ತಿಂಗಳಾದ್ರೂ ಮುಗಿಯದ ಮಧ್ಯಪ್ರಾಚ್ಯ ಸಂಘರ್ಷ – ಯುದ್ಧ ಮುಂದುವರಿದ್ರೆ ಭಾರತದ ಮೇಲೇನು ಪರಿಣಾಮ?

2 Min Read

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಶುರುವಾಗಿ ಒಂದು ತಿಂಗಳಾಗಿದೆ. ಸದ್ಯಕ್ಕೆ ಯುದ್ಧ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೂದಾಳಿಯ ಮೂಲಕ ಇರಾನ್ ಮೇಲೆ ಬೃಹತ್ ದಾಳಿಗೆ ಪ್ಲ್ಯಾನ್ ಮಾಡಿದ್ದಾರೆ. ಅಮೆರಿಕ ಇಸ್ರೇಲ್ ಜಂಟಿ ದಾಳಿ ಇರಾನ್ ಮೇಲೆ ಮುಂದುವರಿದರೆ ಭಾರತ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಅಮೆರಿಕ-ಇಸ್ರೇಲ್ ಜಂಟಿ ದಾಳಿಗಳೊಂದಿಗೆ ಆರಂಭವಾದ ಮಧ್ಯಪ್ರಾಚ್ಯ ಯುದ್ಧಕ್ಕೆ ಈಗ ಒಂದು ತಿಂಗಳು ಪೂರ್ಣಗೊಂಡಿದೆ. ತನ್ನ ಮೇಲಿನ ದಾಳಿಗಳಿಗೆ ಇರಾನ್ ಪ್ರತಿಕ್ರಿಯೆಯಾಗಿ ಕ್ಷಿಪಣಿ ಮತ್ತು ಡ್ರೋನ್‌ಗಳ ಪ್ರತಿದಾಳಿ ನಡೆಸುತ್ತಿದೆ. ಈ ಒಂದು ತಿಂಗಳ ಸಂಘರ್ಷದಿಂದ ಭಾರತದ ಮೇಲೆ ಈಗಾಗಲೇ ಸಾಕಷ್ಟು ಸಮಸ್ಯೆಯಾಗಿದ್ದು ಕಚ್ಚಾತೈಲ ಮತ್ತು ಗ್ಯಾಸ್ ಗಾಗಿ ಪರದಾಡುವ ಸನ್ನಿವೇಶಗಳು ನಿರ್ಮಾಣವಾಗಿದೆ. ಸದ್ಯ ಈ ದಾಳಿ ಮುಂದುವರಿದರೆ ಇನ್ನಷ್ಟು ಸಮಸ್ಯೆ ಹೆಚ್ಚುವ ಸಾಧ್ಯತೆಗಳಿದೆ. ಇದನ್ನೂ ಓದಿ: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇಂದಿನಿಂದ ದೊಡ್ಡ ಜಾತ್ರೆ ಸಂಭ್ರಮ

