ಪುರಿ ಬೀಚ್‍ನಲ್ಲಿ ಅರಳಿತು ‘ದಿ ಕಾಶ್ಮೀರ್ ಫೈಲ್ಸ್’

Public TV
1 Min Read

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಚಿತ್ರಮಂದಿರಕ್ಕೆ ಬಂದಾಗಿನಿಂದ ಇದರ ಬಗ್ಗೆ ಒಂದಲ್ಲ ಒಂದು ವಿವಾದ, ಸುದ್ದಿ ಕೇಳಿ ಬರುತ್ತಲೇ ಇದೆ. ಕಾಶ್ಮೀರದಲ್ಲಿ 1990ರ ಅವಧಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಖ್ಯಾತ ಸ್ಯಾಂಡ್ ಆರ್ಟಿಸ್ಟ್ ಸುದರ್ಶನ್ ಪಟ್ನಾಯಕ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

ಸುದರ್ಶನ್ ಟ್ವಿಟ್ಟರ್‌ನಲ್ಲಿ, ಪುರಿ ಬೀಚ್‍ನಲ್ಲಿ ನನ್ನ ಸ್ಯಾಂಡ್ಆರ್ಟ್ ಎಂದು ಬರೆದು ‘ದಿ ಕಾಶ್ಮೀರ್ ಫೈಲ್ಸ್’ 30 ವರ್ಷಗಳ ನಂತರ ಎಂದು ಟ್ವೀಟ್ ಮಾಡಿದ್ದಾರೆ. ಸುದರ್ಶನ್ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ, ಕಾಶ್ಮೀರ ಮ್ಯಾಪ್‌ಗೆ ಕೆಂಪು ಬಣ್ಣ ಹಾಕಿದ್ದು, ‘ದಿ ಕಾಶ್ಮೀರ್ ಫೈಲ್ಸ್’ 30 ವರ್ಷಗಳ ನಂತರ ಎಂದು ಬರೆದಿದ್ದಾರೆ. ಅಲ್ಲದೇ ಮ್ಯಾಪ್ ಅಕ್ಕ-ಪಕ್ಕದಲ್ಲಿ ಕಾಶ್ಮೀರಿ ಹೋರಾಟದಲ್ಲಿ ಪ್ರಾಣ ಕೊಟ್ಟವರ ಭಾವಚಿತ್ರವನ್ನು ಬಿಡಿಸಿದ್ದಾರೆ. ಇದನ್ನೂ ಓದಿ: ಹೆಂಡತಿ, ಮೊಮ್ಮಗನ ಮುತ್ತಿಗೆ ಉಬ್ಬಿಹೋದ ಜಗ್ಗೇಶ್

ಈ ಸ್ಯಾಂಡ್ ಆರ್ಟ್ ಮೂಲಕ ಸುದರ್ಶನ್ 30 ವರ್ಷಗಳ ಹಿಂದೆ ಗತಿಸಿದ್ದ ಕರಾಳದಿನವನ್ನು ನೆನಪಿಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ‘ದಿ ಕಾಶ್ಮೀರ್ ಫೈಲ್ಸ್’ ಮೂವೀ ಜನರಲ್ಲಿ ಎಷ್ಟುರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಸಿನಿಮಾವನ್ನು ಭಾರತೀಯರು ಕಡ್ಡಾಯವಾಗಿ ನೋಡಬೇಕು ಎಂದು ಸೆಲೆಬ್ರಿಟಿಗಳು ಸೇರಿ ರಾಜಕೀಯ ಮುಖಂಡರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಾಶ್ಮೀರಿ ಪಂಡಿತರು ಹೇಗೆ ತಮ್ಮ ತನವನ್ನು ಉಳಿಸಿಕೊಳ್ಳಲು ಹೋರಾಡಿದರು. ಸಮುದಾಯವೊಂದು ಕಾಶ್ಮೀರಿ ಪಂಡಿತರನ್ನು ಹೇಗೆ ಅಮಾನೀಯವಾಗಿ ಕೊಲ್ಲುತ್ತಿದ್ದರು ಎಂಬುದನ್ನು ಸೂಕ್ಷ್ಮವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ. ಕೆಲವರು ಈ ಸಿನಿಮಾ ನೋಡಿ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದು ನಿಜವೆಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

Share This Article
Leave a Comment

Leave a Reply

Your email address will not be published. Required fields are marked *