26 ಕಿ.ಮೀ ದೀರ್ಘದಂಡ ನಮಸ್ಕಾರದ ಹರಕೆ ತೀರಿಸುತ್ತಿರುವ ‘ನಮೋ’ ಭಕ್ತ

Public TV
1 Min Read

ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆ 26 ಕಿಲೋಮೀಟರ್ ದೀರ್ಘ ದಂಡ ನಮಸ್ಕಾರ ಮಾಡುವ ಹರಕೆ ಹೊತ್ತುಕೊಂಡಿದ್ದ ನಮೋ ಅಭಿಮಾನಿಯೊಬ್ಬರು ಶ್ರದ್ಧೆಯಿಂದ ಹರಕೆ ತೀರಿಸುತ್ತಿದ್ದಾರೆ.

ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದ ನಿವಾಸಿ ರಾಜಣ್ಣ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದರಂತೆ. ಕೊಟ್ಟೂರಿನ ಶ್ರೀಗುರುಕೊಟ್ಟೂರೇಶ್ವ ದೇವರಿಗೆ ಮತ್ತೆ ಮೋದಿ ಪ್ರಧಾನಿಯಾದರೆ ದೀರ್ಘ ದಂಡ ನಮಸ್ಕಾರ ಮಾಡುತ್ತೇನೆ ಎಂದು ಹರಕೆ ಹೊತ್ತುಕೊಂಡಿದ್ದರು. ಲೋಕಸಮರದಲ್ಲಿ ಸ್ಪಷ್ಟ ಬಹುಮತ ಪಡೆದು ಮತ್ತೆ ಪ್ರಧಾನಿ ಪಟ್ಟವನ್ನು ಮೋದಿ ಅಲಂಕರಿಸುತ್ತಿರುವ ಹಿನ್ನೆಲೆ ಇಂದು 26 ಕಿಲೋಮೀಟರ್ ವರೆಗೂ ದೀರ್ಘ ದಂಡ ನಮಸ್ಕಾರ ಮಾಡುವ ಹರಕೆಯನ್ನು ನಮೋ ಭಕ್ತ ತೀರಿಸುತ್ತಿದ್ದಾರೆ. ಇದನ್ನೂ ಓದಿ:ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ – ರಂಗೋಲಿಯಲ್ಲಿ ಅರಳಿದ ಕಮಲ, ಮೋದಿ

ರಾಜಣ್ಣ ಅವರಿಗೆ ಗ್ರಾಮಸ್ಥರು ಸಾಥ್ ನೀಡುತ್ತಿದ್ದಾರೆ. ಹನಸಿ ಗ್ರಾಮದಿಂದ ಕೊಟ್ಟೂರಿನ ಶ್ರೀಗುರುಕೊಟ್ಟೂರೇಶ್ವ ದೇವಸ್ಥಾನದವರೆಗೆ ಅಂದರೆ ಸುಮಾರು 26 ಕಿ.ಮೀ ದೀರ್ಘ ದಂಡ ನಮಸ್ಕಾರವನ್ನು ರಾಜಣ್ಣ ಮಾಡಿ ಹರಕೆ ತೀರಿಸಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೀರ್ಘದಂಡ ನಮಸ್ಕಾರ ಮಾಡುತ್ತ ಶ್ರೀಗುರುಕೊಟ್ಟೂರೇಶ್ವರ ದೇವಸ್ಥಾನದತ್ತ ರಾಜಣ್ಣ ಸಾಗುತ್ತಿದ್ದಾರೆ. ಇದನ್ನೂ ಓದಿ:2ನೇ ಬಾರಿಗೆ ಮೋದಿ ಪ್ರಮಾಣ ವಚನ- ಅಭಿಮಾನಿಯಿಂದ ಪ್ರತಿಮೆ ವಿತರಣೆ

ಲೋಕಸಮರದಲ್ಲಿ ಜಯಭೇರಿ ಬಾರಿಸಿ ಮತ್ತೆ ನರೇಂದ್ರ ಮೋದಿ ಅವರು ಇಂದು ಎರಡನೇ ಬಾರಿ ಪ್ರಧಾನಿ ಪಟ್ಟವನ್ನ ಅಲಂಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 6,500 ಮಂದಿ ಭಾಗಿಯಾಗುವ ನಿರೀಕ್ಷೆಗಳಿದ್ದು, ಕಾರ್ಯಕ್ರಮಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಪ್ಟ್ರಪತಿ ಹಾಗೂ ಪ್ರಧಾನಿ ತೀರ್ಮಾನದ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಪ್ರಮುಖವಾಗಿ ಕಾರ್ಯಕ್ರಮಕ್ಕೆ ಬಂಗಾಳ ಇನಿಷಿಯೇಟಿವ್ ಫಾರ್ ಮಲ್ಟಿ ಸೆಕ್ಟರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋ ಆಪರೇಷನ್ (ಬಿಮ್‍ಸ್ಟಿಕ್) ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ಮಾಯನ್ಮಾರ, ನೇಪಾಳ, ಭೂತಾನ್, ಥೈಲ್ಯಾಂಡ್ ರಾಷ್ಟ್ರಗಳ ಗಣ್ಯರು ಸೇರಿದಂತೆ ಶಾಂಘೈ ಕೋ ಆಪರೇಷನ್ ರಾಷ್ಟ್ರಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *