ಕೊಲೆ ಆರೋಪಿ ದರ್ಶನ್‌ಗೆ (Darshan) ಹೈಕೋರ್ಟ್ ನೀಡಿದ್ದ ಜಾಮೀನನ್ನ ಸುಪ್ರೀಂ ಕೋರ್ಟ್ ರದ್ದು ಮಾಡಿದ್ದು ಇದೀಗ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್‌ನಲ್ಲಿದ್ದಾರೆ. ಜೈಲಿಗೆ ಹೋಗೋಕೂ ಮುನ್ನ ಪೊಲೀಸರು ದಾಖಲಾತಿಗೆ ತೆಗೆದ ದರ್ಶನ್ ಫೋಟೋ ರಿವೀಲ್ ಆಗಿದ್ದು ದರ್ಶನ್ ಸಂಪೂರ್ಣವಾಗಿ ತಲೆ ಕೂದಲಿಗೆ ಕತ್ತರಿ ಹಾಕಿ ಬಾಲ್ಡ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ದಿಢೀರ್ ಎಂದು ದರ್ಶನ್ ತಲೆಕೂದಲು (Hair) ಹಾಗೂ ಮೀಸೆಯನ್ನು ತೆಗೆಸಿಕೊಂಡಿರೋದ್ರ ಹಿನ್ನೆಲೆ ಏನು? ಸುಪ್ರೀಂ ಆದೇಶ ಬರೋದಕ್ಕೂ ಮುನ್ನ ದರ್ಶನ್ ದರ್ಶನ್ ದೇವಸ್ಥಾನಕ್ಕೆ ತೆರಳಿ ಮುಡಿ ಕೊಟ್ಟಿದ್ದರಾ? ಈ ಕುರಿತ ಹಲವು ಅನುಮಾನಗಳು ಎದ್ದಿದ್ದವು. ಅದರ ಅಸಲಿ ಗುಟ್ಟು ರಿವೀಲ್ ಆಗಿದೆ.
ಜೈಲಿಗೆ ಹೋಗುವಾಗ ದರ್ಶನ್ ತಲೆಗೆ ಕ್ಯಾಪ್ ಧರಿಸಿದ್ದರು, ಮುಖಕ್ಕೆ ಮಾಸ್ಕ್ ಧರಿಸಿದ್ದರು, ಆದರೆ ಬಂಧನ ವೇಳೆ ತೆಗೆಯಲಾದ ಫೋಟೋ ಇದೀಗ ರಿವೀಲ್ ಆಗಿದ್ದು ತಲೆಕೂದಲು, ಮೀಸೆ, ಗಡ್ಡಕ್ಕೆ ಕತ್ತರಿ ಹಾಕಿದ್ದು ರಿವೀಲ್ ಆಗಿದೆ. ಬಂಧನಕ್ಕೂ ಮುನ್ನ ದರ್ಶನ್ ದೇವಸ್ಥಾನಕ್ಕೆ ತೆರಳಿ ಮುಡಿ ಕೊಟ್ಟಿದ್ದರು ಅನ್ನೋ ಚರ್ಚೆ ಕೂಡ ಎದ್ದಿತ್ತು. ಆದರೆ ಅಲ್ಲಿ ದರ್ಶನ್ ಯಾವುದೇ ದೇವಸ್ಥಾನಕ್ಕೂ ಮುಡಿ ಕೊಟ್ಟಿಲ್ಲ. ಬಂಧನಕ್ಕೆ ಪೊಲೀಸರು ಆಗಮಿಸಿದ್ದ ವೇಳೆ ಸ್ನಾನ ಮಾಡಿ ಬರುತ್ತೇನೆಂದು ತೆರಳಿದ್ದ ದರ್ಶನ್ ತಾವಾಗಿಯೇ ತಲೆ ಕೂದಲಿಗೆ ಕತ್ತರಿ ಹಾಕಿಕೊಂಡಿದ್ದರಂತೆ. ಜೈಲಿಗೆ ಹೋದಾಗ ಸ್ಟೈಲಿಶ್ ಹೇರ್ ಕಟ್ , ಹೇರ್ ಸ್ಟೈಲ್‌ಗೆ ಅವಕಾಶ ಇರೋದಿಲ್ಲ. ಅಲ್ಲಿ ಹೇರ್‌ಸ್ಟೈಲ್ ಮೇಂಟೇನ್ ಮಾಡೋದೂ ಕಷ್ಟ. ಹೀಗಾಗಿ ಮುಂದಿನ ಪರಿಸ್ಥಿತಿ ಯೋಚಿಸಿ ದರ್ಶನ್ ದಿಢೀರ್ ತಲೆಕೂದಲನ್ನ ಕ್ಲೀನ್ ಶೇವ್ ಮಾಡಿಕೊಂಡಿದ್ದರಂತೆ.
ಜಾಮೀನು ಮುಂದುವರೆಯುವ ವಿಶ್ವಾಸದಲ್ಲೇ ಇದ್ದ ದರ್ಶನ್ ಡೆವಿಲ್ ಬಳಿಕ ಹೊಸ ಚಿತ್ರದ ತಯಾರಿಯಲ್ಲಿದ್ರು. ಆದರೆ ಪೊಲೀಸರು ಬಂಧಿಸಲು ಬಂದಾಗ ಮನೆಯಲ್ಲೇ ತಲೆಕೂದಲು, ಮೀಸೆಗೆ ಬೇಸರದಿಂದಲೇ ಕತ್ತರಿ ಹಾಕಿದ್ದರು ಡೆವಿಲ್ ಹೀರೋ. ಬಳಿಕ ಕ್ಯಾಪ್ ಧರಿಸಿ, ಮಾಸ್ಕ್ ಧರಿಸಿ ಸ್ಟೇಷನ್ಗೆ ಹೊರಟು ಬಂದಿದ್ದರು ದರ್ಶನ್. ಇದೀಗ ದರ್ಶನ್ ಪರಪ್ಪನ ಅಗ್ರಹಾರ ಜೈಲಲ್ಲಿದ್ದಾರೆ.