ಮಾರ್ಚ್ 2ರಂದು ರಿಲೀಸ್ ಆಗಲಿದೆ ‘ಯುವ’ ಚಿತ್ರದ ಮೊದಲ ಸಾಂಗ್

Public TV
1 Min Read

ಗಂಡು ಮೆಟ್ಟಿದ ನಾಡಲ್ಲೇ ‘ಯುವ’ (Yuva Film) ಪಟ್ಟಾಭಿಷೇಕದ ಮೆರವಣಿಗೆಗೆ ಚಾಲನೆ ಸಿಕ್ಕಲಿದೆ. ಅಣ್ಣಾವ್ರು-ಅಪ್ಪು ಹೆಸರನ್ನ ಹೃದಯದಲ್ಲಿ ಇಟ್ಟು ಪೂಜಿಸುವ ಹುಬ್ಬಳ್ಳಿಯಲ್ಲಿ ‘ಯುವ’ ರಣಕಹಳೆ ಮೊಳಗಿಸಲಿದ್ದಾರೆ. ಬ್ಲಡ್‌ಲೈನ್ ದಾಟುವ ಸಾಹಸ ಮಾಡಿದವರಿಗೆ ಆ ಜಾಗದಲ್ಲೇ ಎಚ್ಚರಿಕೆಯ ಗಂಟೆ ಮೊಳಗಿಸಲು ಬರುತ್ತಿದ್ದಾರೆ. ‘ಯುವ’ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಇಲ್ಲಿದೆ.

‘ಯುವ’ ಸಿನಿಮಾ ದೊಡ್ಮನೆಗೆ ಯುವರಾಜ. ಸಮಸ್ತ ದೊಡ್ಮನೆ ಅಭಿಮಾನಿ ದೇವರುಗಳ ಭರವಸೆ. ಕುಟುಂಬದ ಆಸ್ತಿ. ಕರುನಾಡಿಗೆ ಭಕ್ತಿ. ದೊಡ್ಮನೆ ನಯಾ ರಾಜಕುಮಾರ ಪಟ್ಟಾಭಿಷೇಕ ನಡೆಯೋದು ಮಾರ್ಚ್ 28ಕ್ಕೆ. ಅದಕ್ಕೀಗ ಸಂಪೂರ್ಣ ಸಿದ್ಧತೆ ನಡೆದಿದ್ದು, ಮಾರ್ಚ್ 2ರಂದು ಹುಬ್ಬಳ್ಳಿಯಲ್ಲಿ ರಣಕಹಳೆ ಮೊಳಗಲಿದೆ. ಇದನ್ನೂ ಓದಿ:ತೆರೆಯ ಮೇಲೆ ಕಬಡ್ಡಿ ಆಟಗಾರನ ದುರಂತದ ಕಥೆ: ಪರ್ಶು ಚಿತ್ರಕ್ಕೆ ಸುನಿ ಸಾಥ್

ಯುವರಾಜ್‌ಕುಮಾರ್ (Yuvarajkumar) ಗ್ರ್ಯಾಂಡ್ ಎಂಟ್ರಿಯ ‘ಯುವ’ ಚಿತ್ರದ ಫಸ್ಟ್ ಸಿಂಗಲ್ ಚಾಮರಾಜನಗರದಲ್ಲಿ ನಡೆಯಬೇಕಿತ್ತು. ಆದರೀಗ ಜಾಗ ಬದಲಾಗಿದೆ. ಮಾರ್ಚ್ 2ರಂದು ಹುಬ್ಬಳ್ಳಿಯಲ್ಲಿ ‘ಯುವ’ ಮೊದಲ ಹಾಡು ರಿಲೀಸ್ ಆಗ್ತಿರೋದು ವಿಶೇಷ. ಆ ದಿನದಿಂದಲೇ ‘ಯುವ’ ಚಿತ್ರಕ್ಕೆ ಪ್ರಚಾರ ಸಿಗಲಿದೆ.

ಚಾಮರಾಜನಗರದಲ್ಲಿ ನಡೆಯಬೇಕಿದ್ದ ‘ಯುವ’ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಹುಬ್ಬಳ್ಳಿಗೆ ಶಿಫ್ಟ್ ಆಗಿದೆ. ಕಾರಣಾಂತರದಿಂದ ಗಂಡು ಮೆಟ್ಟಿದ ನಾಡಲ್ಲಿ ಅಣ್ಣಾವ್ರ ಕಟ್ಟಾ ಭಕ್ತರಿರುವ ಮಣ್ಣಿನಲ್ಲಿ ಅಣ್ಣಾವ್ರ ಮೊಮ್ಮಗ ಮೊದಲ ಬಾರಿಗೆ ಚಿತ್ರದ ಕುರಿತಾದ ವೇದಿಕೆಯಲ್ಲಿ ಹುಬ್ಬಳ್ಳಿ ಜನರೆದುರು ಖುಷಿ ಹಂಚಿಕೊಳ್ತಾರೆ. ಬಳಿಕ ಒಂದೊಂದಾಗೇ ಪ್ರಚಾರ ಪ್ರಕ್ರಿಯೆಗಳು ಪ್ರಾರಂಭವಾಗುತ್ತೆ. ಬಳಿಕ ಹೊಸಪೇಟೆ ಬೆಂಗಳೂರು ಹೀಗೆ ಹಲವು ಕಡೆ ಪ್ರಚಾರದ ಪ್ರಯಾಣ ನಡೆಯುತ್ತಿರುತ್ತೆ. ಹೀಗೆ ಮಾರ್ಚ್ ತುಂಬೆಲ್ಲಾ ಯುವ ಮೆರವಣಿಗೆ ಶುರುವಾಗಲಿದೆ.

Share This Article