ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವನನ್ನು (Biklu Shiva) ಕೊಲೆ ಪ್ರಕರಣದ ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿದೆ. ಬಿಕ್ಲು ಶಿವನನ್ನು ಫಾಲೋ ಮಾಡುವುದಕ್ಕೆ ಇಬ್ಬರು ಕೆಲಸ ಮಾಡುತ್ತಿದ್ದರು ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಹೌದು, ಆಟೋ ಶಿವ ಹಾಗೂ ಸಾಮ್ಯುಯೆಲ್ ಎಂಬ ಇಬ್ಬರು ಬಿಕ್ಲು ಶಿವನ ಚಲನವನದ ಬಗ್ಗೆ ನಿಗಾ ಇಡುತ್ತಿದ್ದರು. ಆರೋಪಿ ಜಗ್ಗ ಅಲಿಯಾಸ್ ಜಗದೀಶ್ (Jagadeesh), ದಿನವೊಂದಕ್ಕೆ 1,000 ರೂ. ಅಂದರೆ ತಿಂಗಳಿಗೆ 30,000 ರೂ. ಹಣವನ್ನು ಕೊಟ್ಟು ಬಿಕ್ಲು ಶಿವನನ್ನು ಫಾಲೋ ಮಾಡಿಸುತ್ತಿದ್ದ. ಕಳೆದ ಫೆಬ್ರವರಿಯಿಂದಲೇ ಈ ಕೆಲಸ ಮಾಡಿಸುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್ ಅರ್ಜಿ ವಿಚಾರಣೆ ಮುಂದೂಡಿಕೆ – ಗುರುವಾರ ಜಾಮೀನು ಭವಿಷ್ಯ
ಫಾಲೋ ಮಾಡುತ್ತಿರುವ ವಿಚಾರ ಬಹಿರಂಗವಾಗದಂತೆ ಇನ್ನೋರ್ವ ಆರೋಪಿ ಕಿರಣ್ ಗೌಪ್ಯತೆ ಕಾಪಾಡಿಕೊಂಡಿದ್ದ. ಬಿಕ್ಲು ಶಿವನ ಮನೆಗೆ ಯಾರೆಲ್ಲ ಬರ್ತಾರೆ. ಯಾವ ವಾಹನಗಳು ಇವೆ. ಮನೆಯಿಂದ ಮುಖ್ಯದ್ವಾರ ಎಷ್ಟು ದೂರದಲ್ಲಿದೆ. ಮನೆ ಮುಂದೆ ಸಿಸಿಟಿವಿ ಕ್ಯಾಮೆರಾ ಎಷ್ಟಿದೆ. ಮನೆ ಮುಂದಿನ ರಸ್ತೆಯಲ್ಲಿ ಯಾವ ಸಮಯದಲ್ಲಿ ಎಷ್ಟು ಜನ ಓಡಾಡ್ತಾರೆ. ಹತ್ಯೆಯ ನಂತರ ಎಸ್ಕೇಪ್ ಆಗಲು ಯಾವ ರಸ್ತೆ ಸೂಕ್ತ ಎಂದು ತಿಳಿಯಲು ಸ್ಯಾಮುಯೆಲ್ ಹಾಗೂ ಆಟೋ ಶಿವನಿಂದ ಫಾಲೋ ಮಾಡಿಸಿ ಕಿರಣ್ ಮಾಹಿತಿ ಪಡೆದಿದ್ದ ಎಂಬ ವಿಚಾರವು ತನಿಖೆ ವೇಳೆ ಬಯಲಾಗಿದ್ದ.