ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರಸಿ 30 ಮಂಗಗಳನ್ನು ಹತ್ಯೆಗೈದ ದುಷ್ಕರ್ಮಿಗಳು

Public TV
1 Min Read

ಚಿಕ್ಕಮಗಳೂರು: ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ 30 ಮಂಗಗಳನ್ನು (Monkeys) ಹತ್ಯೆಗೈದ ಅಮಾನವೀಯ ಕೃತ್ಯ ಎನ್‌ಆರ್‌ಪುರದ (NRPura) ದ್ಯಾವಣ ಬಳಿ ನಡೆದಿದೆ.

ದುಷ್ಕರ್ಮಿಗಳು ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ, ಬಳಿಕ ಅದನ್ನು ತಿಂದ ಮಂಗಗಳು ಎಚ್ಚರ ತಪ್ಪಿದಾಗ, ಅವುಗಳ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ. ಸಾವಿಗೀಡಾದ 30 ಮಂಗಗಳ ತಲೆಯ ಮೇಲೂ ಒಂದೇ ರೀತಿಯ ಗಾಯಗಳಾಗಿವೆ. 16 ಗಂಡು, 14 ಹೆಣ್ಣು ಹಾಗೂ 4 ಮರಿ ಮಂಗಗಳನ್ನು ಹತ್ಯೆ ಮಾಡಿದ್ದಾರೆ. ಬಳಿಕ ದ್ಯಾವಣ ಬಳಿಯ ರಸ್ತೆಯಲ್ಲಿ ಎಸೆದಿದ್ದಾರೆ. ಇದನ್ನೂ ಓದಿ: ನಿದ್ರೆಗೆ ಜಾರಿದ ಚಾಲಕ, ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು – ಮೂವರ ದುರ್ಮರಣ!

ಸ್ಥಳಕ್ಕೆ ಡಿಎಫ್‍ಓ, ಆರ್‍ಎಫ್‍ಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಣಿಪುರದ ಹಿಂಸಾಚಾರ ಪರಿಸ್ಥಿತಿ ಬಳಸಿಕೊಂಡು ಭಯೋತ್ಪಾದನೆ ಹರಡಲು ಯತ್ನ – ಆರೋಪಿ ಅರೆಸ್ಟ್

Share This Article