20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

Public TV
2 Min Read

ವಿವೇಕ್ ಅಗ್ನಿಹೋತ್ರಿ ನಿರ್ಮಾಣದ ನೈಜ ಘಟನೆ ಆಧಾರಿತ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಉತ್ತಮ ಪ್ರದರ್ಶನವನ್ನು ತೋರುತ್ತಿದೆ. ಈ ಚಿತ್ರದಲ್ಲಿ ಬರುವ ವಿಲನ್ ಬಿಟ್ಟಾ ಕರಾಟೆ ಪಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ.

ಕಾಶ್ಮೀರಿ ಪಂಡಿತರ ಸ್ಥಳಾಂತರ ಅವರು ಅನುಭವಿಸಿದ ಕಷ್ಟ, ಹಾಗೂ ಅವರ ಮೇಲೆ ನಡೆದ ದೌರ್ಜನ್ಯವನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದ ರೀತಿಯಲ್ಲಿ ವಿವರಿಸಲಾಗಿದೆ.

ಯಾರು ಈ ಬಿಟ್ಟಾ ಕರಾಟೆ?:
ಶ್ರೀನಗರದಲ್ಲಿ 1972ರಲ್ಲಿ ಜನಿಸಿದ್ದ ಫರೂಕ್ ಅಹ್ಮದ್ ದಾರ್ ಅಡ್ಡ ಹೆಸರು ಬಿಟ್ಟಾ. ಸಮರ ಕಲೆಗಳಲ್ಲಿ ಪಾಂಡಿತ್ಯ ಪಡೆದಿದ್ದರಿಂದ ಇತನಿಗೆ ಕರಾಟೆ ಎಂಬ ಹೆಸರು ಬಂದಿದೆ. ಈ ಕಾರಣಕ್ಕೆ ಈತ ಬಿಟ್ಟ ಕರಾಟೆ ಎಂದು ಫೇಮಸ್ ಆಗಿದ್ದಾನೆ. 1990ರ ದಶಕದಲ್ಲಿ ಕಣಿವೆ ರಾಜ್ಯದಲ್ಲಿ ಪಂಡಿತರ ಮೇಲೆ ಎಸಗಿದ ಕೃತ್ಯದಿಂದ ಈತ ಕುಖ್ಯಾತನಾಗಿದ್ದಾನೆ.

1988ರಲ್ಲಿ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್‍ಎಫ್) ಮುಖ್ಯ ಕಮಾಂಡರ್ ಅಶ್ವಾಕ್ ಮಜೀದ್ ವಾನಿ ಈತನನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದುಕೊಂಡು ಹೋಗುತ್ತಾನೆ. ಉಗ್ರರ ತರಬೇತಿ ಶಿಬಿರದಲ್ಲಿ 32 ದಿನಗಳ ತರಬೇತಿ ಪಡೆದು ರಕ್ತಪಾತ ಮಾಡಲು ಮರಳಿ ಕಾಶ್ಮೀರಕ್ಕೆ ಬರುತ್ತಾನೆ.

ಬಿಟ್ಟಾ ‘ಆಜಾದಿ; ಹೆಸರಲ್ಲಿ ಅಲ್ಲಿ ಕಾಶ್ಮೀರಿ ಪಂಡಿತರ ಮಾರಣ ಹೋಮವನ್ನು ಮಾಡಲು ಪ್ರಾರಂಭಿಸಿದ. ಇವನ ಹಿಂಸಾಚಾರಕ್ಕೆ ಮೊದಲು ಬಲಿಯಾಗಿದ್ದೇ ಕಾಶ್ಮೀರಿ ಪಂಡಿತನಾಗಿದ್ದ ಆತನ ಬಾಲ್ಯದ ಗೆಳೆಯ. ಬಿಟ್ಟಾ ಆತನನ್ನು ತನ್ನ ಮನೆಯ ಮುಂದೆಯೇ ಗುಂಡಿಕ್ಕಿ ಕೊಲ್ಲುತ್ತಾನೆ. ನಂತರದ ಸಂದರ್ಶನವೊಂದರಲ್ಲಿ ಮಾತನಾಡಿ, ಆದೇಶ ಬಂದರೆ ತನ್ನ ಸ್ವಂತ ತಾಯಿ ಹಾಗೂ ಸಹೋದರರನನ್ನು ಕೊಲ್ಲಲು ಸಿದ್ಧನಿದ್ದೇನೆ ಎಂದು ಹೇಳಿಕೊಂಡಿದ್ದ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಅಣ್ಣನ ಸ್ಥಾನದಲ್ಲಿ ನಿಂತು ನಮ್ಮಷ್ಟೇ ದುಃಖ ಅನುಭವಿಸಿದ್ದಾರೆ: ಶಿವಣ್ಣ

