ಕಿಚ್ಚನ ಭೇಟಿಗೆ 600 ಕಿಲೋ ಮೀಟರ್ ನಡೆದು ಬಂದ ಮಹಿಳಾ ಅಭಿಮಾನಿಗಳು

Public TV
1 Min Read

ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಏನೆಲ್ಲ ಮಾಡುತ್ತಾರೆ. ಈ ಹಿಂದೆ ಹೈದರಾಬಾದ್ ಕರ್ನಾಟಕದಲ್ಲಿ ಅಭಿಮಾನಿಯೊಬ್ಬ ಸುದೀಪ್ ಅವರ ಗುಡಿ ಕಟ್ಟಿಸಿದ್ದ. ಅಲ್ಲದೇ ಅನೇಕ ಕಡೆ ಕಿಚ್ಚನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಕಾಮನ್ ಆಗಿದೆ. ಇದೀಗ ಮಹಿಳಾ ಅಭಿಮಾನಿ ಮೂವರು ಮತ್ತು ಮತ್ತೋರ್ವ ವ್ಯಕ್ತಿ ಸುದೀಪ್ ಅವರನ್ನು ನೋಡುವುದಕ್ಕಾಗಿಯೇ 600 ಕಿಲೋ ಮೀಟರ್ ನಡೆದುಕೊಂಡು ಬಂದಿದ್ದಾರೆ. ಬರೋಬ್ಬರಿ 16 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗಳು ನೆಚ್ಚಿನ ನಟನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

ಈ ವಿಷಯ ತಿಳಿದ ಸುದೀಪ್ ಅವರು, ಅಭಿಮಾನಿಗಳನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಅವರ ಅಭಿಮಾನಕ್ಕೆ ಶರಣಾಗಿದ್ದಾರೆ. ಅವರ ಕಷ್ಟ ಸುಖಗಳನ್ನು ವಿಚಾರಿಸಿಕೊಂಡು ಕೆಲ ಹೊತ್ತು ಅವರೊಂದಿಗೆ ಕಾಲ ಕಳೆದಿದ್ದಾರೆ. ದೂರದ ಕಲಬುರಗಿ ಹಳ್ಳಿಯೊಂದರಿಂದ ಬಂದ ಆ ಅಭಿಮಾನಿಗಳು ನೆಚ್ಚಿನ ನಟ ಜತೆ ಕಳೆದ ಕ್ಷಣಗಳನ್ನು ಯಾವತ್ತೂ ಮರೆಯುವುದಕ್ಕೆ ಆಗಲ್ಲ ಅಂದಿದ್ದಾರೆ.  ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

ಅಭಿಮಾನಿಗಳ ವಿಷಯದಲ್ಲಿ ಸುದೀಪ್ ಯಾವತ್ತೂ ಗೌರವ ತೋರಿಸುತ್ತಾ ಬಂದಿದ್ದಾರೆ. ಹಾಗಾಗಿಯೇ ಸುದೀಪ್ ಅವರಿಗೆ ಪ್ರತ್ಯೇಕ ಮಹಿಳಾ ಅಭಿಮಾನಿ ಸಂಘಗಳು ಇವೆ. ಅನೇಕ ಸಂದರ್ಭದಲ್ಲಿ ಅಭಿಮಾನಿಗಳ ಪರ ನಿಂತು ಹೋರಾಟ ಮಾಡಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅನೇಕ ಅಭಿಮಾನಿಗಳ ಜೀವನಕ್ಕೆ ದಾರಿಯೂ ಆಗಿದ್ದಾರೆ. ಹಾಗಾಗಿ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಕನ್ನಡದ ನಟರಲ್ಲಿ ಇವರು ಒಬ್ಬರಾಗಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

ಸದ್ಯ ಸುದೀಪ್ ಅವರ ‘ವಿಕ್ರಾಂತ ರೋಣ’ ಸಿನಿಮಾ ರಿಲೀಸ್ ಗೆ ರೆಡಿ ಇದೆ. ಮೊನ್ನೆಯಷ್ಟೇ ರಿಲೀಸ್ ಆದ ಚಿತ್ರದ ಟೀಸರ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಕೂಡ ನಿರೀಕ್ಷೆ ಹುಟ್ಟು ಹಾಕಿದೆ. ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನ್ ಚಿತ್ರತಂಡದ್ದು.

Share This Article
Leave a Comment

Leave a Reply

Your email address will not be published. Required fields are marked *