ಸರೋಜಮ್ಮ ನಮ್ಮ ಜೊತೆ ಇರಬೇಕಿತ್ತು ಹಿರಿಯ ಜೀವವನ್ನು ಕಳ್ಕೊಂಡಿದ್ದೇವೆ, ಕನ್ನಡ ಚಿತ್ರರಂಗ ಹಿರಿಯರಿಲ್ಲದ ಮನೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ, ಹಿರಿಯ ನಟಿ ಉಮಾಶ್ರೀ (Umashree) ಭಾವುಕರಾಗಿದ್ದಾರೆ.
ಬಿ.ಸರೋಜಾದೇವಿಯವರ ಅಂತಿಮ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಭಾರತ ದೇಶದಲ್ಲಿ ಅತ್ಯಂತ ಪ್ರಬುದ್ಧವಾದಂತಹ, ದಕ್ಷಿಣದ ಧ್ರುವ ತಾರೆಯೆಂದೇ ಪ್ರಸಿದ್ಧಿಯಾಗಿದ್ದ ಮೇರು ನಟಿ ಇಂದು ನಮ್ಮ ಜೊತೆಗಿಲ್ಲ ಎನ್ನುವುದು ತುಂಬಾ ದುಃಖದ ಸಂಗತಿ. ಅವರು ವೈಯಕ್ತಿಕ ಜೀವನ, ವೃತ್ತಿ ಜೀವನ, ಅವರು ನಡೆದು ಬಂದ ರೀತಿ ಮುಂದಿನ ಎಲ್ಲ ಪೀಳಿಗೆಗೂ ಮಾದರಿ. ಹೇಗೆ ಶಿಸ್ತುಬದ್ದವಾಗಿ ಇರಬೇಕು ಎನ್ನುವುದು ಸರೋಜಮ್ಮನನ್ನು ನೋಡಿ ಕಲಿಬೇಕು ಎಂದರು.ಇದನ್ನೂ ಓದಿ: ಕೋಲಾರ | KSRTC ನೌಕರ ಹೃದಯಾಘಾತದಿಂದ ಸಾವು
ಬಣ್ಣದ ಜಗತ್ತಿಗೆ ಕಾಲಿಟ್ಟು ಸುಮಾರು 70 ವರ್ಷಗಳಾಗಿದೆ. 2019ರ ತೆರೆಕಂಡ ನಟ ಸಾರ್ವಭೌಮ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅವರ ರೀತಿಯ ಸಾಧನೆ ಯಾರಿಗೂ ಮಾಡೋಕೆ ಆಗಲ್ಲ. ಹಿರಿಯ ಜೀವ, ನಮ್ಮ ಜೊತೆ ಇರಬೇಕಿತ್ತು. ಆದರೆ ಕಳ್ಕೊಂಡಿದ್ದೇವೆ. ಕನ್ನಡ ಚಿತ್ರರಂಗ ಹಿರಿಯರಿಲ್ಲದ ಮನೆಯಾಗುತ್ತಿದೆ. ಭಾರತ ದೇಶದ ಪ್ರತಿಯೊಂದು ಭಾಷೆಯವರು ಗೌರವದಿಂದ ಕಾಣುತ್ತಿದ್ದ ಖ್ಯಾತ ಕಲಾವಿದೆ ಸರೋಜಾದೇವಿಯವರು.
ನಮ್ಮ ಕನ್ನಡ ಚಿತ್ರರಂಗದಲ್ಲಿ ಪದ್ಮಭೂಷಣ, ಪದ್ಮವಿಭೂಷಣ, ಬೇರೆ ಬೇರೆ ರಾಜ್ಯಗಳ ಪ್ರಶಸ್ತಿ, ಡಾಕ್ಟರೇಟ್ ಹಾಗೂ ಇತರೇ ಸಾಧನೆಗಳನ್ನು ಮಾಡಿದವರಲ್ಲಿ ನನಗೆ ಗೊತ್ತಿರುವವರು ಇವರೇ ಮೊದಲಿಗರು ಅನಿಸುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ, ಎಲ್ಲರಿಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪಾರ್ಥಿಸುತ್ತೇನೆ ಎಂದು ಹೇಳಿದರು.ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿ 62.6 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ – ಭಾರತೀಯ ಮಹಿಳೆ ಅರೆಸ್ಟ್