1980-1990ರಲ್ಲಿ ಇವರು ಪಂಡಿತರನ್ನು ಹುಡುತ್ತಾ ಶ್ರೀನಗರದ ಬೀದಿಗಳಲ್ಲಿ ಸಂಚರಿಸುತ್ತಿದ್ದ. ಪಂಡಿತರೆಂದು ತಿಳಿದ ತಕ್ಷಣ ಆತ ತನ್ನಲ್ಲಿದ್ದ ಪಿಸ್ತೂಲ್‍ನಿಂದ ಗುಂಡಿಕ್ಕಿ ಕೊಲ್ಲುತ್ತಿದ್ದ. ಕನಿಷ್ಠ 20 ಕಾಶ್ಮೀರಿ ಪಂಡಿತರನ್ನು ಕೊಂದಿದ್ದೇನೆ ಎಂದು ವಿಡಿಯೋ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದ.

ಭಾರತೀಯ ಸೈನಿಕರು ಬಿಟ್ಟಾನನ್ನು 1990ರ ಜೂನ್‍ನಲ್ಲಿ ಬಂಧಿಸಿದರು. 2006ರವರೆಗೆ ಅಂದರೆ 16 ವರ್ಷಗಳ ಕಾಲ ಆತ ಸೆರೆಮನೆಯಲ್ಲಿದ್ದ. 2006ರಲ್ಲಿ ಜಾಮೀನಿನ ಮೇಲೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಟಾಡಾ ಜಡ್ಜ್ ಎನ್‍ಡಿ ವಾಣಿ ಅವರು, ಆರೋಪಿ ಮಾಡಿರುವ ಅಪರಾಧಗಳು ಗಂಭೀರವಾದದ್ದು ಎಂದು ನ್ಯಾಯಾಲಯಕ್ಕೆ ತಿಳಿದಿದೆ. ಈ ಅಪರಾಧಕ್ಕೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ನೀಡಬೇಕಿತ್ತು. ಪ್ರಾಸಿಕ್ಯೂಶನ್ ಆರೋಪ ಸಾಬೀತು ಪಡಿಸಲು ವಿಫಲವಾಗಿದೆ ಮತ್ತು ಪ್ರಕರಣ ಭೇದಿಸಲು ಸಂಪೂರ್ಣ ನಿರಾಸಕ್ತಿ ತೋರಿಸಿದೆ ಎಂದಿದ್ದರು. ಹೀಗಾಗಿ 2006ರ ಅಕ್ಟೋಬರ್‍ನಲ್ಲಿ ಬಿಟ್ಟಾಗೆ ಜಾಮೀನು ಸಿಕ್ಕಿತ್ತು. ಇದನ್ನೂ ಓದಿ: ಅಪ್ಪು ಇಲ್ಲ ಅಂತ ನೋವು ಪಡ್ಬೇಡಿ, ಅಪ್ಪು ನಮ್ಮ ಜೊತೆಯಲ್ಲೇ ಇರ್ತಾರೆ: ಜ್ಯೂ.ಎನ್‍ಟಿಆರ್

ಜೈಲಿನಿಂದ ಹೊರಬಂದಾಗ ಆತನನ್ನು ಮೆರವಣಿಗೆ ಮಾಡಲಾಗಿತ್ತು. ಬಿಡುಗಡೆಯಾದ ಬಳಿಕ ಆತ ಜಮ್ಮು ಕಾಶ್ಮೀರ್ ಲಿಬರೇಶನ್ ಫ್ರಂಟ್‍ಗೆ ಸೇರಿದ್ದ. 2019ರ ಪುಲ್ವಾಮಾ ದಾಳಿಯಲ್ಲಿ ಈತನ ಕೈವಾಡ ಇರುವ ಹಿನ್ನೆಲೆಯಲ್ಲಿ ಭಯೋತ್ಪಾದನೆ ಸಂಬಂಧಿತ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಂಧಿಸಿದೆ.

ಬಿಟ್ಟಾ ಕರಾಟೆ 2011ರಲ್ಲಿ ಕಾಶ್ಮೀರ ಆಡಳಿತ ಸೇವೆ(ಕೆಎಎಸ್) ಅಧಿಕಾರಿ ಅಸ್ಪಾ ಖಾನ್‍ಮನ್ನು ಮದುವೆಯಾಗಿದ್ದಾನೆ. ಅಸ್ಪಾ ಖಾನ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 2009ರಲ್ಲಿ ಅಸ್ಬಾ ಕೆಎಎಸ್ ಪರೀಕ್ಷೆ ತೇರ್ಗಡೆಯಾಗಿ ಸರ್ಕಾರ ಸಾಮಾನ್ಯ ಆಡಳಿತ ಇಲಾಖೆಯಲ್ಲಿ ಅಧಿಕಾರಿಯಾಗಿ ನೇಮಿಸಿತ್ತು. 48 ವರ್ಷದ ಅಸ್ಬಾ ಖಾನ್ ಕಾಶ್ಮೀರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *