ರಾಯಚೂರು: ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ.
ಯಾದಗಿರಿಯ ಶಹಪುರದ ತಾಲೂಕಿನ ಹಳಕಲ್ ಗ್ರಾಮದ 63 ವರ್ಷದ ಶಿವರಾಯ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ. ರಾಹುಲ್ ಗಾಂಧಿ ಕಾರ್ಯಕ್ರಮ ಹಿನ್ನೆಲೆ ಟ್ರಾಫಿಕ್ ನಿಯಂತ್ರಿಸಲು ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಸುಮಾರು ದೂರ ನಡೆದುಕೊಂಡೆ ಸಮಾವೇಶಕ್ಕೆ ಬಂದಿದ್ದ ಶಿವರಾಯ್ ರಾಹುಲ್ ಗಾಂಧಿ ಭಾಷಣ ಮಾಡುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಮಾವೇಶ ಮುಗಿದ ಬಳಿಕ ಮೃತ ದೇಹವನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಅಷ್ಟು ದೊಡ್ಡ ಸಮಾವೇಶದಲ್ಲಿ ಯಾರೋಬ್ಬರು ವೃದ್ದನ ಸಹಾಯಕ್ಕೆ ತೆರಳದಿರುವುದು ವಿಪರ್ಯಾಸ.