ಧರ್ಮಸ್ಥಳ ಹೆಸರಿಗೆ ಕೆಸರು ಎರಚುವ ಹುನ್ನಾರದಲ್ಲಿ ಸರ್ಕಾರವೂ ಶಾಮೀಲು: ಸುನಿಲ್ ಕುಮಾರ್

Public TV
1 Min Read

– ಇದರ ಹಿಂದೆ ಒಬ್ಬ ಮುಸುಕುಧಾರಿ ಇಲ್ಲ, ಹತ್ತಾರು ಮಂದಿ ಮುಸುಕುಧಾರಿಗಳಿದ್ದಾರೆ ಎಂದ ಬಿಜೆಪಿ ಶಾಸಕ
– ವಿಧಾನಸಭೆ ಸದನದಲ್ಲಿ ಭಾರೀ ಗದ್ದಲ, ಕೋಲಾಹಲ

ಬೆಂಗಳೂರು: ಧರ್ಮಸ್ಥಳ (Dharmasthala) ಹೆಸರಿಗೆ ಕೆಸರು ಎರಚುವ ಹುನ್ನಾರದಲ್ಲಿ ಸರ್ಕಾರವೂ (Congress) ಶಾಮೀಲಾಗಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುನಿಲ್ ಕುಮಾರ್ (Sunil Kumar) ಗಂಭೀರ ಆರೋಪ ಮಾಡಿದ್ದಾರೆ. ಇದು ವಿಧಾನಸಭೆ ಸದನದಲ್ಲಿ ಭಾರೀ ಗದ್ದಲ ಕೋಲಾಹಲಕ್ಕೆ ಎಡೆಮಾಡಿಕೊಟ್ಟಿತು.

ಪರಮೇಶ್ವರ್ (G Parameshwar) ಉತ್ತರಕ್ಕೆ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಅವರು, ಎಸ್‌ಐಟಿಗೆ (SIT) ನಮ್ಮ ವಿರೋಧ ಇಲ್ಲ. ಯೂಟ್ಯೂಬರ್‌ಗಳ ಮೂಲಕ ಅಪಪ್ರಚಾರ ನಡೀತಿದೆ, ಅವರ ಮೇಲೆ ಕ್ರಮ ಯಾಕಿಲ್ಲ ಅನ್ನೋದು ಮೊನ್ನೆ ಸದನದಲ್ಲಿ ಚರ್ಚೆ ಮಾಡಿದ್ದು. ಇದರ ಹಿಂದೆ ಒಬ್ಬ ಮುಸುಕುಧಾರಿ ಅಲ್ಲ, ಹತ್ತಾರು ಜನ ಮುಸುಕು ಹಾಕಿಕೊಂಡು ಇದರ ಹಿಂದೆ ಪಿತೂರಿ ಮಾಡಿದ್ದಾರೆ. ಅವರ ವಿರುದ್ಧ ಏನು ತನಿಖೆ? ಹಿಂದೆ ಯಾರಿದ್ದಾರೆ ಅವರನ್ನು ಬಯಲಿಗೆಳೆಯಿರಿ. ಧರ್ಮಸ್ಥಳ ಹೆಸರಿಗೆ ಕೆಸರು ಎರಚುವ ಹುನ್ನಾರ ನಡೀತಿದೆ. ಸತ್ಯ ಹೊರಗೆ ಬರೋದಕ್ಕಿಂತಲೂ ಧರ್ಮಸ್ಥಳ ಹೆಸರಿಗೆ ಕೆಸರು ಎರಚೋದೇ ಇವರಿಗೆ ಮುಖ್ಯವಾಗಿದೆ. ಸರ್ಕಾರದ ಉದ್ದೇಶವೂ ಅದೇ ಆಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಟ್ರಂಪ್ ಜೊತೆ ಅಲಾಸ್ಕ ಸಭೆ ಬಳಿಕ ಮೋದಿಗೆ ಫೋನ್ ಮಾಡಿದ ಪುಟಿನ್

ಸುನಿಲ್ ಕುಮಾರ್ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು, ಅಲ್ಲದೇ ಕ್ಷಮೆಗೆ ಆಗ್ರಹಿಸಿದರು. ಆದರೆ ತಮ್ಮ ಆರೋಪ ಸಮರ್ಥಿಸಿಕೊಂಡ ಸುನಿಲ್ ಕುಮಾರ್, ನಿಮ್ಮ ಹೈಕಮಾಂಡ್ ಸೂಚನೆ ಮೇರೆಗೆ ಧರ್ಮಸ್ಥಳದ ಮೇಲೆ ಕಾಂಗ್ರೆಸ್‌ನಿಂದ ಅಪಪ್ರಚಾರ ಎಂದರು. ಇದು ಮತ್ತಷ್ಟು ವಾಗ್ವಾದಕ್ಕೆ ಕಾರಣವಾಯಿತು. ಸದನದ ಬಾವಿಗಿಳಿದು ಪ್ರತಿಭಟನೆ, ಕ್ಷಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಧಿಕ್ಕಾರ ಘೋಷಣೆ ಕೂಗಿದರು. ಸರ್ಕಾರವೇ ಹುನ್ನಾರ ಮಾಡಿದೆ ಎಂಬ ಪದ ತೆಗೆಯಿರಿ ಎಂದ ಸ್ಪೀಕರ್, ಗದ್ದಲ ಹಿನ್ನೆಲೆ ಕಲಾಪ ಹತ್ತು ನಿಮಿಷ ಮುಂದೂಡಿದರು. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗಕ್ಕೆ ವಿಪಕ್ಷಗಳ ಸಿದ್ಧತೆ

Share This Article