ಕನ್ನಡಿಗರ ರಕ್ಷಣೆಯ ಸಂಪೂರ್ಣ ವೆಚ್ಚ ಸರ್ಕಾರ ಭರಿಸಲಿದೆ: ಬೊಮ್ಮಾಯಿ

Public TV
1 Min Read

ಬೆಂಗಳೂರು: ಉಕ್ರೇನ್‍ನಲ್ಲಿರೋ ಕನ್ನಡಿಗರು ವಾಪಸ್ ಕರೆ ತರುವ ಸಂಪೂರ್ಣ ವೆಚ್ಚ ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಕನ್ನಡಿಗರ ರಕ್ಷಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಉಕ್ರೇನ್‍ನಿಂದ ಮೊದಲ ತಂಡ ಭಾರತಕ್ಕೆ ಆಗಮಿಸಿದೆ. ವೆಸ್ಟರ್ನ್ ಭಾಗದಲ್ಲಿ ಇದ್ದ ವಿದ್ಯಾರ್ಥಿಗಳು ಈಗ ಆಗಮಿಸಿದ್ದಾರೆ. ದೆಹಲಿ ಹೈ ಕಮಿಷನರ್ ಗೆ ಸೂಚನೆ ಕೊಟ್ಟಿದ್ದೇನೆ. ಮುಂಬೈಯಿಂದಲೂ ಕರೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ

ರಾಷ್ಟ್ರೀಯ ವಿಪತ್ತು ನಿರ್ವಹಣೆ ಅಧಿಕಾರಿಗಳು ದೆಹಲಿಯಲ್ಲಿ ಇದ್ದಾರೆ. ಅವರನ್ನು ಕರ್ನಾಟಕಕ್ಕೆ ತರುವ ಕೆಲಸ ಆಗುತ್ತದೆ. ಇದಕ್ಕೆ ತಗಲುವ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಲಿದೆ ಎಂದು ಭರವಸೆ ಕೊಟ್ಟರು. ಕೇಂದ್ರದ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಎರಡು ಹೆಲ್ಪ್ ಲೈನ್ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ನಾನು ಮಾತಾಡಿದ್ದೇನೆ. ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದೇನೆ ಎಂದು ವಿವರಿಸಿದರು.

ಕರಕೈ ಎನ್ನುವ ಪ್ರದೇಶದಲ್ಲಿ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅದು ನಾರ್ತ್ ಇಸ್ಟ್ ಪ್ರದೇಶದಲ್ಲಿ ಇದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಯುದ್ಧ ನಡೆಯುತ್ತಿದೆ. ಹೀಗಾಗಿ ಮೆಟ್ರೋ, ಬಂಕರ್ ಗಳಲ್ಲಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ. ಸಣ್ಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಂದೇ ಕಡೆ ಸೇರಿಕೊಂಡಿದ್ದಾರೆ. ಇದು ಆತಂಕ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಗೆ ಡ್ರೆಸ್ ಕೋಡ್ ಕಡ್ಡಾಯ!

ಮೊದಲು ಅವರಿಗೆ ಊಟ, ನೀರು ನೀಡಲು ವಿದೇಶಾಂಗ ಸಚಿವರ ಜೊತೆ ಮಾತಾಡಿದ್ದೇನೆ. ಯುದ್ಧದ ವಾತಾವರಣ ಕಡಿಮೆ ಆದ ಮೇಲೆ ಅವರನ್ನು ಕರೆಸುವ ಕೆಲಸ ಆಗುತ್ತದೆ ಎಂದು ಭರವಸೆ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *