ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!

Public TV
1 Min Read

ಎಸ್‌ಎಂ ಕೃಷ್ಣ ಅವರು ತಿರುಪತಿ ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿದ್ದೇ ತಡ ಅದು ಅವರ ಜೀವನದಲ್ಲಿ ಒಂದು ವಿಶೇಷ ಬೆಳವಣಿಗೆಗೆ ನಾಂದಿ ಹಾಡಿತ್ತು. ಈ ಮೂಲಕ ಕೇಂದ್ರ ಸಚಿವರಾಗುವ ಸುದ್ದಿ ಸಿಕ್ಕಿತ್ತು.

ಹೌದು, 1983ರಲ್ಲಿ ಎಸ್.ಎಂ.ಕೃಷ್ಣ ಅವರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ಆ ಸಮಯದಲ್ಲಿ ಮಂಗಳಾರತಿ ತೆಗೆದುಕೊಳ್ಳಬೇಕಾದರೆ ಅವರ ವಾಚು ಕೈಯಿಂದ ಕಳಚಿ ಬಿತ್ತು. ಇದನ್ನು ದೇವಾಲಯದ ಅರ್ಚಕರು ಗಮನಿಸಿ, ಕೃಷ್ಣರ ಸ್ನೇಹಿತರಾಗಿದ್ದ ಸಿಂಗಾರಿಗೌಡರಿಗೆ ಕಳಚಿದ ವಾಚ್‌ನ್ನು ಹುಂಡಿಗೆ ಹಾಕಿಸಿ ಎಂದು ಹೇಳಿದರು.ಇದನ್ನೂ ಓದಿ: ದಿನ ಭವಿಷ್ಯ 11-12-2024

ಅದಾದ ಬಳಿಕ ಮತ್ತೆ ಅವರ ಪತ್ನಿ ಪ್ರೇಮಾ ಅವರ ಜೊತೆ ತಿರುಪತಿ ಹೋಗಿದ್ದರು. ಆಗ ತಮ್ಮ ವಾಚ್‌ನ್ನು ತಿಮ್ಮಪ್ಪನ ಹುಂಡಿಗೆ ಹಾಕಿ ಬಂದಿದ್ದರು. ಅಂದು ಮರಳಿ ಬೆಂಗಳೂರಿಗೆ ಬಂದು, ಮತ್ತೆ ಸಂಜೆ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳಿದ್ದರು. ಟೆನಿಸ್ ಕ್ಲಬ್‌ಗೆ ತೆರಳಿ ಆಡುತ್ತಿದ್ದರು. ಆ ದಿನ ರಾತ್ರಿ ದೆಹಲಿ ಬರುವಂತೆ ತುರ್ತು ಕರೆ ಬಂದಿದೆ.

ದೆಹಲಿಗೆ ತೆರಳಿದ ಎಸ್‌ಎಂ ಕೃಷ್ಣ ಅವರು ಪ್ರಧಾನಿ ಇಂದಿರಾ ಗಾಂಧಿ ಭೇಟಿಯಾದರು. ಆಗ ಪ್ರಧಾನಿಯವರು ಕೃಷ್ಣ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಸುದ್ದಿ ಸಿಕ್ಕಿತ್ತು. ಬಳಿಕ ಪ್ರಮಾಣವಚನ ಸ್ವೀಕಾರ ಮಾಡಿ ಕೇಂದ್ರ ಸಚಿವರೂ ಆದರು. ಇದು ಅವರ ಜೀವನದಲ್ಲಾದ ವಿಶೇಷ ಬೆಳವಣಿಗೆ. ತಿರುಪತಿ ದೇವರ ಸನ್ನಿಧಿಯಲ್ಲಿ ಮಾತ್ರ ಇಂತಹ ಪವಾಡ ನಡೆಯಲು ಸಾಧ್ಯ ಎಂದು ಎಸ್‌ಎಂಕೆ ನಂಬಿದ್ದರು. ಅವರಿಗೆ ದೇವರಲ್ಲಿ ಅಪಾರ ನಂಬಿಕೆ ಇತ್ತು. ಆದರೆ ಅದನ್ನು ಬಹಿರಂಗವಾಗಿ ಎಲ್ಲಿಯೂ ತೋರಿಸಿಕೊಡುತ್ತಿರಲಿಲ್ಲ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 11-12-2024

Share This Article