ತಂದೆ ಕೊಲೆಗೈದವನನ್ನು ಕಲ್ಲು ಎತ್ತಾಕಿ ಕೊಂದ ಮಗ!

Public TV
1 Min Read

ಚಿಕ್ಕೋಡಿ(ಬೆಳಗಾವಿ): ತಂದೆಯ ಕೊಲೆ ಮಾಡಿರುವ ವೈಷಮ್ಯದಿಂದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಮಗ ಸೇಡು ತೀರಿಸಿಕೊಂಡ ಘಟನೆ  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ.

ವಿಠ್ಠಲ ಕಮತೆ(35) ಹಾಗೂ ಸುರೇಶ ಡಂಗೇರ್(30) ಕೊಲೆ ಮಾಡಿ ಪೊಲೀಸರ ಬಲೆಗೆ ಬಿದ್ದ ಆರೋಪಿಗಳು. ಶೌಕತ್ ನದಾಫ್(45) ಭೀಮಪ್ಪನ ಮಗ ವಿಠ್ಠಲನಿಂದ ಕೊಲೆಯಾದವನು.

10 ವರ್ಷದ ಹಿಂದೆ ಜೈಲಿನಲ್ಲಿದ್ದ ಬೆಂಡವಾಡ ಗ್ರಾಮದ ಭೀಮಪ್ಪ ಕಮತೆಯನ್ನು ಕೊಲೆ ಮಾಡಿರುವ ಆರೋಪವನ್ನು ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮದ ಶೌಕತ್ ನದಾಫ್ ಎದುರಿಸುತ್ತಿದ್ದ. ಇದೇ ಸೇಡಿನಿಂದ ಶೌಕತ್ ನದಾಫ್‍ನನ್ನು ಟಾರ್ಗೆಟ್ ಮಾಡಿದ್ದ ಭೀಮಪ್ಪನ ಮಗ ಹಾಗೂ ಸಹಚರರು, ಶೌಕತ್ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಶೌಕತ್ ನದಾಫ್ ಕೊಲೆ ಮಾಡಿ ಶವ ಬಿಸಾಡಿ ಹೋಗಿದ್ದ ದುಷ್ಕರ್ಮಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದೆ : ಕೋಟಾ ಶ್ರೀನಿವಾಸ್ ಪೂಜಾರಿ

10 ವರ್ಷಗಳ ಹಿಂದೆ ಪ್ರಕರಣ ಒಂದರಲ್ಲಿ ಸಜೆಯಾಗಿ ಭೀಮಪ್ಪ ಹಿಂಡಲಗಾ ಜೈಲಿನಲ್ಲಿದ್ದರು. ಇತ್ತ ಮೊತ್ತೊಂದು ಪ್ರಕರಣದಲ್ಲಿ ಅದೇ ಹಿಂಡಲಗಾ ಜೈಲಿನಲ್ಲಿ ಶೌಕತ್ ನದಾಫ್ ಇದ್ದ. ಭೀಮಪ್ಪನನ್ನು ಜೈಲಿನಲ್ಲಿಯೇ ಶೌಕತ್ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಇತ್ತ ತಂದೆಯನ್ನು ಕೊಲೆ ಮಾಡಿರುವ ಸೇಡು ತೀರಿಸಿಕೊಳ್ಳುವಲ್ಲಿ ಭೀಮಪ್ಪನ ಮಗ ವಿಠಲ ಪ್ರಯತ್ನಿಸುತ್ತಿದ್ದ. ಅಂತೆಯೇ ಶೌಕತ್ ನನ್ನು ವಿಠಲ ಬರ್ಬರವಾಗಿ ಕೊಂದು ಹಾಕಿದ್ದಾನೆ. ಘಟನೆ ಬಳಿಕ ರಾಯಭಾಗ ಪೊಲೀಸ್ ಠಾಣೆಯ ಪಿಐ ಹಸನ್ ಮುಲ್ಲಾ ನೇತೃತ್ವದಲ್ಲಿ ತನಿಖೆ ನಡೆಸಿ ಕೊಲೆ ಆರೋಪಿಗಳನ್ನ ಬಂಧಿಸಲಾಗಿದೆ. ಈ ಕುರಿತು ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *