ಬೆಳಗಾವಿ: ಧರ್ಮಸ್ಥಳ ಬುರುಡೆ ಕೇಸ್‌ನ (Dharmasthala Mass Burial Case) ಮುಸುಕುದಾರಿಯ ಮಂಪರು ಪರೀಕ್ಷೆಯನ್ನು ಮಾಡಬೇಕು ಎಂದು ಕೈ ಶಾಸಕ ಲಕ್ಷ್ಮಣ ಸವದಿ (Laxman Savadi) ಒತ್ತಾಯಿಸಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಸುಳ್ಳು ಆರೋಪ ಮಾಡುವವರಿಗೆ ಇದು ಎಚ್ಚರಿಕೆ ಗಂಟೆ ಆಗಬೇಕು. ಮುಸುಕುಧಾರಿಯನ್ನಿಟ್ಟುಕೊಂಡು ಒಳಸಂಚು ಮಾಡ್ತಿದ್ದಾರಾ ನೋಡಬೇಕು. ಕಳಂಕ ತರುವ ಕೆಲಸ ಯಾರೂ ಮಾಡಿದರೂ ಒಳಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬುರುಡೆ ಕೇಸ್ ಹಿಂದೆ ಕೈ ಸಂಸದ ಶಶಿಕಾಂತ್ ಸೆಂಥಿಲ್ ಇದ್ದಾರೆ: ಯಶ್ಪಾಲ್ ಸುವರ್ಣ
ಮುಸುಕುದಾರಿ ಹಿನ್ನೆಲೆ ಏನು ಎನ್ನುವುದು ಪತ್ತೆಯಾಗಬೇಕು. ಇಲ್ಲಿಯವರೆಗೂ ಸರ್ಕಾರದ ಹಣ ಎಷ್ಟು ವೆಚ್ಚವಾಗಿದೆಯೋ ಅದನ್ನು ವಸೂಲಿ ಮಾಡಬೇಕು. ಮಂಪರು ಪರೀಕ್ಷೆಯಲ್ಲಿ ಅತನ ಒಪ್ಪಿಗೆ ಬೇಕಾಗುತ್ತದೆ. ಬೇರೆ ದಾರಿಯಲ್ಲಿ ತನಿಖೆ ಮಾಡಿ ಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಸರ್ಕಾರ ಅಥವಾ ಪಕ್ಷದ ನಿಲುವಲ್ಲ ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಸವದಿ ಹೇಳಿದ್ದಾರೆ.