ಸಾಹಿತಿಗಳಿಗೆ ಭದ್ರತೆ ನೀಡಲು ಡಿಜಿಪಿಗೆ ಸೂಚನೆ ನೀಡಲಾಗಿದೆ: ಪರಮೇಶ್ವರ್

Public TV
1 Min Read

ಬೆಂಗಳೂರು: ಬೆದರಿಕೆಗೆ ಒಳಗಾಗಿರೋ ಸಾಹಿತಿಗಳಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಲು ಕಮಿಷನರ್, ಡಿಜಿಪಿ ಅವರಿಗೆ ಸೂಚನೆ ಕೊಡಲಾಗಿದೆ ಅಂತ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

ಸಾಹಿತಿಗಳಿಗೆ ಬೆದರಿಕೆ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಾಹಿತಿಗಳು ನನಗೆ ಸಮಯ ಕೇಳಿದ್ದಾರೆ. ಅವರಿಗೆ ಇಂದು ಸಮಯ ನೀಡಿದ್ದೇನೆ. ಈಗಾಗಲೇ ಅವರಿಗೆ ಭದ್ರತೆ ನೀಡಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ಕೊಟ್ಟಿರೋ ಪತ್ರ ಡಿಜಿಗೆ ಕಳಿಸಿಕೊಡ್ತಿದ್ದೇನೆ ಎಂದರು.

ನಮಗೆ ಬಹಳ ಕಹಿ ನೆನಪು ಇದೆ. ಕಲ್ಬುರ್ಗಿ ಅವರ ಕೇಸ್ ನಮ್ಮ ಮುಂದೆ ಇದೆ. ಗೌರಿ ಲಂಕೇಶ್ (Gauri Lankesh) ಹತ್ಯೆ ಆಗಿದ್ದು ನಾವು ಮರೆತಿಲ್ಲ. ಇಂತಹ ಸಮಯದಲ್ಲಿ ಸಾಹಿತಿಗಳಿಗೆ ಬೆದರಿಕೆ ಬಂದಿದೆ. ನಾವು ಇದನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ಕಮಿಷನರ್ ಮತ್ತು ಡಿಜಿ ಅವರಿಗೆ ರಕ್ಷಣೆ ಕೊಡಲು ಸೂಚನೆ ಕೊಡ್ತಿದ್ದೇನೆ. ಬಹಳ ಗಂಭೀರವಾಗಿ ಈ ಪ್ರಕರಣ ತೆಗೆದುಕೊಳ್ತೀವಿ ಎಂದರು. ಇದನ್ನೂ ಓದಿ: ನಾನು ಯಾವುದೇ ಕಾರಣಕ್ಕೂ ಮಂತ್ರಿ ಸ್ಥಾನ ತ್ಯಾಗ ಮಾಡಲ್ಲ: ಪರಮೇಶ್ವರ್

ಯಾರು ಬೆದರಿಕೆ ಹಾಕಿದ್ದಾರೆ ಗೊತ್ತಿಲ್ಲ. ಅವರು ಭೇಟಿ ಮಾಡಿದ ಮೇಲೆ ಯಾರು ಅಂತ ಗೊತ್ತಾಗಲಿದೆ. ಯಾರು ಅಂತ ಮಾಹಿತಿ ಪಡೆದು ಸೂಕ್ತ ಕ್ರಮ ತೆಗೆದುಕೊಳ್ತೀವಿ ಎಂದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್