– ಪೂರ್ವ ನಿಯೋಜಿತ ಕೃತ್ಯ
– ಪ್ರವೀಣ್ ಕೊಲೆ ಹಿಂದೆ ಭಾರಿ ಷಡ್ಯಂತ್ರ
ನವದೆಹಲಿ: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಉದ್ದೇಶವಾಗಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಈ ಬಗ್ಗೆ ತನಿಖೆ ಆಗಬೇಕು, ಉಗ್ರ ಶಿಕ್ಷೆಯಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರದ ಪ್ರಮಾಣಿಕ ಕಾರ್ಯಕರ್ತ. ಕೋಳಿ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಪ್ರವೀಣ್‍ನನ್ನು ಕೊಲೆ ಮಾಡಿದ್ದಾರೆ. ಮಸೂದ್ ಹತ್ಯೆಗೆ ಹೊಂದಾಣಿಕೆ ಮಾಡುತ್ತಿದ್ದಾರೆ. ಮಸೂದ್, ಪ್ರವೀಣ್‍ಗೆ ಗೊತ್ತಿರಲಿಲ್ಲ. ಮಸೂದ್ ಹತ್ಯೆ ಮಾಡಿದವರು ವೈಯಕ್ತಿಕ ಜಗಳ ಮಾಡಿಕೊಂಡಿದ್ದರು. ಪಾನಮತ್ತರಾಗಿದ್ದರು. ಹಾಗಾಗಿ ಹತ್ಯೆ ನಡೆದಿತ್ತು. ಆದರೆ ಪ್ರವೀಣ್ ಪ್ರಕರಣ ಭಿನ್ನವಾಗಿದೆ. ಬೈಕ್ ಮೇಲೆ ಬಂದು ಅವರ ಮೇಲೆ ದಾಳಿ ಮಾಡಿದ್ದಾರೆ. ತಲವಾರ್‌ನಿಂದ ಕುತ್ತಿಗೆ ಮತ್ತು ತಲೆಗೆ ಹೊಡೆಯಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ, ಯೋಗಿ ಮಾದರಿಯಲ್ಲಿ ಇವರಿಗೆ ಗಟ್ಸ್ ಇಲ್ಲ: ಪ್ರವೀಣ್ ಹತ್ಯೆಗೆ ಮುತಾಲಿಕ್ ಕಿಡಿ
ಕೊಲೆ ನಡೆದ ಪ್ರದೇಶ ಕೇರಳ ಗಡಿ ಭಾಗ. ಗ್ರಾಮೀಣ ಪ್ರದೇಶ ಆಗಿರುವುದರಿಂದ ಸಿಸಿಟಿವಿ ಇರಲ್ಲ. ಅದಾಗ್ಯೂ ಇದರ ಹಿಂದೆ ಇರುವ ಎಲ್ಲರನ್ನು ಬಂಧಿಸಬೇಕು. ಸ್ಥಳೀಯರ ಕುಮ್ಮಕ್ಕು ಇರುವ ಸಾಧ್ಯತೆಗಳಿದೆ. ಯಾವ ಸಂಘಟನೆ ಕೆಲಸ ಮಾಡಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇಂದು ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಎನ್‍ಐಎ ತನಿಖೆ ವಹಿಸಲು ಮನವಿ ಮಾಡುತ್ತೇನೆ. ರಾಷ್ಟ್ರೀಯ ಭದ್ರತೆಗೆ ಸವಾಲಾಗಿರುವವರನ್ನು ಪತ್ತೆ ಹಚ್ಚಬೇಕು ಈ ಬಗ್ಗೆ ಕ್ರಮ ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಊರಿನ ಯಾರ ಮನೆಯಲ್ಲಿ ಸಮಸ್ಯೆ ಇದ್ರೂ ಸ್ಪಂದಿಸ್ತಿದ್ದ: ಪ್ರವೀಣ್ ಮಾವ ಕಣ್ಣೀರು
ಬೇರೆ ಯಾವುದೇ ಪ್ರಶ್ನೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನಾವು ಅಪರಾಧಿಗಳನ್ನು ಪತ್ತೆ ಹಚ್ಚಬೇಕು. ಅಮಾಯಕರನ್ನು ಹತ್ಯೆ ಮಾಡಲಾಗಿದೆ. ಸಂಘಟನೆಯ ಹುಡುಗ, ಕಳೆದ ಬಾರಿ ಸುಳ್ಯಕ್ಕೆ ಭೇಟಿ ನೀಡಿದಾದ ಭೇಟಿಯಾಗಿದ್ದ. ಕಳೆದ ರಕ್ಷ ಬಂಧನದ ವೇಳೆ ಭೇಟಿ ಮಾಡಿದ್ದ. ವೈಯಕ್ತಿಕವಾಗಿ ತುಂಬಾ ಗೊತ್ತಿರುವ ವ್ಯಕ್ತಿ. ವಿವಾದಗಳಲ್ಲಿ ಸಿಲುಕಿಕೊಳ್ಳದೆ ಇದ್ದಾತ. ಯಾವುದೇ ಗಲಭೆಗಳಲ್ಲಿ ಭಾಗಿಯಾಗುತ್ತಿರಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷ ಕೊಟ್ಟ ಕೆಲಸ ಮಾಡುತ್ತಿದ್ದ ಎಂದು ಪ್ರವೀಣ್ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.