ರ್ಯಾಪ್ ಸಾಂಗ್ ಹೆಸರಲ್ಲಿ ರ್ಯಾಪರ್ (Canadian Rapper) ಓರ್ವಳು ವಿಕೃತಿ ಮೆರೆದಿದ್ದಾರೆ. ಇಂಡೋ ಕೆನೆಡಿಯನ್ ರ್ಯಾಪರ್ ಟಾಮಿ ಜೆನೆಸಿಸ್ (Tommy Genesis) ಟ್ಯಾಲೆಂಟ್ ತೋರಿಸೋ ಬದಲು ವಿರೂಪ ಮನಸ್ಸನ್ನ ಪ್ರದರ್ಶಿಸಿದ್ದಾರೆ. ಕಾಳಿಮಾತೆಯ (Hindu Goddess Kali) ಅವತಾರದಲ್ಲಿ ವಿಕೃತವಾಗಿ ನಡೆದುಕೊಂಡಿದ್ದಾರೆ.
`ಟ್ರ್ಯೂ ಬ್ಯೂʼ ಹೆಸರಿನ ರ್ಯಾಪ್ ಆಲ್ಬಂ ರಿಲೀಸ್ ಆಗಿದ್ದು ಇದೀಗ ಈ ಹಾಡನ್ನ ರಿಪೋರ್ಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಹೆಚ್ಚಾಗಿದೆ. ಇಂಥಹ ವಿಕೃತಿಯನ್ನ ಪೋಷಿಸದಂತೆ ತಡೆಯಲು ಕರೆ ಕೊಡಲಾಗುತ್ತಿದೆ. ಇದನ್ನೂ ಓದಿ: ಮಾದಕ ವಸ್ತು ಸೇವನೆ ಆರೋಪ – ಹೆಸರಾಂತ ತಮಿಳು ನಟ ಶ್ರೀಕಾಂತ್ ಅರೆಸ್ಟ್
ಪ್ರತಿಭೆ ತೋರಿಸೋ ನೆಪದಲ್ಲಿ ವಿಕೃತಿ ಮನಸ್ಸನ್ನ ಪ್ರದರ್ಶಿಸಿದ ಟಾಮಿ ವಿರುದ್ಧ ಆಕ್ರೋಶ ಜೋರಾಗಿದ್ದು ಈ ರ್ಯಾಪರ್ ಹಿಂದೂ ಹಾಗೂ ಕ್ರಿಶ್ಚಿಯನ್ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ ಆರೋಪ ಮಾಡಲಾಗುತ್ತಿದೆ. ಕಾಳಿ ಅವತಾರದಲ್ಲಿದ್ದುಕೊಂಡು ಧೂಮಪಾನ ಮಾಡುವುದು, ಕ್ರಿಶ್ಚಿಯನ್ ಕ್ರಾಸ್ನ್ನು ಪ್ರಾಪ್ ರೀತಿಯಲ್ಲಿ ಬಳಸಿ ನೆಕ್ಕಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ʻಕೂಲಿʼ ಚಿತ್ರದ ಫಸ್ಟ್ ಸಾಂಗ್ಗೆ ಮುಹೂರ್ತ ಫಿಕ್ಸ್
ಈಕೆಯ ಕೆಟ್ಟ ಮನಸ್ಥಿತಿಗೆ ಧಿಕ್ಕಾರದ ಕೂಗು ಜೋರಾಗಿದ್ದು ಶೀಘ್ರದಲ್ಲೇ ದೂರು ದಾಖಲಾಗುವ ಸಾಧ್ಯತೆ ಇದೆ. ಇಂಥಹ ಅರ್ಥವಿಲ್ಲದ ರ್ಯಾಪ್ ಹಾಡುಗಳನ್ನ ಬಹಿಷ್ಕಾರ ಮಾಡುವಂತೆ ಆಗ್ರಹ ಹೆಚ್ಚಾಗಿದ್ದು. ಕೂಡಲೇ ಸೋಶಿಯಲ್ ಮೀಡಿಯಾದಿಂದ ವೀಡಿಯೋ ಡಿಲೀಟ್ ಆಗಬೇಕು, ಜೊತೆಗೆ ವಿಕೃತಿ ಮರೆದ ಟಾಮಿ ವಿರುದ್ಧ ದೂರು ದಾಖಲಾಗಬೇಕು ಎಂಬ ಬೇಡಿಕೆ ಜೋರಾಗಿದೆ. ಇದನ್ನೂ ಓದಿ: ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್