The Kerala Story ಚಿತ್ರದ ಸಕ್ಸಸ್ ಬಳಿಕ ‘ರಣವಿಕ್ರಮ’ ನಟಿಗೆ ಬಿಗ್‌ ಆಫರ್

Public TV
2 Min Read

ನ್ನಡದ ‘ರಣವಿಕ್ರಮ’ (Ranavikrama) ನಟಿ ಅದಾ ಶರ್ಮಾಗೆ (Adah Sharma) ಸಖತ್ ಬೇಡಿಕೆ ಶುರುವಾಗಿದೆ. ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಸಕ್ಸಸ್ ನಂತರ ಬಂಪರ್ ಆಫರ್ಸ್ ಅದಾ ಅವರಿಗೆ ಅರಸಿ ಬರುತ್ತಿದೆ. ಲವ್ ಜಿಹಾದ್ ಸ್ಟೋರಿಯಲ್ಲಿ ನಟಿಸಿ ಗಮನ ಸೆಳೆದ ನಂತರ ಪೊಲೀಸ್ (Police) ಆಫೀಸರ್ ಆಗಿ ಅಭಿಮಾನಿಗಳ ಮುಂದೆ ಅದಾ ಶರ್ಮಾ ಬರುತ್ತಿದ್ದಾರೆ. ಇದನ್ನೂ ಓದಿ:ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ‌’ಕಾಂತಾರ’ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್

‘ದಿ ಕೇರಳ ಸ್ಟೋರಿ’ ಸಿನಿಮಾದಿಂದ ಅವರ ವೃತ್ತಿಜೀವನಕ್ಕೆ ಹೊಸ ಮೈಲೇಜ್ ಸಿಕ್ಕಿದೆ. ‘ದಿ ಗೇಮ್ ಆಫ್ ಗಿರ್ಗಿಟ್’ (The Game Of Girgit) ಎಂಬ ಸಿನಿಮಾಗೆ ಅದಾ ಶರ್ಮಾ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ನ ಖ್ಯಾತ ನಟ ಶ್ರೇಯಸ್ ತಲ್ಪಡೆ ಕೂಡ ನಟಿಸುತ್ತಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಭಾರಿ ಕುಖ್ಯಾತಿ ಪಡೆದಿದ್ದ ಬ್ಲೂ ವೇಲ್ ಗೇಮ್ ಕುರಿತು ಈ ಸಿನಿಮಾ ರೆಡಿಯಾಗಿದೆ.

‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾ ಮೂಡಿಬರುತ್ತಿದೆ. ಮೇ 11ರಂದು ಅದಾ ಶರ್ಮಾ ಅವರ ಬರ್ತ್ಡೇ. ಈ ಪ್ರಯುಕ್ತ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ ಅವರು ಪೊಲೀಸ್ ಪಾತ್ರ ಮಾಡಲಿದ್ದಾರೆ. ಈ ಚಿತ್ರಕ್ಕೆ ವಿಶಾಲ್ ಪಾಂಡ್ಯ ನಿರ್ದೇಶನ ಮಾಡಿದ್ದಾರೆ. ಬ್ಲೂ ವೇಲ್ ಗೇಮ್ (Blue Whale Game) ಬಗ್ಗೆ ಸಾಕಷ್ಟು ಕ್ರೇಜ್ ಇತ್ತು. ಯುವಕರು ಈ ಗೇಮ್‌ಗೆ ಭಾರಿ ಅಡಿಕ್ಟ್ ಆಗಿದ್ದರು. ಅದರಿಂದ ಸಾಕಷ್ಟು ಅನಾಹುತಗಳು ಆದ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಇದನ್ನೇ ತೆರೆಯ ಮೇಲೆ ಈ ಚಿತ್ರದ ಮೂಲಕ ತೋರಿಸಲು ಹೊರಟಿದ್ದಾರೆ.

‘ದಿ ಕೇರಳ ಸ್ಟೋರಿ’ 5 ದಿನಗಳಲ್ಲಿ 50 ಕೋಟಿ ರೂಪಾಯಿ ಕಲೆಕ್ಷನ್ ಮೂಲಕ ಸಂಚಲನ ಮೂಡಿಸಿದೆ. ಈ ಮೂಲಕ ‘ರಣವಿಕ್ರಮ’ ಬೆಡಗಿ ಅದಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

Share This Article