ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ

Public TV
2 Min Read

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹು ನಿರೀಕ್ಷಿತ ಚಿತ್ರ ʻದಿ ಡೆವಿಲ್‌ʼ (The Devil) ಸಿನಿಮಾ ಮೋಷನ್‌ ಪೋಸ್ಟರ್‌ (Motion Poster) ರಿಲೀಸ್‌ ಆಗಿದೆ. ಅತ್ತ ಥಾಯ್ಲೆಂಡ್‌ನಲ್ಲಿ ಶೂಟಿಂಗ್‌ ಕಂಪ್ಲೀಟ್‌ ಮಾಡಲು ದರ್ಶನ್‌ ಬೀಡು ಬಿಟ್ಟಿರುವ ಹೊತ್ತಿನಲ್ಲೇ ಚಿತ್ರತಂಡ ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಿದೆ. ಇದರ ವಿಡಿಯೋ ತುಣುಕನ್ನು ನಟ ದರ್ಶನ್‌ (Darshan) ತಮ್ಮ ಸೋಷಿಯಲ್‌ ಮೀಡಿಯಾ ಖಾತೆಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಕಾತರಕ್ಕೆ ತೆರೆ ಎಳೆದಿದ್ದಾರೆ.

ಫೇಸ್‌ಬುಕ್‌ ಖಾತೆಯಲ್ಲಿ ಮೋಷನ್‌ ಪೋಸ್ಟರ್‌ನ 1:05 ನಿಮಿಷದ ವಿಡಿಯೋ ಹಂಚಿಕೊಂಡಿರುವ ದರ್ಶನ್, ನಲ್ಮೆಯ ಸೆಲಬ್ರಿಟಿಗಳಿಗೆ ವಿಶೇಷ ಸಂದೇಶವೊಂದನ್ನೂ ನೀಡಿದ್ದಾರೆ. ನಲ್ಮೆಯ ಸೆಲಬ್ರಿಟಿಗಳಿಗೆ… ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ. ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಈ ಮೋಷನ್‌ ಪೋಸ್ಟರ್‌ನಲ್ಲಿ ದರ್ಶನ್‌ ಖದರ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದನ್ನೂ ಓದಿ: ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ

ಅಲ್ಲದೇ ಅತ್ತಿಬೆಲೆ ಅಭಿಮಾನಿಗಳ ಸಮ್ಮುಖದಲ್ಲಿಯೂ ಕೂಡಾ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇನ್ನೂ ದಚ್ಚು ವಿಡಿಯೋ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಸಾವಿರಾರು ಡಿಬಾಸ್‌ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ʻಲವ್‌ ಯು ಡಿಬಾಸ್‌, ಜೈ ಡಿಬಾಸ್‌ʼ ಅಂತೆಲ್ಲ ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ರಾಮ-ಲಕ್ಷ್ಮಣರ ಜೊತೆ `ರಾಮಾಯಣ’ ಸೃಷ್ಟಿಕರ್ತ!

‘ಚಾಲೆಂಜಿಂಗ್ ಸ್ಟಾರ್‌’ ದರ್ಶನ್ ತೂಗುದೀಪ ಅವರು ಕೋರ್ಟ್‌ನಿಂದ ವಿದೇಶ ಪ್ರಯಾಣ ಅವಕಾಶ ಪಡೆದುಕೊಂಡಿದ್ದು, ಈಗಾಗಲೇ ಥೈಲ್ಯಾಂಡ್‌ನಲ್ಲಿ ಅವರು ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ, ಜೊತೆಗೆ ಥಾಯ್ಲೆಂಡ್‌ ಟ್ರಿಪ್‌ನಲ್ಲೂ ಬ್ಯುಸಿ ಆಗಿದ್ದಾರೆ. ಹೌದು, ‘ದಿ ಡೆವಿಲ್’ ಸಿನಿಮಾದ ಒಂದಷ್ಟು ಭಾಗದ ಚಿತ್ರೀಕರಣ ಥೈಲ್ಯಾಂಡ್‌ನಲ್ಲಿ ನಡೆಯಬೇಕಿದ್ದು, ಅದಕ್ಕಾಗಿ ಚಿತ್ರತಂಡ ಅಲ್ಲಿಗೆ ಪ್ರಯಾಣ ಬೆಳೆಸಿದ್ದು, ಶೂಟಿಂಗ್ ಕೂಡ ಆರಂಭಿಸಿದೆ. ಈ ಮಧ್ಯೆ ಥೈಲ್ಯಾಂಡ್‌ನಲ್ಲಿ ದರ್ಶನ್ ಅವರು ಇರುವ ಫೋಟೋಗಳು ವೈರಲ್ ಆಗಿವೆ. ಇದನ್ನೂ ಓದಿ: ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ

ಇನ್ನು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಅಪ್‌ಡೇಟ್ ನೋಡುವುದಾದ್ರೆ, ಈ ಕೇಸ್‌ನಲ್ಲಿ ನಟ ದರ್ಶನ್‌ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ ತೀರ್ಪಿನ ಬಗ್ಗೆ ಜುಲೈ 17ರಂದು ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನ ಗುರುವಾರ (ಜುಲೈ 17) ನಡೆಸಿದ ನ್ಯಾ.ಜೆ.ಬಿ ಪಾರ್ದೀವಾಲಾ ಮತ್ತು ನ್ಯಾ. ಆರ್‌. ಮಹಾದೇವನ್‌ ಅವರಿದ್ದ ಪೀಠವು, ʻಜಾಮೀನು ನೀಡುವ ಹೈಕೋರ್ಟ್‌ ಬಳಸಿದ ವಿವೇಚನೆ ಏನೆಂಬುದೇ ಮನದಟ್ಟಾಗುತ್ತಿಲ್ಲʼ ಎಂದು ಹೇಳಿದೆ. ಸದ್ಯ ಈ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಲಾಗಿದೆ. ಅಂದೇ ದರ್ಶನ್‌, ಪವಿತ್ರಾಗೌಡ ಸೇರಿ ಇತರ ಆರೋಪಿಗಳ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಇನ್ನೂ ‘ಡೆವಿಲ್’ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ರಾಜಸ್ಥಾನದ ಉದಯ್‌ಪುರದಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ದರ್ಶನ್ ಮಿಂಚಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಪಾತ್ರದಲ್ಲಿ ಕೂಡ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಅಕ್ಟೋಬರ್ ಕೊನೇ ವಾರದಲ್ಲಿ ‘ಡೆವಿಲ್’ ಸಿನಿಮಾ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ. ಇದನ್ನೂ ಓದಿ: ಬೀಚ್‌ನಲ್ಲಿ ಡೀಪ್‌ ಕಿಸ್‌ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

Share This Article