ಬಾಂಗ್ಲಾದಲ್ಲಿ ಮಾತ್ರ ಅಲ್ಲ ನಮ್ಮ ದೇಶದಲ್ಲೂ ಹಿಂದೂಗಳ ಸ್ಥಿತಿ ಹೀನಾಯ: ವಿಶ್ವಪ್ರಸನ್ನ ತೀರ್ಥ ಶ್ರೀ

1 Min Read

ದಾವಣಗೆರೆ: ಬಾಂಗ್ಲಾದಲ್ಲಿ (Bangladesh) ಅಷ್ಟೇ ಅಲ್ಲ ನಮ್ಮ ದೇಶದಲ್ಲೂ ಕೂಡ ಹಿಂದೂಗಳ (Hindu) ಪರಿಸ್ಥಿತಿ ಹೀನಾಯವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನಾ ತೀರ್ಥ ಶ್ರೀಗಳು (Vishwaprasanna Tirtha Swamiji) ಹೇಳಿದ್ದಾರೆ.

ದಾವಣಗೆರೆಯಲ್ಲಿ (Davanagere) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದರು. ಇದರ ಬಗ್ಗೆ ಕೇಂದ್ರ ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು. ಹಿಂದೂಗಳ ಹೀನಾಯ ಸ್ಥಿತಿಯಲ್ಲಿ ಇರೋದು ಕೇವಲ ಬಾಂಗ್ಲಾದಲ್ಲಿ ಅಷ್ಟೇ ಅಲ್ಲ. ನಮ್ಮ ಭಾರತದಲ್ಲಿ ಕೂಡ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ ನಿಲ್ಲಿಸಲು ಕ್ರಮವಹಿಸಿ: ಮೋದಿಗೆ ಪೇಜಾವರ ಶ್ರೀ ಪತ್ರ

ಗೋ ಹತ್ಯೆ ನಿಷೇಧದ ಬಗ್ಗೆ ಸರ್ಕಾರ ಕೆಲಸ ಮಾಡಬೇಕು. ಅದರ ಜೊತೆ ನಾವುಗಳು ಕೂಡ ಕೈಜೋಡಿಸಬೇಕು. ಜಿಲ್ಲೆ ಜಿಲ್ಲೆಗಳಿಗೊಂದು ಗೋ ಶಾಲೆಗಳನ್ನು ನಿರ್ಮಾಣ ಮಾಡಬೇಕಿದೆ. ಗೋವುಗಳಿಗೆ ಮೀಸಲಿಟ್ಟ ಗೋಮಾಳಗಳನ್ನು ಈ ಕೆಲಸಕ್ಕೆ ಮಾತ್ರ ಬಳಕೆಯಾಗುವಂತೆ ನೋಡಬೇಕು. ಈಗ ಆ ಗೋಮಾಳಗಳನ್ನು ಗೋವುಗಳ ಕಾರ್ಯಕ್ಕೆ ಬಿಟ್ಟು ಬೇರೆ ಬೇರೆ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಆರ್‍ಎಸ್‍ಎಸ್ ರಾಷ್ಟ್ರ ರಕ್ಷಣೆಯ ಕೆಲಸ ಮಾಡುತ್ತಿದೆ. ಅಂತಹ ಸಂಸ್ಥೆಯನ್ನು ಬ್ಯಾನ್‌ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಪರೋಕ್ಷವಾಗಿ ಪ್ರೀಯಾಂಕ್ ಖರ್ಗೆ ಅವರಿಗೆ ಕಿವಿಮಾತು ಹೇಳಿದರು. ಅಲ್ಲದೆ ದಾವಣಗೆರೆಯಲ್ಲಿ ವೇದಾ ಅದ್ಯಯನ ಕೇಂದ್ರಕ್ಕೆ ಸೂಕ್ತ ಸ್ಥಳ ಸಿಕ್ಕ ನಂತರ ಆರಂಭ ಮಾಡಬೇಕಿದೆ. ಆದರೆ ಜಾಗ ಸಿಗುವುದೇ ನಮ್ಮಂತವರಿಗೆ ಕಷ್ಟವಾಗಿದೆ. ಸಿಕ್ಕರೆ ಅದರ ಜೊತೆ ಬೇರೆ ಬೇರೆ ಯೋಜನೆಗಳು ಕೂಡ ಇವೆ ಎಂದರು. ಇದನ್ನೂ ಓದಿ: ಸೈನಿಕರ ಸುರಕ್ಷೆಗೆ ಉಡುಪಿ ಪೇಜಾವರ ಶ್ರೀ ಮಾರ್ಗದರ್ಶನದಲ್ಲಿ ಸುದರ್ಶನ ಯಾಗ

Share This Article