ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗೆ ಹಣ – ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಮೋದಿ ಸಹಿ

Public TV
1 Min Read

ನವದೆಹಲಿ: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ (PM Kissan Samman Nidhi) ಕಡತಕ್ಕೆ ಪ್ರಧಾನಿ ಮೋದಿ (PM Narendra Modi) ಸಹಿ ಹಾಕಿದ್ದಾರೆ.

ಮೋದಿ ಅವರು ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ಅಧಿಕಾರ ನೀಡುವ ತಮ್ಮ ಮೊದಲ ಫೈಲ್‌ಗೆ ಸಹಿ ಹಾಕಿದರು. ಇದನ್ನೂ ಓದಿ: ಕಂದಕಕ್ಕೆ ಬಿದ್ದ ನಂತರವೂ ಬಸ್ಸಿನ ಬಳಿ ಬಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು : ಭಯಾನಕ ಅನುಭವ ಬಿಚ್ಚಿಟ್ಟ ಯತ್ರಾರ್ಥಿ

 

ಒಟ್ಟು  9.3 ಕೋಟಿ ರೈತರಿಗೆ ಹಣ ಸಿಗಲಿದೆ. ಮೋದಿ ಅವರು ಒಟ್ಟು 20,000 ಕೋಟಿ ರೂ. ಹಣ ಬಿಡುಗಡೆಗೆ ಮಾಡುವ ಕಡತಕ್ಕೆ  ಸಹಿ ಹಾಕಿದ್ದಾರೆ. 4 ತಿಂಗಳಿಗೊಮ್ಮೆ 2 ಸಾವಿರ ರೂ. ವರ್ಷಕ್ಕೆ 6 ಸಾವಿರ ರೂ.  ನಿಧಿಯ ಮೂಲಕ ರೈತರ ಖಾತೆಗೆ ಹಣ ಜಮೆಯಾಗುತ್ತಿದೆ.

ಮೂರನೇ ಬಾರಿ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

Share This Article