ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ವಿಲಾಸಿ ಜೀವನ – ಇಂದು 2ನೇ ಬಾರಿಗೆ ನಟ ಧನ್ವೀರ್ ವಿಚಾರಣೆ

Public TV
1 Min Read

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಕೈದಿಗಳಿಗೆ ರಾಜಾತಿಥ್ಯದ ವೀಡಿಯೋಗಳು ವೈರಲ್ ಆಗಿದ್ದ ಪ್ರಕರಣದ ಸಂಬಂಧ ನಟ ಧನ್ವೀರ್ (Dhanveer) ಇಂದು ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ.

ವೀಡಿಯೋ ವೈರಲ್ ಪ್ರಕರಣದಲ್ಲಿ ಧನ್ವೀರ್ ಪಾತ್ರದ ಬಗ್ಗೆ ಅನುಮಾನಗೊಂಡಿದ್ದ ಪೊಲೀಸರು, ಧನ್ವೀರ್ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಮೊಬೈಲ್‌ನಲ್ಲಿ ಯಾವುದೇ ವೀಡಿಯೋ ಇರಲಿಲ್ಲ. ಆದರೆ ಪೊಲೀಸರ ಮಾಹಿತಿ ಪ್ರಕಾರ ಧನ್ವೀರ್ ಮೊಬೈಲ್‌ನಿಂದ ಕೆಲವರಿಗೆ ವೀಡಿಯೋಗಳು ಸೆಂಡ್ ಆಗಿರೋದು ಗೊತ್ತಾಗಿತ್ತು. ಮೊಬೈಲ್ ರಿಟ್ರೀವ್ ರಿಪೋರ್ಟ್ ಲಭ್ಯವಾಗಿದ್ದು, ಧನ್ವೀರ್ ಪಾತ್ರದ ಬಗ್ಗೆ ಕೆಲ ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿವೆ. ಹಾಗಾಗಿ ಎರಡನೇ ಬಾರಿಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.

ಇಂದು ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಧನ್ವೀರ್ ವಿಚಾರಣೆಗೆ ಹಾಜರಾಗಲಿದ್ದಾರೆ. ಮೊಬೈಲ್ ರಿಟ್ರೀವ್ ಮತ್ತು ಪೊಲೀಸರ ವಿಚಾರಣೆಯಲ್ಲಿ ಹೊರಬರುವ ಅಂಶಗಳ ಮೇಲೆ ಧನ್ವೀರ್‌ಗೆ ಆಸಲಿ ಸಂಕಷ್ಟ ಶುರುವಾಗುತ್ತಾ ಅಥವಾ ಪ್ರಕರಣದಿಂದ ಹೊರಬರುತ್ತಾರಾ ಅನ್ನೋದು ಗೊತ್ತಾಗಲಿದೆ. ಇದನ್ನೂ ಓದಿ: ನೀರು ಪೋಲು ಮಾಡೋರ ಮೇಲೆ BWSSB ಹದ್ದಿನಕಣ್ಣು – 5,000 ರೂ. ದಂಡದ ಜೊತೆ ನೀರಿನ ಕನೆಕ್ಷನ್ ಕಟ್

Share This Article