ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಬಿದ್ದಿಲ್ಲ ಯಾಕೆ – ಉತ್ತರ ನೀಡಿದ ಮಹದೇವಪ್ಪ

1 Min Read

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಅಡಿ ವಿದ್ಯಾರ್ಥಿ ವೇತನ(Scholarship), ಸಹಾಯಧನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಮತ್ತು ತಡ ಮಾಡುವುದಿಲ್ಲ ಎಂದು ಸಚಿವ ಮಹದೇವಪ್ಪ (Mahadevappa) ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಅವರು, ಕಳೆದ 2 ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಸಹಾಯಧನ ಸಿಗುತ್ತಿಲ್ಲ. ಗುರಿಯಲ್ಲಿ 75% ಇದ್ದರೂ 100% ಗುರಿ ತಲುಪಲಾಗಿದೆ ಅಂತ ಸಚಿವರು ಹೇಳುತ್ತಿದ್ದರೂ ಸಹಾಯಧನ ವಿದ್ಯಾರ್ಥಿಗಳಿಗೆ ಸಿಗದೇ ಸಮಸ್ಯೆ ಆಗುತ್ತಿದೆ. ಸಹಾಯ ಧನ ಮತ್ತು ವಿದ್ಯಾರ್ಥಿ ವೇತನ  ಕಡಿಮೆ ಆಗುತ್ತಿದೆ. ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

 

 ಮಹದೇವಪ್ಪ ಉತ್ತರ ನೀಡಿ, ಸಮಾಜ ಕಲ್ಯಾಣ ಇಲಾಖೆ ಅಡಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ, ವಿದ್ಯಾರ್ಥಿ ವೇತನ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ತಡ ಮಾಡುವುದು ಇಲ್ಲ. ನಿಯಮದ ಪ್ರಕಾರವೇ ಸಹಾಯಧನ ನೀಡಲಾಗುತ್ತದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೆಬ್ ಕ್ಯಾಸ್ಟಿಂಗ್ ಮೂಲಕ ನಡೆದಿದ್ದರಿಂದ ಕಡಿಮೆ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆಯೇ ಹೊರತು ಸಹಾಯಧನ ಕಡಿಮೆ ಮಾಡಿಲ್ಲ ಎಂದರು.

ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಹಣ ಹಾಕಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೂ ಅಕೌಂಟ್ ಬಿಟ್ಟು ಬೇರೆ ಅವಕಾಶ ಹಣ ಕೊಡಲು ಅವಕಾಶ ಕೊಡಿ ಅಂತ ಮನವಿ ಮಾಡಿದ್ದೇವೆ. ಅದರೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಹೀಗಾಗಿ ಕೆಲ ವಿದ್ಯಾರ್ಥಿಗಳಿಗೆ ಖಾತೆ ಇಲ್ಲದ ಕಾರಣ ಸಹಾಯಧನ ವಿಳಂಬವಾಗಿದೆ ಅಷ್ಟೇ ಎಂದು ಉತ್ತರಿಸಿದರು.

Share This Article