾಲದಿಂದ ಕರಾವಳಿ ಕರ್ನಾಟಕ ಭಾಗದಲ್ಲಿ ನಮ್ಮ ಮಳಿಗೆಗಳನ್ನ ತೆರೆದಿದ್ದೇವೆ. ಗೋವಾದಲ್ಲೂ 2 ಮಳಿಗೆ ಓಪನ್‌ ಆಗಿದೆ. ಬೆಂಗಳೂರಿನಲ್ಲಿ ತೆರೆಯಲು ಇದು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆವು, ಈಗ ಅದು ನೆರವೇರಿದೆ ಎಂದು ತಿಳಿಸಿದರು.

ಡೈಮಂಡ್‌ ಸೆಕ್ಷನ್‌ ಉದ್ಘಾಟಿಸಿದ ರೇವತಿ ಕಾಮತ್‌ ಮಾತನಾಡಿ, ಉಡುಪಿಯ ಒರಿಜಿನಲ್‌ ಆಭರಣ ಇಲ್ಲಿ ಉದ್ಘಾಟನೆಗೊಂಡಿದೆ. ನಾನು ಕೂಡ ಉಡುಪಿ ಆಭರಣ ಮಳಿಗೆಯಲ್ಲೇ ಖರೀದಿ ಮಾಡ್ತೀವಿ. ಆಭರಣ ಸಂಸ್ಥೆಯು ತನ್ನದೇ ಆದ ಪರಂಪರೆ ಕಾಪಾಡಿಕೊಂಡು ಬಂದಿದೆ, ಹಾಗೆಯೇ ಗುಣಮಟ್ಟವನ್ನೂ ಉಳಿಸಿಕೊಂಡಿದೆ. ನನ್ನ ಗಂಡ ಉಡುಪಿಯವರೇ ಆಗಿರುವುದರಿಂದ ನಾವು ಪ್ರತಿ ವರ್ಷವೂ ಉಡುಪಿಗೆ ಹೋಗುತ್ತಿರುತ್ತೇವೆ. ದಿ ಒರಿಜಿನಲ್‌ ಆಭರಣ ಜುವೆಲ್ಲರ್ಸ್‌ನಿಂದ ಖರೀದಿಸಿದ ಚಿನ್ನಾಭರಣ ಅತ್ಯುನ್ನತ ಗುಣಮಟ್ಟದ ಹೊಂದಿರುತ್ತವೆ. ಇಂತಹ ವಿಶ್ವಾಸಾರ್ಹ ಸಂಸ್ಥೆಯಿಂದ ಚಿನ್ನಾಭರಣ ಕೊಳ್ಳುವ ಅವಕಾಶ ಇಂದು ಬೆಂಗಳೂರಿಗರಿಗೆ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಳಿಗೆ ಉದ್ಘಾಟಿಸಿದ ಖ್ಯಾತ ಕೊಳಲು ವಾದಕ ಡಾ.ಪ್ರವೀಣ್‌ ಗೋಡ್ಕಿಂಡಿ ಮಾತನಾಡಿ, ʻದಿ ಒರಿಜಿನಲ್‌ ಆಭರಣʼ ಜುವೆಲ್ಲರ್ಸ್‌ ಗ್ರಾಹಕರಿಂದ ಪಡೆಯುವ ಹಣಕ್ಕೆ ಸೂಕ್ತ ಗುಣಮಟ್ಟದ ಚಿನ್ನಾಭರಣ ನೀಡುತ್ತಾ 90 ವರ್ಷಗಳಿಂದ ಎಲ್ಲರ ವಿಶ್ವಾಸಾರ್ಹತೆ ಕಾಯ್ದುಕೊಂಡು ಬಂದಿದೆ. ಈಗ ತನ್ನ 20ನೇ ಶಾಖೆ ತೆರೆದಿರುವುದೇ ಅದರ ಗುಣಮಟ್ಟಕ್ಕೆ ನಿದರ್ಶನವಾಗಿದೆ. ಉಡುಪಿಯಲ್ಲಿ ಹೋದಾಗ ನನಗೋಸ್ಕರ ಬ್ರೇಸ್‌ಲೆಟ್‌, ಆಭರಣಗಳನ್ನ ಖರೀದಿ ಮಾಡ್ತೀನಿ. ಗೋಲ್ಡ್‌, ಸಿಲ್ವರ್‌, ಡೈಮಂಡ್‌ನಲ್ಲಿ ವೈವಿಧ್ಯತೆ ಇದೆ. ಅಲ್ಲದೇ ನಿಮಗೆ ಬೇಕಾದ ಡಿಸೈನ್‌ಗಳನ್ನೂ ಹೇಳಿ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

ಸಂಸ್ಥೆಯ ಮಹೇಶ್‌ ಕಾಮತ್‌ ಮಾತನಾಡಿ, ಮೆಟ್ರೋ ಸಿಟಿಯಲ್ಲಿ ಮಳಿಗೆ ಶುರು ಮಾಡಿದ್ದು ತುಂಭಾ ಖುಷಿಯಿದೆ. ಬೆಂಗಳೂರು ಜನ ಪ್ರೋತ್ಸಾಹ ನೀಡಿ ಬೆಳೆಸಬೇಕು. ಯುವ ಸಮೂಹಕ್ಕೆ 25,000 ರೂ. ನಿಂದ ಲೈಟ್‌ವೆಟ್‌ ಆಭರಣಗಳ ಕಲೆಕ್ಷನ್ಸ್‌, ದಿನನಿತ್ಯ ಬಳಕೆಗೆ, ಕಚೇರಿಗಳು, ಹಬ್ಬ ಮದುವೆ ಸಮಾರಂಭಗಳಿಗೆ ವೈವಿದ್ಯಮಯ ಆಭರಣಗಳಿವೆ. ಹಬ್ಬಗಳಿಗೆ ವಿಶೇಷ ಆಫರ್‌ಗಳು ಲಭ್ಯವಿರಲಿವೆ. ಜೊತೆಗೆ ಹಳೇ ಚಿನ್ನಗಳ ಮೇಲೆ ವಿಶೇಷ ಆಫರ್‌ ಇರಲಿದೆ ಎಂದು ವಿವರಿಸಿದರು.

ಈ ಸಮಾರಂಭಕ್ಕೆ ವೀಣಾ ಮಹೇಶ್‌ ಕಾಮತ್‌, ಡಾ.ಅರುಣ್‌ ಕುಡ್ವಾ, ಕ್ಷಮಾ ಕುಡ್ವಾ, ಸಾತ್ವಿಕ್‌ ಕಾಮತ್‌, ಆಕರ್ಷ್ ಕಾಮತ್‌, ಆರ್‌ಎನ್‌ಎಸ್‌ ಗ್ರೂಪ್‌ನ‌ ನವೀನ್‌ ಶೆಟ್ಟಿ, ಸೆಂಚುರಿ ಬಿಲ್ಡರ್‌ನ ಮೋಹಿನಿ ದಯಾನಂದ್‌ ಪೈ, ಸಬಿತಾ ಸತೀಶ್‌ ಪೈ, ಉಲ್ಲಾಸ್‌ ಕಾಮತ್‌ ಮತ್ತಿತರರು ಸಾಕ್ಷಿಯಾದರು.

Share This Article