ಭಾರತದ ಮೇಲೆ ಪರಿಣಾಮಗಳೇನು?
* ಭಾರತ ತನ್ನ 85-90% ಕಚ್ಚಾ ಕಚ್ಚಾತೈಲ ಆಮದು ಮಾಡುತ್ತದೆ. ಇದರಲ್ಲಿ ಸುಮಾರು 40%-60% ಹಾರ್ಮುಜ್ ಜಲಸಂಧಿ ಮೂಲಕ ಬರುತ್ತದೆ.
* ಇರಾಕ್, ಸೌದಿ, ಯುಎಇ, ಕುವೈತ್‌ನಿಂದ ಬರುವ ಕಚ್ಚಾತೈಲ ಪೂರೈಕೆಯಲ್ಲಿ ವ್ಯತಾಸವಾದ ಹಿನ್ನಲೆ ಕಚ್ಚಾತೈಲ ಬೆಲೆ ಈಗಾಗಲೇ ಬ್ಯಾರೆಲ್‌ಗೆ 100 ಡಾಲರ್ ಏರಿದೆ, ಕೆಲವು ಸಂದರ್ಭಗಳಲ್ಲಿ 120 ಡಾಲರ್ ತಲುಪಿದೆ.
* ಈ ಸ್ಥಿರತೆಯಿಂದ ಪೆಟ್ರೋಲ್/ಡೀಸೆಲ್ ಬೆಲೆ ಹೆಚ್ಚಳವಾಗಬಹುದು, ಇದಕ್ಕೆ ಹೊಂದಿಕೊಂಡಂತೆ ಸಾರಿಗೆ, ಆಹಾರ, ಉತ್ಪಾದನೆ ವೆಚ್ಚ ಏರಿಕೆಯಾಗಿ, ಹಣದುಬ್ಬರ ಹೆಚ್ಚಳವಾಗಬಹುದು.
* ಎಲ್‌ಪಿಜಿ/ಎಲ್‌ಎನ್‌ಜಿ ಸರಬರಾಜು ತೊಂದರೆಯಿಂದ ಅಡುಗೆ ಗ್ಯಾಸ್ ಕೊರತೆ, ಹೋಟೆಲ್/ರೆಸ್ಟೋರೆಂಟ್‌ಗಳು ಬಂದ್ ಇನ್ನಷ್ಟು ದಿನ ವಿಸ್ತರಣೆಯಾಗಬಹುದು.
* ಯುದ್ಧ ದೀರ್ಘಕಾಲ ಮುಂದುವರಿದರೆ ಕಚ್ಚಾತೈಲ ಬೆಲೆ 150-200 ಡಾಲರ್‌ಗೆ ಏರಬಹುದು ಎಂಬ ಭಯ.
* ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯಬಹುದು.
* ವಲಸೆ ಕಾರ್ಮಿಕರಿಗೆ ಸಮಸ್ಯೆಯಾಗಲಿದೆ, ಗಲ್ಫ್ ದೇಶಗಳಲ್ಲಿ ಸುಮಾರು 9.1 ಮಿಲಿಯನ್ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅವರು ವರ್ಷಕ್ಕೆ ಸುಮಾರು 50 ಬಿಲಿಯನ್ ಡಾಲರ್ ಭಾರತಕ್ಕೆ ಕಳುಹಿಸುತ್ತಾರೆ.
* ಭಾರತದಲ್ಲಿ ಪ್ರತಿ ವಲಸಿಗ ತನ್ನ ಕುಟುಂಬದ 4-5 ಜನರನ್ನು ಪೋಷಿಸುತ್ತಾನೆ, ಯುದ್ಧದಿಂದ ಭಾರತದಲ್ಲಿ 4-5 ಕೋಟಿ ಭಾರತೀಯರ ಮೇಲೆ ನೇರ ಪರಿಣಾಮ ಬೀರಲಿದೆ.
* ಗಲ್ಫ್ ದೇಶಗಳಿಗೆ ಭಾರತ 4.5 ಬಿಲಿಯನ್ ಡಾಲರ್ ಎಲೆಕ್ಟ್ರಾನಿಕ್ಸ್ + ಟೆಕ್ ರಫ್ತು ಮಾಡುತ್ತಿದೆ. ಇದರ ಮೇಲೂ ಪರಿಣಾಮ ಬೀರಲಿದೆ
* ರಾಸಾಯನಿಕಗಳು, ರಸಗೊಬ್ಬರ ಸರಬರಾಜು ತೊಂದರೆಯಿಂದ ಕೃಷಿ ಮತ್ತು ಉತ್ಪಾದನೆ ಪ್ರಭಾವಿತವಾಗಲಿದೆ.
* ಚಬಹಾರ್ ಯೋಜನೆಗೆ ಅಪಾಯ, ದಾಳಿ ಅಥವಾ ಅಮೆರಿಕದ ಆರ್ಥಿಕ ನಿರ್ಬಂಧಗಳು ಹೇರಬಹುದು.

ಹೀಗೆ ಭಾರತ ಒಂದಲ್ಲ ಎರಡಲ್ಲ ಸಾಲು ಸಾಲು ಸಮಸ್ಯೆಗಳನ್ನು ಎದುರಿಸಲಿದೆ. ಹೀಗಾಗೀ ಭಾರತ ಕೂಡಾ ರಾಜತಾಂತ್ರಿಕ ಮಾತುಕತೆ ಮೂಲಕ ಯುದ್ಧ ಮುಗಿಸಲು ಒತ್ತಡ ಹೇರುತ್ತಿದೆ. ಇದನ್ನೂ ಓದಿ: ಕುವೈತ್‌ ಮೇಲೆ ಇರಾನ್‌ ದಾಳಿ – ವಿದ್ಯುತ್‌ ಸ್ಥಾವರದಲ್ಲಿದ್ದ ಭಾರತೀಯ ಕಾರ್ಮಿಕ ಸಾವು

Share This Article