ಹೂಡಿಕೆ ಮಾಡಿದ್ರೆ ಡಬಲ್ ಕೊಡೋದಾಗಿ ನಂಬಿಸಿ ಹಣದೊಂದಿಗೆ ದಂಪತಿ ಎಸ್ಕೇಪ್

Public TV
1 Min Read

ನೆಲಮಂಗಲ: ಹಣ (Money) ಹೂಡಿಕೆ ಮಾಡಿದ್ರೆ ಡಬಲ್ ಕೊಡುವುದಾಗಿ ನಂಬಿಸಿ ಕೋಟಿ ಕೋಟಿ ಹಣದೊಂದಿಗೆ ದಂಪತಿ (Couple) ಎಸ್ಕೇಪ್ ಆಗಿರುವ ಘಟನೆ ನೆಲಮಂಗಲ (Nelamangala) ಬಳಿಯ ಮಾದನಾಯಕನಹಳ್ಳಿಯಲ್ಲಿ (Madanayakanahalli) ನಡೆದಿದೆ.

ಪತಿ ಮುರಳಿ ಹಾಗೂ ಪತ್ನಿ ಕಲ್ಪನಾ ಕೋಟಿ ಕೋಟಿ ವಂಚಿಸಿ (Cheat) ಪರಾರಿಯಾಗಿರುವ ದಂಪತಿ. ಬರೋಬ್ಬರಿ ಎರಡು ಕೋಟಿಗೂ ಅಧಿಕ ಹಣದೊಂದಿಗೆ ದಂಪತಿ ಎಸ್ಕೇಪ್ ಆಗಿದ್ದಾರೆ. ರಾತ್ರೋರಾತ್ರಿ ಬಾಡಿಗೆ ಮನೆಗೆ ಬೀಗ ಹಾಕಿ ಹಣದೊಂದಿಗೆ ಐನಾತಿ ದಂಪತಿ ನಾಪತ್ತೆಯಾಗಿದ್ದಾರೆ. ಹಣ ಹೂಡಿಕೆ ಮಾಡಿದರೆ ಡಬಲ್ ಕೊಡುವುದಾಗಿ ದಂಪತಿ ಜನರಿಗೆ ನಂಬಿಸಿದ್ದಾರೆ. ಇದೀಗ ಹಣದೊಂದಿಗೆ ದಂಪತಿ ಪರಾರಿಯಾಗಿದ್ದು, ಮಕ್ಕಳ ವಿದ್ಯಾಭ್ಯಾಸ, ಮದುವೆ, ಸೈಟ್ ಮನೆಕಟ್ಟಲು ಕೂಡಿಟ್ಟ ಹಣ ಕಳೆದುಕೊಂಡು ಜನರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕನಕಪುರ ಪೊಲೀಸರ ಕಾರ್ಯಾಚರಣೆ – ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ

ದಂಪತಿ ತಂಗಿದ್ದ ಬಾಡಿಗೆ ಮನೆಯ ಬಳಿ ಮೋಸಹೋದ ಜನರು ಜಮಾಯಿಸಿದ್ದು, ಕಣ್ಣೀರಿಡುತ್ತ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಇತ್ತ ಹಣವೂ ಇಲ್ಲದೇ, ದಂಪತಿಯೂ ನಾಪತ್ತೆಯಾಗಿದ್ದರಿಂದ ನೊಂದ ಜನರು ಪೊಲೀಸರ ಮೊರೆಹೋಗಿದ್ದಾರೆ. ಮಹಿಳೆಯರು, ವೃದ್ಧರು, ಅಂಗವಿಕಲರಿಗೂ ಈ ದಂಪತಿ ಮೋಸ ಮಾಡಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್

Share This Article