ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಲಾರಿ (Lorry) ಎರಡು ತುಂಡಾದ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ರಟ್ಟಿಹಳ್ಳಿ (Rattihalli) ತಾಲ್ಲೂಕಿನ ಹಳ್ಳೂರು ಗ್ರಾಮದ ಬಳಿ ಕಬ್ಬಿಣ ತುಂಬಿದ ಡಿಕ್ಕಿಯ ರಭಸಕ್ಕೆ ಲಾರಿ ಎರಡು ಭಾಗವಾಗಿದೆ. ಎಂಜಿನ್ ಒಂದು ಕಡೆ, ಲಾರಿಯ ಹಿಂಭಾಗ ಇನ್ನೊಂದು ಕಡೆಯಾಗಿದೆ. ಲಾರಿ ಚಾಲಕ ಪ್ರಾಣಾಪಾಯಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಪ್ರೀತಿಗೆ ಮನೆಯವರ ವಿರೋಧ – ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನ; ಯುವತಿ ಸಾವು, ಯುವಕ ಪಾರು
ಲಾರಿಯು ಕಬ್ಬಿಣವನ್ನ ತುಂಬಿಕೊಂಡು ಹೊನ್ನಾಳಿ ಕಡೆ ಹೊರಟ್ಟಿತ್ತು. ಆ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ರಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.