ಸ್ಮಾರಕವಾಗಲಿದೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮನೆ

Public TV
1 Min Read

ನ್ನಡ ಸಿನಿಮಾ ಲೋಕದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಬಾಳಿ ಬದುಕಿದ ಮನೆ ಇನ್ನೇನು ಬಿದ್ದೇ ಹೋಗುತ್ತಿದೆ ಎನ್ನುವ ಹೊತ್ತಿನಲ್ಲಿ ಸ್ಮಾರಕವಾಗಿಸುವ ಪ್ರಯತ್ನಕ್ಕೆ ಕರ್ನಾಟಕ ಚಲನಚಿತ್ರ ಅಕಾಡಮಿ ಮುಂದಾಗಿದೆ. ಪುಟ್ಟಣ್ಣ ನಿಧನದ ನಾಲ್ಕು ದಶಕಗಳ ನಂತರ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿರುವ ಅವರ ಮನೆಯನ್ನು ಸ್ಮಾರಕ ಮತ್ತು ಗ್ರಂಥಾಲಯನ್ನಾಗಿ ಪರಿವರ್ತಿಸಬೇಕೆಂದು ಅಕಾಡಮಿಯು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಇದನ್ನೂ ಓದಿ : ಬಡ್ಡೀಸ್ ಚಿತ್ರಕ್ಕೆ ಯುಎಸ್ಎ ಕ್ಯಾಮೆರಾವುಮೆನ್ : ಇವರು ಎಮ್ಮಿ ಅವಾರ್ಡ್ ನಾಮಿನೇಟರ್

ಶತಮಾನದಷ್ಟು ಹಳೆಯದಾಗಿರುವ ಮನೆಯು ಶಿಥಿಲಗೊಂಡಿದೆ. ಅದನ್ನು ಸ್ಮಾರಕವಾಗಿಸುವುದು ಅಷ್ಟು ಸುಲಭವಲ್ಲ. ಆದರೂ, ಅದನ್ನು ಪುನರ್ ನಿರ್ಮಿಸಿ, ಅಗಲಿದ ಚೇತನಕ್ಕೆ ಗೌರವ ಸಲ್ಲಿಸಬೇಕೆಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ : ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಮಾಡಿದ ಕಾಮಿಡಿ ಕಿಲಾಡಿ ಜೋಡಿ

ಕನ್ನಡ ಚಿತ್ರೋದ್ಯಮಕ್ಕೆ ಪುಟ್ಟಣ್ಣ ಕಣಗಾಲ್ ಕೊಟ್ಟ ಕೊಡುಗೆ ಅಪಾರ. ಸಾಕಷ್ಟು ಕಲಾವಿದರನ್ನು ಅವರು ಸಿನಿಮಾ ರಂಗಕ್ಕೆ ಕೊಟ್ಟಿದ್ದಾರೆ. ಸದಭಿರುಚಿಯ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿದ್ದಾರೆ. ಅಲ್ಲದೇ, ಅವರ ನಿರ್ದೇಶನದಲ್ಲಿ ಬಂದ ಅಷ್ಟೂ ಚಿತ್ರಗಳು ಇಂದಿಗೂ ಮಾದರಿ ಆಗಿರುವಂತಹು ಹಾಗಾಗಿ ಕೂಡಲೇ ಸರಕಾರವು ಪ್ರಸ್ತಾವನೆ ಒಪ್ಪಿಗೆ ಸೂಚಿಸಿ, ಅವರ ಮನೆಯನ್ನು ಸ್ಮಾರಕ ಮಾಡಬೇಕೆಂದು ಅಕಾಡಮಿ ಮನವಿ ಸಲ್ಲಿಸಿದೆ. ಇದನ್ನೂ ಓದಿ : ನಟ ಧನ್ವೀರ್ ಮೇಲೆ ನಿಲ್ಲುತ್ತಿಲ್ಲ ದಾಳಿ : ದಾಳಿ ಹಿಂದೆ ಸ್ಟಾರ್ ನಟರ ಕೈವಾಡ?

ಈಗಾಗಲೇ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಶ್ ಅವರ ಸಮಾಧಿಗಳನ್ನು ಸ್ಮಾರಕವಾಗಿಸುವ ನಿಟ್ಟಿನಲ್ಲಿ ಸರಕಾರ ಹಲವು ಕ್ರಮಗಳನ್ನು ತಗೆದುಕೊಂಡಿದೆ. ಪುಟ್ಟಣ್ಣ ಅವರ ಮನೆಯನ್ನೂ ಸ್ಮಾರಕ ಮಾಡುವಲ್ಲಿ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ ಎನ್ನುವುದು ಅಕಾಡಮಿಯ ನಂಬಿಕೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *